ಕಪಿಲ್ ದೇವ್ ಗೆ ಹೃದಯಾಘಾತ: ಆಂಜಿಯೋ ಪ್ಲ್ಯಾಸ್ಟಿ ಚಿಕಿತ್ಸೆ
ನವದೆಹಲಿ, ಆ 23 : ಪ್ರಸಿದ್ಧ ಕ್ರಿಕೆಟಿಗ ಮತ್ತು ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರಿಗೆ ಭಾರಿ ಹೃದಯಾಘಾತವಾಗಿದೆ ಶುಕ್ರವಾರ ತೀವ್ರ ಎದೆನೋವಿನಿಂದ ಬಳಲಿದ ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಿದ್ದು, ಆಂಜಿಯೋ-ಪ್ಲ್ಯಾಸ್ಟಿ ಮಾಡಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಅವರ ಆರೋಗ್ಯದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ತಕ್ಷಣಕ್ಕೆ ಲಭ್ಯವಾಗಿಲ್ಲ.ಹರಿಯಾಣ ಮೂಲದ ಕಪಿಲ್ ದೇವ್, 1983 ರ ವಿಶ್ವಕಪ್ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಟ್ರೋಫಿ ಎತ್ತಿಹಿಡಿಯುವ ಮೂಲಕ ಭಾರತದ ಕೀರ್ತೀ ಪತಾಕೆಯನ್ನು ವಿಶ್ವದಲ್ಲಿ ಮೆರೆಸಿದ್ದರು. ಅವರ ಹೃದಯಾಘಾತದ ಸುದ್ದಿ ಹರಡುತ್ತಿದ್ದಂತೆ ಸಾಮಾಜಿಕ ಜಾಲತಾಣಗಳು '' ಶೀಘ್ರವಾಗಿ ಗುಣಮುಖರಾಗಿ ''ಎಂಬ ಸಂದೇಶಗಳಿಂದ ತುಂಬಿ ತುಳುಕುತ್ತಿವೆ.