ಜಮಖಂಡಿ

ಪತ್ರಕರ್ತರ ಮೇಲೆ ಗುಂಡಾವರ್ತನೆ ಮೆರೆದ ಶಾಸಕ ಜಗದೀಶ ಗುಡಗುಂಟಿ

ಪತ್ರಕರ್ತರ ಮೇಲೆ ಗುಂಡಾವರ್ತನೆ ಮೆರೆದ ಶಾಸಕ ಜಗದೀಶ ಗುಡಗುಂಟಿ

ಜಮಖಂಡಿ,07: ಪತ್ರಕರ್ತರ ಮೇಲೆ ಗುಂಡಾವರ್ತನೆ ಮೆರೆದ ಶಾಸಕ ಜಗದೀಶ ಗುಡಗುಂಟಿ ವಿರುದ್ದ ಕಾನಿಪ ಧ್ವನಿ ಸಂಘಯವರು ಪ್ರತಿಭಟನೆ ನಡೆಸಿ. ಅ, 10ರ ಒಳಗೆ ಬಹಿರಂಗವಾಗಿ ಕ್ಷೇಮೆ ಕೇಳದ್ದಿದರೆ ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು. 

ಮುಧೋಳ ತಾಲೂಕಿನಲ್ಲಿ ನಡೆದ ಕಾನಿಪ ಧ್ವನಿ ಸಂಘಟನೆಯ ಪತ್ರಕರ್ತರು ಪ್ರತಿಭಟನೆ ನಡೆಸಿ, ಉಪತಶೀಲ್ದಾರ ಇಂಡೀಕರ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲಿಸಿದರು. ನಂತರ ಮಾತನಾಡಿದ ಅವರು, ಜಮಖಂಡಿ ಮತಕ್ಷೇತ್ರ ಶಾಸಕರಾದ ಜಗದೀಶ ಗುಡಗುಂಟಿ ಅವರು ಅ,15ರಂದು ನಡೆಯುವ ಪೂರ್ವಭಾವಿ ಸಭೆಯಲ್ಲಿ ಪತ್ರಕರ್ತರಿಗೆ ನಿಂದನೆ ಮಾಡಿದನ್ನು ಕೇಳಿದಕ್ಕೆ. ಅವರ ಮೇಲೆ ಅಧಿಕಾರದ ದರ​‍್ ಹಾಗೂ ಗುಂಡಾವರ್ತನೆ ಮೆರೆದಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು. 

ರಾಜ್ಯಾಧ್ಯಕ್ಷರು ಅ,10 ರವರೆಗೆ ಶಾಸಕ ಗುಡಗುಂಟಿ ಅವರಿಗೆ ಕ್ಷೇಮೆ ಕೇಳಲು ಗಡುವನ್ನು ನೀಡಿದ್ದಾರೆ. ಅವರು ಕ್ಷೇಮೆ ಕೇಳಿದರೆ ನಮ್ಮ ಹೋರಾಟವನ್ನು ಕೈಬಿಡಲಾಗುವುದು. ಇಲ್ಲದೇ ಹೋದರೆ ನಮ್ಮ ಹೋರಾಟವನ್ನು ತಾಲೂಕು, ಜಿಲ್ಲೆ ಹಾಗೂ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು. 

ಇದೇ ಸಂದರ್ಭದಲ್ಲಿ ಮಾರುತಿ ನಾಯಕ, ಕಾಳಪ್ಪ ಮೇತ್ರಿ, ಮೃತುಂಜಯ್ಯ ಹಿರೇಮಠ, ಸಂತೋಷ ಶೇರಖಾಣೆ, ಶಿವು ಹಿರೇಮಠ, ಅನ್ವರ ಮುಲ್ಲಾ ಸೇರಿದಂತೆ ಅನೇಕರು ಇದ್ದರು.  


. 


ಸುದ್ದಿ ಓದಿ