ರಾಣೆಬೆನ್ನೂರ

ಸಮಾಜ ಸರಿದಾರಿಗೆ ತರುವ ಸಾಮರ್ಥ್ಯ ಪತ್ರಕರ್ತರಿಗಿದೆ: ಸಂತೋಷ ಭಟ್

ಸಮಾಜ ಸರಿದಾರಿಗೆ ತರುವ ಸಾಮರ್ಥ್ಯ ಪತ್ರಕರ್ತರಿಗಿದೆ: ಸಂತೋಷ ಭಟ್

ಲೋಕದರ್ಶನ ವರದಿ 

ರಾಣೇಬೆನ್ನೂರ 12: ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಸರಿದಾರಿಗೆ ತರುವಂತಹ ಸಾಮರ್ಥ್ಯ ಮುದ್ರಣ ಮಾಧ್ಯಮಕ್ಕೆ ಇದೆ ಪತ್ರಕರ್ತರು ತಮ್ಮ ಸಂಘಟನೆಯ ಬಲದಿಂದ ಸರಕಾರ ಮತ್ತು ವಿವಿಧ ಸಂಘಟನೆಗಳ ಲಾಭ ಪಡೆದು ಆರ್ಥಿಕವಾಗಿ ಸಬಲರಾಗಬೇಕೆಂದು ಸುಕ್ಷೇತ್ರ ದೇವರ ಗುಡ್ಡ ಗ್ರಾಮದ  ಮಾಲತೇಶ ಸ್ವಾಮಿ ದೇವಸ್ಥಾನದ  ಪ್ರಧಾನ ಅರ್ಚಕ ಸಂತೋಷ ಭಟ್ ಗುರೂಜಿ  ಹೇಳಿದರು. 


ಅವರು ಸೋಮವಾರ ಸ್ಥಳಿಯ  ಆದೀಶಕ್ತಿ ದೇವಸ್ಥಾನ ಸಮುದಾಯ ಭವನದಲ್ಲಿ ನಡೆದ ನೂತನ ಕರ್ನಾಟಕ ಸಂಪಾದಕ ಮತ್ತು ವರದಿಗಾರರ ಸಂಘದ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತರು ಮತ್ತು ಪತ್ರಿಕೆಗಳು ಪ್ರಜಾಪ್ರಭುತ್ವದ ನಾಲ್ಕನೇ ಪ್ರಮುಖ ಅಂಗವಾಗಿದೆ ಪತ್ರಿಕೋದ್ಯಮ ಆದಾಯಗಳಿಸುವ ಉದ್ಯಮವಲ್ಲ ಇದೂಂದು ಸಮಾಜ ಸೇವೆ ಹಣ ಗಳಿಸುವ ಉದ್ದೇಶ ಇದರಿಂದ ಈಡೇರಿಸಿಕೂಳ್ಳಲು ಸಾಧ್ಯವಾಗುವುದಿಲ್ಲ ಎಂದ ಅವರು ಸೇವೆಯ ಭಾಗವಾಗಿ ಕೆಲಸಮಾಡುತ್ತ ಸುಸಂಸ್ಕ್ರುತ ಮತ್ತು ಸ್ವಾಸ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಗುರೂಜಿ ಅವರು ಕರೆ ನೀಡಿದರು. 

ದಿವ್ಯ ಸಾನಿಧ್ಯ ವಹಿಸಿದ್ದ ವಿವೇಕಾನಂದ ಆಶ್ರಮದ ಅಧ್ಯಕ್ಷ ಪ್ರಕಾಶಾನಂದಜೀ ಅವರು  ಮಾತನಾಡಿ ಏಕತೆಯಲ್ಲಿ ವಿವಿಧತೆಯನ್ನು ಕಾಣದೇ ಎಲ್ಲ ಪತ್ರಕರ್ತರು ಸಂಘಟನೆಯ ಶಕ್ತಿಯಿಂದ ಸನ್ಮಾರ್ಗದ ರೂಪವನ್ನು ಅಳವಡಿಸಿಕೊಳ್ಳಿಲು ಮುಂದಾಗಬೇಕು. ಸ್ಥಳಿಯವಾಗಿ ಇರುವ ಸಂಘಟನೆಗಳಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳು ಇರುವುದು ಕೆಳಿಬರುತ್ತಿವೆ ಸಮಾಜ ಮುಖಿ ಕನ್ನಡಿಯಾಗಿ ಕರ್ತವ್ಯ ನಿರ್ವಹಿಸುವವರಲ್ಲಿ ಯಾವುದೇ ಆಂತರಿಕ ಭಿನ್ನಾಭಿಪ್ರಾಯಗಳು ಇದ್ದರು ಸಹ ವ್ಯಕ್ತಿಗತವಾಗಿರಲಿ ಆದರೆ ಸಾರ್ವತ್ರಿಕವಾಗಿ ಯಾವುದೇ ಕಾರಣಕ್ಕೂ ಬಹಿರಂಗವಾಗಿ ಗುರುತಿಸಿಕೂಳ್ಳುವ ಕೆಲಸ ನಡೆಯಬಾರದು ಇದರಿಂದ ಪತ್ರಕರ್ತರು ಸಣ್ಣವರಾಗುತ್ತಾರೆ ಅಲ್ಲದೇ ಇವರಿಗಿರುವ ಗೌರವಕ್ಕೆ ದಕ್ಕೆ ಬರುತ್ತದೆ ಎಂದ ಶ್ರೀಗಳು ಭವಿಷ್ಯದಲ್ಲಿ ಎಲ್ಲರಲ್ಲಿರುವ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಒಂದಾಗಿ ಒಗಟ್ಟಾಗಿ ಪ್ರಾಮಾಣಿಕ ಕರ್ತವ್ಯ ಮಾಡಲು ಮುಂದಾಗಬೇಕು ಎಂದರು. 

