ರಾಷ್ಟ್ರೀಯ

ಜೈಲಿಗೆ ಹೋಗಲು ಸಿದ್ಧ : ಕಂಗನಾ

ಜೈಲಿಗೆ ಹೋಗಲು ಸಿದ್ಧ : ಕಂಗನಾ

ಮುಂಬೈ, ಅ 23 :ಬಾಲಿವುಡ್ ನಟಿ ಕಂಗನಾ ರನೌತ್ ಹಾಗೂ ಆಕೆಯ ಸಹೋದರಿ ರಂಗೋಲಿ ವಿರುದ್ಧ ಮುಂಬೈನ ಅಂಧೇರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮತ್ತೊಂದು ದೇಶದ್ರೋಹ ಪ್ರಕರಣ ದಾಖಲಾಗಿದೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ಕಂಗನಾ ಜೈಲಿಗೆ ಹೋಗಲು ಕಾಯುತ್ತಿರುವುದಾಗಿ ಹೇಳಿದ್ದಾರೆ.ಗುರುವಾರ ವಕೀಲ ಅಲಿ ಕಾಶಿಫ್ ದೇಶ್ ಮುಖ್, ಕಂಗನಾ ಸಹೋದರಿಯರ ವಿರುದ್ಧ ಧಾರ್ಮಿಕ ವಿಷಯವಾಗಿ ಸಮುದಾಯಗಳ ನಡುವೆ ಕಲಹ, ದ್ವೇಷ ಹುಟ್ಟುಹಾಕುವುದು ಮತ್ತು ನ್ಯಾಯಾಂಗವನ್ನು ಅಪಹಾಸ್ಯ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. 

ಬಾಂದ್ರಾ ಕೋರ್ಟ್ ಎಫ್ ಐ ಆರ್ ದಾಖಲಿಸಲು ಆದೇಶ ನೀಡಿದ್ರೆ, ಪಪ್ಪು ಸೇನಾ ಪದ ಬಳಸುವ ಮೂಲಕ ನ್ಯಾಯಾಲಯದ ವಿರುದ್ಧ ನಿಂದನಾತ್ಮಕ ಟ್ವೀಟ್ ಮಾಡಿದ್ದಾರೆ ಎಂದು ದೂರಿದ್ದಾರೆ. ಈ ಹಿಂದೆ ಕಂಗನಾ ಮತ್ತು ಸಹೋದರಿ ರಂಗೋಲಿ ಮಾಡಿರುವ ಟ್ವೀಟ್ ಗಳನ್ನು ಸಹ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

 ಕಳೆದ ವಾರ ಮುಂಬೈನ ಬಾಂದ್ರಾದಲ್ಲಿ ದಾಖಲಾದ ಎಫ್ ಐ ಆರ್ ಬಳಿಕ ಕಂಗನಾ ವಿರುದ್ಧ ದಾಖಲಾಗುತ್ತಿರುವ ಎರಡನೇ ದೂರು ಇದಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಆಕೆ, ಮಹಾರಾಷ್ಟ್ರ ಸರ್ಕಾರ ತನ್ನನ್ನು ಜೈಲಿಗೆ ಕಳುಹಿಸಲು ನಿರ್ಧರಿಸಿದೆ.  "ನಾನು ಸಾವರ್ಕರ್, ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಝಾನ್ಸಿ ರಾಣಿಯಂತಹ ಜನರನ್ನು ಪೂಜಿಸುತ್ತೇನೆ. ಆದರೆ ಇಂದು ಸರ್ಕಾರ ನನ್ನನ್ನು ಜೈಲಿಗೆ ಕಳುಹಿಸಲು ಪ್ರಯತ್ನಿಸುತ್ತಿದೆ. ಅದು ನನ್ನ ಆಯ್ಕೆಗಳ ಬಗ್ಗೆ ನನಗೆ ವಿಶ್ವಾಸವಿದೆ. ಶೀಘ್ರದಲ್ಲೇ ಜೈಲಿನಲ್ಲಿ ಇರಲು ಕಾಯುತ್ತಿದ್ದೇನೆ. ಇದು ನನ್ನ ಜೀವನಕ್ಕೆ ಒಂದು ಅರ್ಥವನ್ನು ನೀಡುತ್ತಿದೆ. ಜೈ ಹಿಂದ್" ಎಂದು ಬರೆದುಕೊಂಡಿದ್ದಾರೆ.

 

 

ಸುದ್ದಿ ಓದಿ