ಸಿರುಗುಪ್ಪ

ಯೇಸು ಜನ್ಮದಿನ ಪ್ರೀತಿ ಶಾಂತಿ ತ್ಯಾಗದ ಸಂಕೇತ

ಯೇಸು ಜನ್ಮದಿನ ಪ್ರೀತಿ ಶಾಂತಿ ತ್ಯಾಗದ ಸಂಕೇತ

ಸಿರುಗುಪ್ಪ; ಕ್ರಿಸ್ಮಸ್ ಹಬ್ಬ ಕೇವಲ ಒಂದು ಆಚರಣೆಯಲ್ಲ ಅದೊಂದು ಘಟನೆ ಭಗವಂತನು ಜಗತ್ತಿಗೆ ತನ್ನ ಪುತ್ರನನ್ನು ತನ್ನ ಪ್ರೀತಿಯನ್ನು ಜನತೆಗೆ ತೋರಿಸಿಕೊಟ್ಟ ಘಟನೆ ಪ್ರೀತಿ ಶಾಂತೀಯ ಸಂದೇಶ ಸಾರುವ ಜಾಗತಿಕ ಹಬ್ಬ ಪ್ರೀತಿ ಸೌಹಾರ್ದದಿಂದ ಪರಸ್ಪರ ಸ್ನೇಹ ಮನೋಭಾವದಿಂದ  ಜೀವಿಸಿ ರಂದು ಜನರಿಗೆ ಕರೆ ಕೊಡುವ ಹಬ್ಬವಾಗಿದೆ ಎಂದು ಸಮಾಜ ಸುಧಾರಕ ಸಾಕ್ಷರತಾ ಅಬ್ದುಲ್ ನಬಿ ಅವರು ಅಭಿಪ್ರಾಯ ಪಟ್ಟರು. ನಗರದ ಇಬ್ರಾಹಿಂ ಮಂಜೀಲ್ ನಲ್ಲಿ ಯೇಸು ಕ್ರಿಸ್ತ ಜನ್ಮದಿನ ನೆನಪಿಸಿ ಗೌರವಿಸಿ ಸ್ಮರಿಸಿ ಅವರು ಮಾತನಾಡುತ್ತಾ ಜಗತ್ತಿನಾದ್ಯಂತ ಬಹುತೇಕ ಜನರಿಗೆ ಹಾಗೂ ಕ್ರೈಸ್ತ ಭಕ್ತಾದಿಗಳಿಗೆ ಕ್ರಿಸ್ಮಸ್ ಸಡಗರ ಸಂಭ್ರಮ 2 ಸಾವಿರ ವರ್ಷಗಳ ಹಿಂದೆ ಮನುಕುಲಕ್ಕೆ ಮಾನವೀಯತೆಯ ಸಂದೇಶ ಸಾರಿದ ಮಹಾ ಮಾನವ ಯೇಸು ಕ್ರಿಸ್ತ ಹುಟ್ಟಿದ ದಿನವೇ ಡಿ. 25 ಕ್ರಿಸ್ಮಸ್ ಅದರ ಆಚರಣೆಯೇ ಜಗತ್ತಿನ ಕ್ರೈಸ್ತ  ಬಾಂಧವರ ಮನೆ ಮನೆಗಳಲ್ಲಿ ಸಂತಸ ಸಂಭ್ರಮದ ವಾತಾವರಣ ವಾಸ್ತವದ ನೋವು ಗೊಂದಲಗಳನ್ನು ಮರೆತು ನಕ್ಕು ನಲಿವ ದಿನ ಒಟ್ಟಿಗೆ ಕೂಡಿ ಹಾಡಿ ಪರಸ್ಪರ ಪ್ರೀತಿಯನ್ನು ಹಂಚಿಕೊಳ್ಳುವ ಹಾಗೂ ಪ್ರಪಂಚದ ಎಲ್ಲೆಡೆ ಸಂತೋಷ ಸೂಸುವ ಹಬ್ಬ ಕ್ರಿಸ್ಮಸ್ ಕ್ರಿಸ್ಮಸ್ ಹಬ್ಬ ಕೇವಲ ಆಚರಣೆಯಾಗದೆ ನೆರೆ ಹೊರೆಯವರಲ್ಲಿ ಪ್ರೀತಿ ಸಹಬಾಳ್ವೆ ಏಕತೆಯ ಬೀಜವನ್ನು ಬಿತ್ತಿ ದೇಶ ವಿದೇಶಗಳಲ್ಲಿ ಶಾಂತಿ ಮತ್ತು ಸೌಹಾರ್ದತೆ ಸ್ಥಾಪಿಸಲು ಸರ್ವರಿಗೂ ಕ್ರಿಸ್ಮಸ್ ಹಬ್ಬ  2023 ಹೊಸ ವರ್ಷದ ಶುಭಾಷಯ ಕೋರಿದರು . ಪ್ರಮುಖ ವ್ಯಕ್ತಿಗಳಾದ ಹಾಜಿ ಹಂಡಿ ಹುಸೇನ್ ಭಾಷಾ,  ಹಂಡಿ ಹಾಶಿಮ್, ಮಹಮ್ಮದ್ ನೌಶಾದ್ ಅಲಿ, ಡಬಲ್ ಬಾಂಡ್ ಹಾಜಿ ಟಿ ಜಿ ಅಬ್ದುಲ್ ಗನಿ, ಎ ಮೊಹಮ್ಮದ್ ರಫಿ, ಖಾಲಿ ಚೀಲ ಹಾಜಿ ಹುಸೇನ್ ಸಾಬ್, ಹಾಜಿ ಅಬ್ದುಲ್ ಹಮೀದ್ ಫಾರೂಕಿ, ಹಂಡಿ ಹುಸೇನ್ ಸಾಬ್,ಜೆ ನಾಗೇಂದ್ರ ಗೌಡ , ಬಿಕೆ ಅಲ್ಲಾಭಕ್ಷಿ ಇದ್ದರು. 

ಸುದ್ದಿ ಓದಿ