ಕಾಯಕಯೋಗಿ ಗುರು ಸಿದ್ದರಾಮೇಶ್ವರರ ಜಯಂತೋತ್ಸವ
ಶಿಗ್ಗಾವಿ 16: ಗುರು ಸಿದ್ದರಾಮೇಶ್ವರರ ಹಾದಿಯಲ್ಲಿ ನಾವೇಲ್ಲರೂ ಒಂದೇ ಕುಟುಂಬದವರಂತೆ ಬಾಳಬೇಕು ಎಂದು ಭೋವಿ (ವಡ್ಡರ) ಸಮಾಜದ ತಾಲೂಕಾ ಅಧ್ಯಕ್ಷ ಅರ್ಜುನ ಹಂಚಿನಮನಿ ಹೇಳಿದರು.
ಪಟ್ಟಣದ ತಹಶೀಲ್ದಾರರ ಕಾರ್ಯಾಲಯದಲ್ಲಿ ತಾಲೂಕಾ ಆಡಳಿತದಿಂದ ಹಮ್ಮಿಕೊಂಡ ಕಾಯಕಯೋಗಿ ಗುರು ಸಿದ್ದರಾಮೇಶ್ವರರ 850 ನೇ ಜಯಂತೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಅಧಿಕಾರಿಗಳು ಭಾಗವಹಿಸದಿರುವದು ಮತ್ತು ಸಭೆಗೆ ಹೇಳದಿರುವದು ಬೇಸರ ತದಿಂದೆ ಇನ್ನೂ ಇದನ್ನು ಸಹಿಸುವದಿಲ್ಲ ಎಂದರು. ತಾಲೂಕಿನ ಮುತ್ತಳ್ಳಿಯಲ್ಲಿ ಅದ್ದೂರಿಯಾಗಿ ಗುರುಗಳ ಸಮ್ಮೂಖದಲ್ಲಿ ಜಯಂತಿ ಆಚರಿಸಿ ನಮ್ಮ ಸಮಾಜದವರಿಗೆ ಅಭಿನಂದನೆ ಸಲ್ಲಿಸುತ್ತೇವೆ ನಾವು ಇನ್ನಷ್ಟು ಸಂಘಟಿತರಾಗಿ ಸಮಾಜದ ಅಭಿವೃದ್ದಿಗೆ ಶ್ರಮಿಸೋಣ ಕಾಯಕವೇ ದೇವರು ಎಂದು ಬಾಳೋಣ ಎಂದರು.
ಭಾಜಪ ತಾಲೂಕಾ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ ಕಾಯಕ ನಿಷ್ಟೆಯಿಂದ ಜಗತ್ತಿಗೆ ಮಾಧರಿಯಾಗಿ ಹೆಸರಾದವರು ಗುರು ಸಿದ್ದರಾಮೇಶ್ವರರು, ನಮ್ಮ ನಿಷ್ಟೇಯ ಕಾಯಕದಿಂದ ನಾಯಕನಾಗುತ್ತೇವೆ ಎಂಬ ಸಂದೇಶ ನೀಡಿದವರು, 68 ಸಾವಿರ ವಚನಗಳನ್ನು ಬರೆದವರು ಬೆರಳೆಣಿಕೆಷ್ಟು ಮಾತ್ರ ಪ್ರಚಲಿತದಲ್ಲಿವೆ, ಅವರು ವಿಶ್ವಕ್ಕೆ ಮಾಧರಿಯಾಗಿದ್ದಾರೆ ಎಂದು ಹೇಳಿದರು.
