ಸೌಂದತ್ತಿ

ಆಭರಣ ಕಳುವು, ಪ್ರಕರಣ ದಾಖಲು

ಆಭರಣ ಕಳುವು, ಪ್ರಕರಣ ದಾಖಲು

ಸವದತ್ತಿ: ತಾಲೂಕಿನ ಉಗರಗೋಳ ಗ್ರಾಮದ ಮನೆ ಮತ್ತು ಅಂಗಡಿಯಲ್ಲಿನ ಟ್ರಜುರಿ ಬೀಗ ಒಡೆದು ಚಿನ್ನ ಮತ್ತು ಬೆಳ್ಳಿ ಆಭರಣ ಕಳುವು ಮಾಡಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ. 

ಗ್ರಾಮದ ಕುಮಾರ ವಿರುಪಾಕ್ಷಪ್ಪ ಹನಸಿ ಅವರ ಮನೆಯ ಟ್ರಜುರಿಲ್ಲಿದ್ದ 4.77 ಲಕ್ಷ ಮೌಲ್ಯದ 154 ಗ್ರಾಂ ಚಿನ್ನಾಭರಣ ಮತ್ತು 45 ಸಾವಿರ ಮೌಲ್ಯದ 943 ಗ್ರಾಂ ಬೆಳ್ಳಿ ಆಭರಣಗಳು ಕಳುವಾಗಿದೆ. ಕುಟಂಬಸ್ಥರು ಮನೆಗೆ ಬೀಗ ಹಾಕಿ ಪ್ರವಾಸಕ್ಕೆಂದು ತೆರಳಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಸವದತ್ತಿ ಪಿಐ ಕರುಣೇಶಗೌಡ ಜೆ. ಭೇಟಿ ನೀಡಿ ಪರೀಶೀಲಿಸಿದ್ದಾರೆ. ಶೋಧ ಕಾರ್ಯ ನಡೆದಿದ್ದು ಪ್ರಕರಣ ದಾಖಲಾಗಿದೆ. 


ಸುದ್ದಿ ಓದಿ