ಬಳ್ಳಾರಿ

ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಕಾರ್ಯಕರ್ತರ ಸೇರ್ಪಡೆ

ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಕಾರ್ಯಕರ್ತರ ಸೇರ್ಪಡೆ

ಲೋಕದರ್ಶನ ವರದಿ 

ಬಳ್ಳಾರಿ 06: ನಗರದ ಹವಂಬಾವಿ ಪ್ರದೇಶದಲ್ಲಿರುವ ಕೆ.ಆರಿ​‍್ಪ.ಪಿ ಗ್ಲಾಸ್ ಹೌಸ್ ಕಛೇರಿಯಿಲ್ಲಿ ಬಳ್ಳಾರಿಯ 19ನೇ ವಾರ್ಡಿನ ಹುಸೇನ್ ನಗರ ನಿವಾಸಿಗಳಾದ ಗೋಪಿ, ಶ್ರೀಧರ್  ಇವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ತೊರೆದು  ಗೋವಿಂದರಾಜುಲು, ವೆಂಕಟೇಶ್, ವೀರೇಶ್, ನವೀನ್ ಕುಮಾರ್, ಉದಯಕುಮಾರ್, ರಘು, ಅನೇಕ ಮಹಿಳೆಯರು  ಸೇರಿದಂತೆ  ನೂರಾರು ಕಾರ್ಯಕರ್ತರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ನಗರ ಅಭ್ಯರ್ಥಿಯಾದ ಲಕ್ಷ್ಮಿ ಅರುಣಾ, ಮತ್ತು ಪಕ್ಷದ ಮುಖಂಡರಾದ ಅಲಿಖಾನ್, ಎಸ್ ಟಿ ಘಟಕದ ಅಧ್ಯಕ್ಷರಾದ ಉಮಾರಾಜ್ ಇವರ ಸಮ್ಮುಖದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರೆ​‍್ಡಗೊಂಡರು. ಈ ಸಂದರ್ಭದಲ್ಲಿ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