ಮಾಜಿ ಶಾಸಕ ಸೈಯದ್ ಅಜ್ಜೀಂಪೀರ ಖಾದ್ರಿ ಮಾತನಾಡಿ ಗುರು ಸಿದ್ದರಾಮೇಶ್ವರರ ತತ್ವ, ಸಿದ್ದಾಂತ ಹಾಗೂ ಆದರ್ಶಗಳನ್ನು ಪಾಲಿಸಬೇಕಿದೆ, ಈ ಸಮಾಜದ ಎಲ್ಲ ಬೇಡಿಕೆಗಳನ್ನು ಈಡೇರುವಂತಾಗಲಿ ಎಂದು ಪ್ರಾರ್ಥಿಸುತ್ತೆನೆ, ಈ ಸಮಾಜ ಪ್ರಾಮಾಣಿಕತೆಯ ಸಮಾಜ, ಎಲ್ಲ ಜಯಂತಿಯಗಳನ್ನು ಶ್ರದ್ಧಾ ಭಕ್ತಿಯಿಂದ ಆಚರಿಸೋಣ, ಚುನಾವಣೇ ಸಮಯ ಬಿಟ್ಟಿ ಉಳಿದ ಸಯಮ ಸಹೋದರರಂತೆ ಬಾಳೋಣ ಟೀಕೆ ಟಿಪ್ಪಣಿ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳದೆ ಸಮಾಜದ ಅಭಿವೃದ್ದಿಗೆ ಸಿದ್ದರಾಗೋಣ ಎಂದರು.
ಭೋವಿ ಸಮಾಜದ ಮುಖಂಡ ಹಾಗೂ ನ್ಯಾಯವಾದಿ ಹನಮಂತಪ್ಪ ಬಂಡಿವಡ್ಡರ ಮಾತನಾಡಿ, ನಮ್ಮ ಸಮಾಜಕ್ಕೆ ಶಿಕ್ಷಣ ಜೊತೆಗೆ ಉದ್ಯೋಗ ಸಿಗಬೇಕು, ಸಮಾಜಕ್ಕೆ ಸಮೂದಾಯ ಭವನ ನಿರ್ಮಾಣವಾಗಬೇಕು, ನಮ್ಮನ್ನು ಎಸ್ಸಿ ಪಟ್ಟಿಯಿಂದ ತೆಗೆಯುವ ಹುನ್ನಾರ ನಡೆದಿದೆ, ಸದಾಶಿವ ಆಯೋಗ ಜಾರಿಗೆ ಬೇಡ, ಸಮಾಜವನ್ನು ಅಭಿವೃದ್ದಿ ಪಡಿಸಿ ಮುಖ್ಯವಾಹಿನಿಗೆ ತರಲು ಶ್ರಮಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಉಪ ತಹಶೀಲ್ದಾರ ರವಿ ಕೋರವರ, ಸಮಾಜದ ಮುಖಂಡರಾದ ನಾಗರಾಜ ಹಾವೇರಿ, ಹನಮಂತಪ್ಪ ಬಡ್ನಿ, ಶೆಟ್ಟಪ್ಪ ವಡ್ಡರ, ಮಂಜುನಾಥ ಗುಡಗೇರಿ, ಮಹೇಶ ಕುರಂದವಾಡ, ಹನುಮಂತ ಬಾರಂಗಿ, ವೆಂಕಟೇಶ ಬಂಡಿವಡ್ಡರ ನಿಂಗಪ್ಪ ಶಿವಳ್ಳಿ, ಹನಮಂತ ಶಿವಳ್ಳಿ, ಮುಖಂಡರಾದ ಬಸವರಾಜ ನಾರಾಯಣಪೂರ, ಕೆಎಮ್ಎಫ್ ಉಪಾಧ್ಯಕ್ಷ ಬಸನಗೌಡ ಮೇಳಿನಮನಿ, ವಾಲ್ಮೀಕಿ ಸಮಾಜದ ಅಧ್ಯಕ್ಷ ಬಸವನಗೌಡ ರಾಮನಗೌಡ್ರ, ಬಸವರಾಜ ಬಸರಿಕಟ್ಟಿ, ರವಿ ಬಿಶೆಟ್ಟಿ, ಮಂಜುನಾಥ ಮಿರ್ಜಿ, ಮಲ್ಲಿಕಾರ್ಜುನ ಹಡಪದ, ರೈತ ಮುಖಡರಾದ ಮುತ್ತಣ್ಣ ಗುಡಗೇರಿ, ಶಂಕರಗೌಡ ಪಾಟೀಲ್, ಪುರಸಭೆ ನಾಮನಿರ್ದೇಶಿತ ಸದಸ್ಯ ವಿಶ್ವನಾಥ ಬಂಡಿವಡ್ಡರ, ಸೇರಿದಂತೆ ವಿವಿಧ ಅಧಿಕಾರಿಗಳು ವಿವಿಧ ಸಮಾಜಗಳ ಮುಖಂಡರು ಉಪಸ್ಥಿತರಿದ್ದರು.