ಜಾರ್ಖಂಡ್ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಹಾಜಿ ಹುಸೇನ್ ಅನ್ಸಾರಿ ನಿಧನ: ಮುಖ್ಯಮಂತ್ರಿ ಶೋಕ
ರಾಂಚಿ, ಅಕ್ಟೋಬರ್ 03: ಜಾರ್ಖಂಡ್‌ನ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಹಾಜಿ ಹುಸೇನ್ ಅನ್ಸಾರಿ ಶನಿವಾರ ಮಧ್ಯಾಹ್ನ ಮೆಡಂತ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು.
ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಸಚಿವರ ನಿಧನದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.
ಹಾಜಿ ಹುಸೇನ್ ಅನ್ಸಾರಿ ಸಾಹೇಬ್ ಜಿ ಅವರ ಸಾವು ತನಗೆ ತೀವ್ರ ನೋವುಂಟು ಮಾಡಿದೆ ಎಂದಿದ್ದಾರೆ.
ಮೃತರು ಜಾರ್ಖಂಡ್ ಮುಕ್ತಿ ಮೋರ್ಚಾ ಟಿಕೆಟ್‌ನಲ್ಲಿ ರಾಜ್ಯ ವಿಧಾನಸಭೆಯ ಮಧುಪುರ ಸ್ಥಾನದಿಂದ ಶಾಸಕರಾಗಿದ್ದರು.
ಅಲ್ಲದೆ ಪ್ರತ್ಯೇಕ ಜಾರ್ಖಂಡ್‌ನ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮತ್ತು ಅವರು ತುಂಬಾ ಸರಳ ವ್ಯಕ್ತಿ. ಅವರ ಸಾವಿನ ದುಃಖ ಭರಿಸುವ ಶಕ್ತಿ ಕುಟುಂಬಕ್ಕೆ ಸಿಗಲಿ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.