 ಅತಿಥಿಯಾಗಿದ್ದ  ವಾಯುವ್ಯ ಸಾರಿಗೆ ಸಂಸ್ಥೆಯ ನಿರ್ದೇಶಕ ಸಂತೋಷ ಪಾಟೀಲ ಅವರು ಪತ್ರಕರ್ತರು ತಮ್ಮ ಸಂಘಟನೆಯಿಂದ ಆರ್ಥಿಕವಾಗಿ ಸಬಲರಾಗಿರಬೇಕು. ಸಂಘಟನೆಯ ವಿಫಲತೆಯಿಂದ ರಾಜಕೀಯದವರಿಗೆ ಲಾಭವಾಗುತ್ತದೆ ಆದರೆ ತಮಗೇನು ಇದರಿಂದ ತಲೆಯ ಮೇಲೆ ಕಿರಿಟ ಬರುವುದಿಲ್ಲ ಎಂದ ಅವರು ಕರ್ನಾಟಕ ಸಂಪಾದಕ ಮತ್ತು ವರದಿಗಾರರ ಸಂಘ ಉತ್ತರ ಕರ್ನಾಟಕದಲ್ಲಿ ಹೆಮ್ಮರವಾಗಿ ಬೆಳೆದು ಪತ್ರಿಕಾ ಸ್ವಾತಂತ್ರದ ಅರ್ಥವನ್ನು ಸಮಾಜಕ್ಕೆ ಮಾರ್ಧನಿಯಾಗಿ ಬಿಂಬಿಸುವಂತಾಗಲಿ ಎಂದು ಶುಭ ಹಾರೈಸಿದರು. 

ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಎಸ್‌.ಜಿ.ಮಹಾನುಭಾವಿಮಠ, ಕೆ.ಎಸ್‌.ನಾಗರಾಜ, ಗಣೇಶ ನಂದಿಗಾವಿ, ಹಾಲೇಶ ಶಿವಪ್ಪನವರ, ಗದಿಗೆಪ್ಪ ನೆಸ್ವಿ, ಎನ್‌. ವಿ ಹಾವನೂರ, ಸೇರಿದಂತೆ ಮತ್ತಿತರರನ್ನು  ಸನ್ಮಾನಿಸಿ ಗೌರವಿಸಲಾಯಿತ 

ಸಂಘದ ನೂತನ ಅಧ್ಯಕ್ಷ ಶಿವಕುಮಾರ ಒಲೇಕಾರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರೈತ ಸಂಘದ ಮುಖಂಡರಾದ ರವೀಂದ್ರಗೌಡ ಪಾಟೀಲ, ಹನುಮಂತಪ್ಪ ಕಬ್ಬಾರ, ಸಮಾಜ ಸೇವಕರಾದ ಭಾರತಿ ಜಂಬಗಿ, ಮಂಜುನಾತಥ ಗೌಡಶಿವಣ್ಣನವರ, ಭೈರತಿ ಗೀರೀಶ, ಗೀರೀಶ ಗೋಣಿ ಬಸಮ್ಮನವರ, ಸಂಘದ ಪದಾಧಿಕಾರಿಗಳಾದ ಬಿರೇಶ ಪೂಜಾರ, ರುದ್ರಗೌಡ ಪಾಟೀಲ, ಮಾರುತಿ ಮುಂಡರಗಿ, ಅನಿಲ ಶಾಸ್ತ್ರೀ, ಮಾಲತೇಶ, ನಾಗರಾಜ ಪಾಟೀಲ, ಮುದಲಾದವರು ಉಪಸ್ಥಿತರಿದ್ದರು. ಕು. ದಾನೇಶ್ವರಿ ಸೂರಣಗಿ ಪ್ರಾರ್ಥಿಸಿದರು. ಶಿಕ್ಷಕಿ ಇಂದಿರಾ ಕೂಪ್ಪದ ಸ್ವಾಗತಿಸಿ ವಂದಿಸಿದರು. 


ಸುದ್ದಿ ಓದಿ