ತಾಲೂಕಾ ಆಡಳಿತದ ವತಿಯಿಂದ ಪತ್ರಕರ್ತರಿಗೆ ಸನ್ಮಾನ
ತಾಳಿಕೋಟಿ. ತಾಲೂಕಿನಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಗಣನೀಯವಾದ ಸೇವೆಯನ್ನು ಸಲ್ಲಿಸುತ್ತಿರುವ ಯುವ ಪತ್ರಕರ್ತರನ್ನು ತಾಲೂಕ ಆಡಳಿತದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಇತ್ತೀಚಿಗೆ ತಾಲೂಕ ಆಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡ ಸಮಾರಂಭದಲ್ಲಿ ಯುವ ವರದಿಗಾರರಾದ ರವಿ ಕಟ್ಟಿಮನಿ (ವಿಶ್ವವಾಣಿ) ಅಬ್ದುಲ್ ಗನಿ ಮಕಾನದದಾರ (ಈ ವಾರ್ತಾ).ವಿಶ್ವನಾಥ ಹಜೇರಿ (ಉದಯ ಕಾಲ). ಸಂಜಯಸಿಂಗ ರಜಪೂತ (ಲೋಕದಶ೯ನ).ವಿಜಯ ಕಲಾಲ (ರಾಜ್ ನ್ಯೂಸ್). ಪ್ರವೀಣ ರೆಡ್ಡಿ (ಸುದ್ದಿ ವಾಹಿನಿ) ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಕೀರ್ತಿ ಚಾಲಕ್ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಕ್ಕೆ ಮಹತ್ವಪೂರ್ಣವಾದ ಸ್ಥಾನವಿದೆ ಒಂದು ಆರೋಗ್ಯ ಪೂರ್ಣ ಸಮಾಜದ ನಿರ್ಮಾಣದಲ್ಲಿ ಪತ್ರಕರ್ತರ ಪಾತ್ರ ಮಹತ್ವಪೂರ್ಣದ್ದಾಗಿದೆ ಅವರ ಸೇವೆ ಅನನ್ಯ ಪತ್ರಕರ್ತರನ್ನು ಅವರ ಸೇವೆಗಾಗಿ ಗೌರವಿಸುವದರ ಜೊತೆಗೆ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು. ಈ ಸಮಯದಲ್ಲಿ ತಾಲೂಕ ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ ಬಿ. ಆರ್. ಬಿರಾದಾರ ಪುರಸಭೆ ಮುಖ್ಯ ಅಧಿಕಾರಿ ಮೋಹನ ಜಾಧವ. ಉಪ ತಹಸಿಲ್ದಾರ್ ಜೆ. ಆರ್.. ಜೈನಾಪೂರ ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷ ಆರ್. ಎಲ್. ಕೊಪ್ಪದ ಶಿಕ್ಷಕ ರಾಜು ವಿಜಾಪುರ ಹಾಗೂ ಮುನ್ನಾ ಅತ್ತಾರ ಇದ್ದರು.