ನ್ಯಾ. ನಾಗಮೋಹನದಾಸ ಆಯೋಗದ ವರದಿ ತಿರಸ್ಕರಿಸಿ, ದಸಸಂ ಮನವಿ
ಕಾಗವಾಡ 23: ತಾಲೂಕಾ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಸಂಬಂಧಿತ ನ್ಯಾಯಮೂರ್ತಿ ನಾಗಮೋಹನದಾಸ ಆಯೋಗದ ವರದಿಯನ್ನು ತಿರಸ್ಕರಿಸಬೇಕೆಂದು ಆಗ್ರಹಿಸಿ, ಸೋಮವಾರ ದಿ. 23 ರಂದು ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ, ಆಗ್ರಹಿಸಲಾಯಿತು.
ದಲಿತ ಮುಖಂಡ ಸಂಜಯ ತಳವಳಕರ ಮಾತನಾಡಿ, ಇತ್ತೀಚಿಗೆ ಸರ್ಕಾರವು ಪರಿಶಿಷ್ಟ ಜಾತಿಯಲ್ಲಿ ಸಂಖ್ಯೆಗೆ ಅನುಗುಣವಾಗಿ ಜಾತಿ ಜನಗಣತಿ ಮಾಡಿ, ವರ್ಗಿಕರಣನ್ವಯ ಒಳ ಮೀಸಲಾತಿಗಾಗಿ ನ್ಯಾ. ನಾಗಮೋಹನದಾಸ ಆಯೋಗದ ಪ್ರವರ್ಗ ಎ, ಪವರ್ಗ ಬಿ, ಪ್ರವರ್ಗ ಸಿ. ಎಂದು 17ಅ ಮೀಸಲಾತಿ ಅನ್ವಯ 6:6:4:1 ಮೀಸಲಾತಿ ವರ್ಗೀಕರಿಸಿ ಕಲ್ಪಿಸುವ ಶಿಫಾರಸ್ಸಿಗೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಸಹ ಸರ್ಕಾರ ಅದನ್ನು ಜಾರಿಗೊಳಿಸುವ ಹುನ್ನಾರ ನಡೆಸುತ್ತಿದ್ದು,
ರಾಜ್ಯ ಸರ್ಕಾರದ ಈ ಧೋರಣೆಯನ್ನು ನಾವು ಖಂಡಿಸುತ್ತೇವೆ ಎಂದರು. ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ರೊಸ್ಟರ್ ಬಿಂದು ಪ್ರಕಾರ ಭಾರಿ ಅನ್ಯಾಯವಾಗುತ್ತಿದ್ದು, ಈ ಸಮಸ್ಯೆ ಪರಿಹಾರವಾಗಬೇಕಾದರೆ ಸರ್ಕಾರಕ್ಕೆ ಒದಗಿಸಿರುವ ಅವೈಜ್ಞಾನಿಕ ವರದಿಯಾದ ನ್ಯಾ.ನಾಗಮೋಹನದಾಸ ವರದಿಯನ್ನು ಸರ್ಕಾರ ಕೂಡಲೇ ತಿರಸ್ಕರಿಸಬೇಕು. ಇಲ್ಲದಿದ್ದರೆ ಎಲ್ಲ ಬಲಗೈ ಸಮುದಾಯಗಳು ಸೇರಿ ಸರ್ಕಾರದ ವಿರುದ್ಧಉಗ್ರ ಹೋರಾಟ ಮಾಡಲಾಗುವದು. ಈಗಾಗಲೇ ಮಾ. 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಂಡಿರುವ ಬೃಹತ ಪ್ರತಿಭಟನೆಯಲ್ಲಿ ಬಲಗೈ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಅನೇಕ ದಲಿತ ಮುಖಂಡರು ಮಾತನಾಡಿ ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿಯ ಸಂಚಾಲಕ ಸಚಿನ್ ಪೂಜಾರಿ, ಮಚೆಂದ್ರ ಖಾಂಡೇಕರ, ರವಿ ಕುರಣಿ, ಜಯಪಾಲ ಬಡಿಗೇರ, ವಿಜಯ ಅಸೋದೆ, ರವಿ ಕಾಂಬಳೆ, ಉದಯ ಖೋಡೆ, ಮೀರಾಸಾಬ ಕಾಂಬಳೆ, ದಯಾನಂದ ಕಾಂಬಳೆ, ವಿನೋದ ಕಾಂಬಳೆ, ವಿಧ್ಯಾಧರ ದೊಂಡಾರೆ, ಈಶ್ವರ ಕಾಂಬಳೆ, ಮಹಾಂತೇಶ ಬಡಿಗೇರ, ಬಾಪು ದೊಂಡಾರೆ, ಸಾವಕಾರ ಬಸ್ತವಾಡೆ, ಶೇಖರ ಹೊನಕಾಂಬಳೆ ಸೇರಿದಂತೆ ಅನೇಕರು ಇದ್ದರು.