ರಾಣೆಬೆನ್ನೂರ

ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶ ಹೆಚ್ಚು

ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶ ಹೆಚ್ಚು
ಬಿಎಜೆಎಸ್‌ಎಸ್ ಕಾಲೇಜಿನಲ್ಲಿ ನಡೆದ ಇಂಗ್ಲೀಷ್ ಸಾಹಿತ್ಯ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಶ್ರೀನಿವಾಸ ಕೆ. ಮಾತನಾಡಿದರು.

ರಾಣೇಬೆನ್ನೂರ 24: ನಗರದ ಬಿ ಎ ಜೆ ಎಸ್ ಎಸ್ ಮಹಿಳಾ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯ ಕಲಿತ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಗಳು ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬಾಗವಹಿಸಿ ಮಾತನಾಡಿದ ಉಡುಪಿ ಜಿಲ್ಲೆಯ ಶಂಕರನಾರಾಯಣ ಸರಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದ ಇಂಗ್ಲಿಷ್ ವಿಷಯದ ಸಹಾಯಕ ಪ್ರಾದ್ಯಾಪಕ ಡಾ ಶ್ರೀನಿವಾಸ್ ಕೆ ಸಾಹಿತ್ಯ ಕಲಿತ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಗಳು ವಿಪುಲವಾಗಿದ್ದು ಸರಕಾರಿ ರಂಗದಲ್ಲಿ ಅಷ್ಟೇ ಅಲ್ಲದೆ ಬೇರೆಯ ರಂಗದಲ್ಲಿಯೂ ಹೆಚ್ಚು ಅವಕಾಶಗಳಿವೆ. ಆದರೆ ಅದರ ಅರಿವಿಲ್ಲದೆ ನಾವು ಸಾಹಿತ್ಯ ಅಧ್ಯಯನದಿಂದ ದೂರವಾಗಿದ್ದು ಸರಿಯಾಗಿ ಅರ್ಥಸಿಕೊಳ್ಳಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ ಸುರೇಶ ಬಣಕಾರ್ ಅವರು ಆದುನಿಕತೆಯಲ್ಲಿ ಸಾಹಿತ್ಯದ ಅರಿವು ಹಲವರಿಗಿದ್ದು ಉದ್ಯೋಗಕ್ಕಾಗಿ ಉಪಯೋಗಿಸಿಕೊಳ್ಳಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಉಪ ಪ್ರಾಚಾರ್ಯರಾದ ದೇವರಾಜ್ ಹಂಚಿನಮನಿ, ಪೃಥ್ವಿರಾಜ್ ಕಟ್ಟಿಮನಿ ಚಂದ್ರಶೇಖರ್ ಎಂ ಕೆ,ರಾಜೀವ್ ಎಂ ಉಪ ಪ್ರಾಚಾರ್ಯರಾದ ದೇವರಾಜ್ ಹಂಚಿನಮನಿ, ಪೃಥ್ವಿರಾಜ್ ಕಟ್ಟಿಮನಿ ಚಂದ್ರಶೇಖರ್ ಎಂ ಕೆ,ರಾಜೀವ್ ಎಂ  ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು 

ಸುದ್ದಿ ಓದಿ