ಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮ
ಶಿಗ್ಗಾವಿ 03: ಪ್ರತಿ ಜಯಂತಿ ಆಚರಣೆಗಳ ಉದ್ದೇಶಗಳನ್ನು ಅರ್ಥೈಸಿಕೊಂಡು ಶರಣರ ಮುಖ್ಯ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಜಯಂತಿಗಳ ಆಚರಣೆಗೆ ಅರ್ಥ ಬರುತ್ತದೆ ಎಂದು ತಹಶೀಲ್ದಾರ ಸಂತೋಷ ಹಿರೇಮಠ ಹೇಳಿದರು.
ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ತಾಲೂಕಾ ಆಡಳಿತದ ವತಿಯಿಂದ ಹಮ್ಮಿಕೊಂಡ ಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಡಪದ ಸಮಾಜದವರು ಶ್ರಮ ಜೀವಿಗಳಾಗಿದ್ದಾರೆ, ಶ್ರಮಿ ಜೀವಿಗಳಾಗಿದ್ದಾಗ ಮಾತ್ರ ಸಾಧನೆ ಮಾಡಲು ಸಾದ್ಯ, ಎಂದಿಗೂ ನಾವೇಲ್ಲರೂ ಆ ಶರಣರ ತತ್ವಗಳನ್ನು ಪಾಲಿಸಿ ಶ್ರಮ ಜೀವಿಗಳಾಗಿ ಬದುಕೋಣ, ಹಡಪದ ಸಮುದಾಯಕ್ಕೆ ಸರಕಾರದಿಂದ ದೊರಕುವ ಪ್ರತಿ ಕೆಲಸ ಕಾರ್ಯವನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಾವು ಮಾಡುತ್ತೇವೆ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾನಂದ ಮ್ಯಾಗೇರಿ ಜಯಂತಿಯಲ್ಲಿ ಭಾಗಿಯಾಗಿ ಮಾತನಾಡಿ, 12 ನೇ ಶತಮಾನದಲ್ಲಿ ಶರಣರು ಪ್ರತಿಯೋಬ್ಬರ ಬದುಕಿಗೆ ಬೆಳಕನ್ನು ನೀಡಿದ ಶತಮಾನ, 12 ನೇ ಶತಮಾನ ಅಂದರೆ ಅದು ಧರ್ಮದ ಕ್ರಾಂತಿಯ ಕಾಲಮಾನ, ಧರ್ಮ, ಧಾನ, ದಯೇ, ಜೀವನ, ಮನುಷ್ಯತ್ವ, ಮಾನವೀಯತೆ, ಧ್ಯಾನ, ಜ್ಞಾನ, ಗಾನ ಎಂಬುದನ್ನು ತಿಳಿಸುವ ಕಾಲಮಾನವಾಗಿತ್ತು, ಅಂತಹ ಕಾಲಮಾನದಲ್ಲಿ ಹಡಪದ ಅಪ್ಪಣ್ಣನವರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಕಾಯಕ ನಿಷ್ಠೆಯನ್ನು ಮೆರೆದಿದ್ದರು, ಶಿವಶರಣರ ವಚನಗಳ ಸಂದೇಶಗಳು ನಮಗೆ ಇಂದಿಗೂ ಮಾದರಿಯಾಗಿವೆ, ಕಾಯಕದಲ್ಲಿ ನಂಬಿಕೆಯಿಟ್ಟ ಈ ಹಡಪದ ಸಮಾಜ ಸರ್ವ ಸಮುದಾಯಗಳಿಗೆ ಮಾದರಿಯಾಗಲಿ, ಈ ಸಮುದಾಯಕ್ಕೆ ಅಭಿವೃದ್ದಿ ನಿಗಮ ಮಾಡಿ ಬಸವರಾಜ ಬೊಮ್ಮಾಯಿಯವರು ಹಡಪದ ಸಮುದಾಯದ ಬೆಂಬಲಕ್ಕೆ ನಿಂತಿದ್ದಾರೆ ಮುಂದಿನ ದಿನಗಳಲ್ಲಿ ಬೊಮ್ಮಾಯಿಯವರ ದಿನಾಂಕ ಪಡೆದು ಜಯಂತಿ ಆಚರಣೆಯನ್ನು ವಿಜೃಂಭಣೆಯಿಂದ ಮಾಡೋಣ ಎಂದರು.
ಹಡಪದ ಸಮಾಜದ ತಾಲೂಕಾದ್ಯಕ್ಷ ಮಲ್ಲಿಕಾರ್ಜುನ ಹಡಪದ ಮಾತನಾಡಿದರು, ಕಾರ್ಯಕ್ರಮದಲ್ಲಿ ಗ್ರೇಡ್2 ತಹಶೀಲ್ದಾರ ರವಿ ಕೊರವರ, ಗೌರವಾದ್ಯಕ್ಷ ಬಸವರಾಜ ಹಡಪದ, ಉಪಾದ್ಯಕ್ಷ ಶಿವರಾಜ್ ಕ್ಷೌರದ, ಶಹರ ಅದ್ಯಕ್ಷ ವೀರೇಶ ಹಡಪದ, ವಿವಿಧ ಮುಖಂಡರಾದ ಅಶೋಕ ಕಾಳೆ, ರಾಜೀವ ಈಳಗೇರ, ಭೀಮಣ್ಣ ಶೇರೆಕಾರ, ಜಗದೀಶ ಹಡಪದ, ರುದ್ರ್ಪ ಹಡಪದ, ಮಾಲತೇಶ ಹಡಪದ, ಶಿವಕುಮಾರ ಮಡ್ಲಿಕರ ಸೇರಿದಂತೆ ತಾಲೂಕಿವ ವಿವಿಧ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರ ಕಾರ್ಯಾಲಯದ ಸಿಬ್ಬಂದಿಗಳು ಹಾಗೂ ಹಡಪದ ಸಮುದಾಯ ಮುಖಂಡರು ಇದ್ದರು.