ಮನರಂಜನೆ

ನಿಂಬೆಹಣ್ಣಿನ ಹುಡುಗಿ @ 54!

ನಿಂಬೆಹಣ್ಣಿನ ಹುಡುಗಿ @ 54!

ಮುಂಬೈ/ಬೆಂಗಳೂರು, ನ. 13:‘ನಿಂಬೆಹಣ್ಣಿನಂತ ಹುಡುಗಿ ಬಂದ್ಲು ನೋಡು. . ‘ ಪ್ರೇಮಲೋಕದ ಹಾಡನ್ನು ಖಂಡಿತಾ ಮರೆಯೋಕೆ ಸಾಧ್ಯವಿಲ್ಲ.  ಹಾಗೇನೇ ಆ ಹಾಡಿನಲ್ಲಿ ಜೂಹಿ ಚಾವ್ಲಾ ಸ್ಟೈಲ್, ಅಭಿನಯವನ್ನು ಕೂಡ.  

ನಿಂಬೆಹಣ್ಣಿನಂತಹ ಈ ಬೆಡಗಿ ಇಂದು 54ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ಜೂಹಿ ನಟಿ ಮಾತ್ರವಲ್ಲ, ಪರಿಸರ ಹೋರಾಟಗಾರ್ತಿ ಕೂಡ.  ಹೀಗಾಗಿ ಪ್ರತಿಯೊಬ್ಬರು ಗಿಡ ನೆಡುವ ಮೂಲಕ ಭೂಮಿಯನ್ನು ಹಸರಿನಿಂದ ಸಮೃದ್ಧವಾಗಿಸುವಂತೆ ಕರೆ ನೀಡಿದ್ದಾರೆ.

ಜೂಹಿ ಜನ್ಮದಿನದ ಹಿನ್ನೆಲೆಯಲ್ಲಿ ಅಭಿಮಾನಿಗಳು, ಹಿತೈಷಿಗಳು ಸಾಮಾಜಿಕ ಜಾಲತಾಣದಲ್ಲಿ ಹಾರೈಕೆಯ ಸುರಿಮಳೆ ಸುರಿಸಿದ್ದಾರೆ. ನಟಿ ರೇಖಾ ಅವರು ಮಿಸ್ ಇಂಡಿಯಾ 1984 ರ ವಿಜೇತರಾದ ಜೂಹಿ ಚಾವ್ಲಾರಿಗೆ ಕಿರೀಟವನ್ನು ಅಲಂಕರಿಸುತ್ತಿರುವ ಹಳೆಯ ಫೋಟೋ ಸಖತ್ ವೈರಲ್ ಆಗಿದೆ. 

ಇನ್‌ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಂಡ ಚಿತ್ರವು ನೂರಾರು ಕಾಮೆಂಟ್‌ಗಳು ಮತ್ತು ಸಾವಿರಾರು ಲೈಕ್ಸ್ ಪಡೆದುಕೊಂಡಿದೆ.

ತನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ, ಯಾವುದೇ ಉಡುಗೊರೆಗಳ ಅಗತ್ಗಿಯವಿಲ್ಲ.  ಪ್ರತಿಯೊಬ್ಬರೂ ಮರಗಿಡಗಳನ್ನು ಬೆಳೆಸಿ, ಭೂಮಿಯಲ್ಲಿ ಹಸಿರು ಉಳಿಸಿ ಎಂದು ಟ್ವೀಟ್ ಮೂಲಕ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಕನ್ನಡದ ‘ಪ್ರೇಮಲೋಕ’,’ಕಿಂದರಿಜೋಗಿ’ ‘ಶಾಂತಿ ಕ್ರಾಂತಿ’, ಬಾಲಿವುಡ್ ನ  'ಖಯಾಮತ್ ಸೆ ಕಯಾಮತ್ ತಕ್', 'ದರ್', 'ಇಷ್ಕ್', 'ಹಮ್ ಹೇ ರಹೀ ಪ್ಯಾರ್ ಕೆ', ಮತ್ತು 'ಯೆಸ್ ಬಾಸ್', 

ಸುದ್ದಿ ಓದಿ