ರಾಷ್ಟ್ರೀಯ

ಕೋವಿಡ್ ವಿಮೆಗಾಗಿ ಮಹಾರಾಷ್ಟ್ರದಲ್ಲಿ ಪತ್ರಕರ್ತರ ಪ್ರತಿಭಟನೆ

ಕೋವಿಡ್ ವಿಮೆಗಾಗಿ ಮಹಾರಾಷ್ಟ್ರದಲ್ಲಿ ಪತ್ರಕರ್ತರ ಪ್ರತಿಭಟನೆ

ಮುಂಬೈ/ಔರಂಗಾಬಾದ್, ಸೆಪ್ಟೆಂಬರ್ 18:ಕೊರೊನಾ ಸಂದರ್ಭದಲ್ಲಿ ಕರ್ತವ್ಯನಿರತ ಪತ್ರಕರ್ತರು ಮೃತಪಟ್ಟರೆ ಅವರನ್ನು ವಿಮೆ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ರಾಜ್ಯಾದ್ಯಂತ 300 ತಾಲೂಕುಗಳಲ್ಲಿ ಪತ್ರಕರ್ತರು ಪ್ರತಿಭಟನೆ ನಡೆಸಿದರು ಎಂದು ಮರಾಠಿ ಪ್ರೆಸ್ ಕೌನ್ಸಿಲ್ ಟ್ರಸ್ಟಿ ಎಸ್.ಎಂ.ದೇಶ್ ಮುಖ್ ತಿಳಿಸಿದ್ದಾರೆ.

ಈ ಸಂಬಂದ ಸುಮಾರು 8000ಕ್ಕೂ ಅಧಿಕ ಎಸ್ ಎಂ ಎಸ್ ಸಂದೇಶವನ್ನು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ ಅವರಿಗೆ ಕಳುಹಿಸಲಾಗಿದೆ.

ರಾಜ್ಯಾದ್ಯಂತ ನಡೆದ ಪ್ರತಿಭಟನೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಭಾರೀ ಮಳೆಯ ನಡುವೆಯೂ ಮಾಸ್ಕ್ ಧರಿಸಿ ತಹಶೀಲ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು ಎಂದು ಅವರು ತಿಳಿಸಿದರು.

ಪ್ರತಿಭಟನೆಯನ್ನು ಯಶಸ್ವಿಗೊಳಿಸಿದ್ದಕ್ಕಾಗಿ" ಪತ್ರಕರ್ತರಿಗೆ ಕೃತಜ್ಞತೆ ಸಲ್ಲಿಸಿದ ದೇಶ್ ಮುಖ್, ಕೋವಿಡ್ -19 ನಿಂದ ಮೃತಪಡುತ್ತಿರುವ ಪತ್ರಕರ್ತರಿಗೆ 50 ಲಕ್ಷ ರೂ. ವಿಮೆ ಮತ್ತು ಹಾಸಿಗೆಗಳು, ಆಮ್ಲಜನಕ ಮತ್ತು ವೆಂಟಿಲೇಟರ್‌ಗಳನ್ನು ಕಾಯ್ದಿರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಪತ್ರಕರ್ತರಾದ ಸಂತೋಷ್ ಪವಾರ್ ಮತ್ತು ಪಾಂಡುರಂಗ್ ರಾಯ್ಕರ್ ಅವರ ಸಾವಿಗೆ ಕಾರಣರಾದವರ ವಿರುದ್ಧ ಹತ್ಯೆ ಆರೋಪದಡಿ ಪ್ರಕರಣ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು.

ಈ ಇಬ್ಬರು ಪತ್ರಕರ್ತರು ಇತ್ತೀಚೆಗೆ ಕೊರೊನಾಗೆ ಬಲಿಯಾಗಿದ್ದರೆ, ಆಡಳಿತಾತ್ಮಕ ವೈಫಲ್ಯ ಅವರ ಸಾವಿಗೆ ಕಾರಣ ಎಂದು ಪತ್ರಕರ್ತರ ಸಂಸ್ಥೆ ಆರೋಪಿಸಿದೆ.

ಸುದ್ದಿ ಓದಿ