ಸೌಂದತ್ತಿ

ಗುರುವಿನ ಸ್ಥಾನ ಅತ್ಯಂತ ಶ್ರೇಷ್ಠ: ಜಗಜಂಪಿ

ಗುರುವಿನ ಸ್ಥಾನ ಅತ್ಯಂತ ಶ್ರೇಷ್ಠ: ಜಗಜಂಪಿ

ಲೋಕದರ್ಶನ ವರದಿ 

ಸವದತ್ತಿ 30: ಅನಾದಿ ಕಾಲದಿಂದಲೂ ಗುರು ಶಿಷ್ಯರ ಸಂಬಂಧ ಅತ್ಯಂತ ಪವಿತ್ರವಾಗಿದ್ದು, ಆದರೆ ಇತ್ತೀಚಿನ ದಿನಗಳಲ್ಲಿ ಅದರ ಮಹತ್ವ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಬೆಳಗಾವಿ ಲಿಂಗರಾಜ ಕಾಲೇಜಿನ ನಿವೃತ್ತ ಪ್ರಾಚಾರ್ಯ ಬಸವರಾಜ ಜಗಜಂಪಿ ವಿಷಾದ ವ್ಯಕ್ತಪಡಿಸಿದರು. 

ಇಲ್ಲಿನ ನಿಕ್ಕಂ ಮಂಗಲ ಕಾರ್ಯಾಲಯದಲ್ಲಿ 1984-85 ನೇ ಸಾಲಿನ ಎಸ್‌.ಕೆ.ಹೈಸ್ಕೂಲಿನ ಹಳೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಅಂದು ಗುರು ಶಿಷ್ಯನಿಗೆ ದಂಡಿಸಿ ಶಿಕ್ಷಣ ನೀಡುವ ಅಧಿಕಾರವಿತ್ತು. ಆದರೆ ಇದೀಗ ದಂಡಿಸುವದು ಅಪರಾಧದಂತಾಗಿದೆ ಎಂದರು. ಕಾಲ ಬದಲಾದಂತೆ ಎಲ್ಲ ವ್ಯವಸ್ಥೆಗಳು ಬದಲಾವಣೆಯತ್ತ ಸಾಗುತ್ತಿದ್ದು, ಆದರೆ ಜಗತ್ತಿನಲ್ಲಿ ಗುರುವಿಗೆ ಇರುವ ಸ್ಥಾನ ಮಾತ್ರ ಅತ್ಯಂತ ಶ್ರೇಷ್ಠವಾಗಿದೆ ಎಂದರು. 

ರಾಜು ವಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಎಸ್‌.ಎಸ್‌.ಎಲ್‌.ಸಿಯಲ್ಲಿ ಶಿಕ್ಷಣ ನೀಡಿದ ನಿವೃತ್ತ ಶಿಕ್ಷಕರಾದ ಬಿ.ಬಿ.ಗೊರವನಕೊಳ್ಳ, ಎಂ.ಎಫ್‌.ನಿಶಾನದಾರ, ಎಂ.ಎಸ್‌.ಅಸುಂಡಿ, ಬಿ.ಎಸ್‌.ಚಚಡಿ, ಕೆ.ಎಸ್‌.ಗಿಡಮಲ್ಲನ್ನವರ, ಬಿ.ಜಿ.ಪ್ರಭುನವರ, ಆನಂದ ಹಲಕಿ ಇವರನ್ನು ವಿದ್ಯಾರ್ಥಿ ಬಳಗದಿಂದ ಸನ್ಮಾನಿಸಿ ಗೌರವಿಸಲಾಯಿತು.  

ಪ್ರಸಕ್ತ ಸಾಲಿನ ಎಸ್‌.ಎಸ್‌.ಎಲ್‌.ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ 1984-85ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಥಿಗಳ ಮಕ್ಕಳನ್ನು ಗೌರವಿಸಿ ಪ್ರೋತ್ಸಾಹಿಸಲಾಯಿತು. 

ಎಸ್‌.ಕೆ.ಪೌಢಶಾಲೆಯ ಪ್ರಾಚಾರ್ಯ ಸುರೇಶ ಪಾಟೀಲ ಅಧ್ಯಕ್ಷತೆವಹಿಸಿದ್ದರು. ಡಾ.ಎನ್‌.ಸಿ.ಬೆಂಡಿಗೇರಿ, ಮಲ್ಲಿಕಾರ್ಜುನ ಪುರದಗುಡಿ, ಚಂದ್ರಣ್ಣ ಶ್ಯಾಮರಾಯನವರ, ದುರ್ಗಾಪ್ರಸಾದ ರಾವ್, ಮಲ್ಲಣ್ಣಾ ವಟ್ನಾಳ, ವಿನಾಯಕ ಪೂಜಾರ, ಸದಾಶಿವ ಮಿರಜಕರ, ವಿಶ್ವನಾಥ ಕೌಜಲಗಿ, ವೀರ​‍್ಪ ಹೊನಬಿಂದಗಿ, ಉದಯ ಯಕ್ಕುಂಡಿ, ವಾಸು ಮಹೇಂದ್ರಕರ, ಅರುಣ ಪೆಟ್ಲೊರ, ಶಂಕರ ದ್ಯಾಮಣ್ಣವರ, ಪ್ರಕಾಶ ಶೇಠ, ಡಾ.ಅನೀಲ ಮರಲಿಂಗನವರ, ವೈ.ಎಚ್‌.ಭಜಂತ್ರಿ ಉಪಸ್ಥಿತರಿದ್ದರು. 

ಪ್ರಕಾಶ ಬಾಳೋಜಿ ಸ್ವಾಗತಿಸಿದರು. ಸದಾಶಿವ ಮಿರಜಕರ ಗುರುವಂದನಾ ಕಾರ್ಯಕ್ರಮ ನಡೆಸಿಕೊಟ್ಟರು. ನೀಲಕಂಠ ಶೀಲವಂತಮಠ ನೀರೂಪಿಸಿದರು. ಬಸವರಾಜ ಕೋರಾ​‍್ಯನಮಠ ವಂದಿಸಿದರು. 


ಸುದ್ದಿ ಓದಿ