ಕೆಸಿಸಿ ಬ್ಯಾಂಕ್ ನೂತನ ನಿರ್ದೇಶಕರ ಸನ್ಮಾನ ಸಮಾರಂಭ
ಶಿಗ್ಗಾವಿ 06: ಪಟ್ಟಣದಲ್ಲಿ ಕೆಸಿಸಿ ಬ್ಯಾಂಕ್ ಶಾಖೆಯನ್ನು ಸ್ವಂತ ಕಟ್ಟಡವನ್ನು ಹೊಂದಲು ಸ್ಥಳಿಯ ಎಪಿಎಂಸಿಯಲ್ಲಿ ನಾನು ಅದ್ಯಕ್ಷ ಇದ್ದಾಗ ಜಾಗೆಯನ್ಮ್ನ ನೀಡಿದ್ದು ಇದರಿಂದ ಬ್ಯಾಂಕ್ ಶಾಖೆಗೆ ಹಾಗೂ ರೈತರಿಗೆ ಅನುಕುಲವಾಗಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ತಿಪ್ಪಣ್ಣಾ ಸಾತಣ್ಣವರ ಹೇಳಿದರು.
ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಸಂಯುಕ್ತಾಶ್ರಯದಲ್ಲಿ ಜರುಗಿದ ಕೆಸಿಸಿ ಬ್ಯಾಂಕ್ ನೂತನ ನಿರ್ದೇಶಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು ಅಂದು ಕೆಸಿಸಿ ಬ್ಯಾಂಕ್ ಶಾಖೆ ಕಟ್ಟಡವನ್ನು ನೀಡಲು ಎಪಿಎಂಸಿ ಸಮಿತಿಯಿಂದ ಜಾಗೆ ನೀಡಿದ್ದರಿಂದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರು ಅನುದಾನವನ್ನು ನೀಡಿದ ಫಲವಾಗಿ ಇಂದು ಬಾಡಿಗೆ ಕಟ್ಟಡದಲ್ಲಿದ್ದ ಕೆಸಿಸಿ ಬ್ಯಾಂಕ ಇಂದು ಸ್ವಂತ ಕ್ಪಟ್ಟಡದಲ್ಲಿ ಇರಲು ಸಾದ್ಯವಾಗಿದೆ ಎಂದು ಹೇಳಿದರು.
ಧಾರವಾಡ ಕೆಸಿಸಿ ಬ್ಯಾಂಕ್ ನೂತನ ನಿರ್ದೇಶಕ ಸಂಗಮೇಶ ಕಂಬಾಳಿಮಠ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದವರು ನಮ್ಮ ಗ್ರಾಮದಿಂದ ನನಗೆ ಮತವನ್ನು ಹಾಕುವದರ ಜೊತೆಗೆ ನನ್ನ ಮೇಲೆ ಇಟ್ಟಂತಹ ಪ್ರೀತಿ ವಿಶ್ವಾಸಕ್ಕೆ ಎಂದಿಗೂ ಚ್ಯುತಿ ಬಾರದಂಗೆ ಕಾರ್ಯನಿರ್ವಹಿಸುವದರ ಜೊತೆಗೆ ಸರಕಾರದ ಯೋಜನೆಯನ್ನು ತಮಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನವನ್ನ ಮಾಡುವದಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನ ಬಸನಗೌಡ ಪಾಟೀಲವಹಿಸಿದ್ದರು. ಇದೆ ಸಂದರ್ಭದಲ್ಲಿ ವಿವಿಧ ಗಣ್ಯರನ್ನ ಸನ್ಮಾನಿಸಿ ಗೌರವಿಸಲಾಯಿತು.
ಗ್ರಾ.ಪಂ ಉಪಾಧ್ಯಕ್ಷ ಪಕ್ಕೀರಯ್ಯ ಹಿರೇವ್ಮಠ ಅಬ್ದುಲ್ಸಾಬ ಕಳಸಗೇರಿ, ಅರ್ಜುನಪ್ಪ ಸಂದಿಮನಿ, ಚನ್ನಪ್ಪ ಕುಂದಗೋಳ, ಫಯಾಜ ಸವಣೂರ, ಖಾಶೀಂಸಾಬ ಪಠಾಣ, ರಮೇಶ ಸಾತಣ್ಣವರ, ಗುರ್ಪ ಶೆಟ್ಟರ, ಭರವ್ಮಜ್ಜ ದ್ಯಾವಣ್ಣವರ, ಬಸಪ್ಪ ಮಲ್ಲೂರ, ಕೃಷ್ಣಪ್ಪ ಬಡಿಗೇರ, ನಾಗಪ್ಪ ಅದೃಶಪ್ಪನವರ, ಚೆನ್ನಬಸಪ್ಪ ಹಡಪದ, ಬಸವರಾಜ ಬಾರ್ಕಿ,ಮಾಬೂಸಾಬ ದಿವಾನದಾರ, ಚಿದಾನಂದ ಶಿಗ್ಗಾವಿ, ನೀಲಪ್ಪ ತಳವಾರ, ವಿರುಪಾಕ್ಷಪ್ಪ ನೇಕಾರ, ಸೋಮವ್ವ ಪೋಲಿಸ್ಪಾಟೀಲ, ಯಲ್ಲವ್ವ ಹಡಪದ, ಸಂಘದ ಕಾರ್ಯನಿರ್ವಾಹಕರು, ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಪಧಾಧಿಕಾರಿಗಳು ಯುವಕರು ಕಾರ್ಯಕ್ರಮದಲ್ಲಿದ್ದರು.