ನಿಜಶರಣ ಅಂಬಿಗರ ಚೌಡಯ್ಯನವರ ಜಯಂತೋತ್ಸವ
ಲೋಕದರ್ಶನ ವರದಿ
ರಾಣಿಬೆನ್ನೂರ 21: ವಚನಕಾರರಲ್ಲಿ ಶ್ರೇಷ್ಠರಾಗಿ, ಸಮಾಜದಲ್ಲಿನ ಅಂಕು ಡೊಂಕು ತಿದ್ದುವದರ ಮೂಲಕ ವೈಚಾರಿಕ ಕ್ರಾಂತಿ ಹರಿಸಿದ ಅಂಬಿಗರ ಚೌಡಯ್ಯನವರು ವಚನಕಾರರಿಗೆ ಪ್ರಜ್ವಲವನಾಗಿ ಬೆಳಗುವ ಧೃವತಾರೆಯಾಗಿ ಎಲ್ಲರ ಮೈನಗಳಲ್ಲಿ ನಿಲ್ಲುವಂತೆ ಮಾಡಿದ್ದಾರೆ ಎಂದು ಗಂಗಾ ವಿವಿಧ ಉದ್ದೇಶಗಳ ಸಹಕಾರಿ ಸಂಘದ ಅಧ್ಯಕ್ಷ ರತ್ನಾಕರ ಕುಂದಾಪುರ ಹೇಳಿದರು.
ಶುಕ್ರವಾರ ನಗರದ ಗಂಗಾ ವಿವಿಧ ಉದ್ದೇಶಗಳ ಸಹಕಾರಿ ಸಂಘದ ಸಭಾಭವನದಲ್ಲಿ ನಡೆದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತೋತ್ಸದಲ್ಲಿ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಅತ್ಯಂತ ನಿರ್ಭಿಡೆಯ ಸಮಾಜ ಸುಧಾರಕ, ಆಧ್ಯಾತ್ಮಿಕ ಅನುಭಾವಿಯಾಗಿದ್ದ ಚೌಡಯ್ಯ ಮೂಲತಹ ನಿಜಶರಣರಾಗಿದ್ದರು. ಆತನಲ್ಲಿ ಬಸವಣ್ಣನವರ ವೈಚಾರಿಕತೆ, ಅಲ್ಲಮಪ್ರಭುವಿನ ಅನುಭಾವಿಕ ನಿಲುವು ಬೆರೆತು-ವಿಶಿಷ್ಟ ಅನುಭವ ಮತ್ತು ಅನುಭಾವಗಳೆರಡೂ ಸೇರಿ ಮಹಾತ್ಮನೆನಿಸಿಕೊಂಡವರು ಎಂದರು.
ತಾಲೂಕಿನ ಚೌಡಯ್ಯದಾನಪುರದ ತುಂಗಭದ್ರಾ ನದಿಯ ತಟದಲ್ಲಿ ಐಕ್ಯರಾಗಿರುವ ಅಂಬಿಗರ ಚೌಂಡಯ್ಯನು ಬಸವಣ್ಣನವರ ಸಮಕಾಲಿನರಾಗಿ ಕನ್ನಡ ಸಾಹಿತ್ಯದಲ್ಲಿ ಬಂಡಾಯದ ಮೊದಲ ಹೆಜ್ಜೆಗಳನ್ನು ಅತ್ಯಂತ ಸ್ಪಷ್ಟವಾಗಿ ಚಾಪಿಸಿದ ವಚನಕಾರರಾಗಿದ್ದರು. ಬಸವಣ್ಣನವರ ವಚನ ಚಳುವಳಿಗೆ ಮುಖ್ಯ ಆಧಾರ ಸ್ತಂಭಗಳಾಗಿದ್ದ ಅವರು ಇತರ ಕೆಳ ವರ್ಗಗಳ ಶರಣರು ಮೂಕರಾಗುವಂತೆ ಮಾಡಿದ್ದ ಸಮಯದಲ್ಲಿ ಬಸವಣ್ಣನವರ ಪ್ರಭಾವ ಪ್ರೇರಣೆಯಿಂದ ಕನ್ನಡ ಸಾಹಿತ್ಯಕ್ಕೆ ಸತ್ವಶಾಲಿಯಾದ ವಚನಗಳನ್ನು ನೀಡಿ ಅವರು ದಾರೀದೀಪವಾಗಿದ್ದರು ಎಂದರು.
ಇದು ಸಣ್ಣ ಸಾಧನೆ ಏನಲ್ಲ ಶೋಷಿತ ಸಮುದಾಯದ ದುಃಖ ದುಮ್ಮಾನಗಳನ್ನು ಕಠೋರ ಭಾಷೆಯಲ್ಲಿ ನಿರೂಪಿಸುವ ಅವರ ಧೈರ್ಯ ಇಂದಿನ ಭಂಡಾಯ ಸಾಹಿತಿಗಳಿಗೆ ಬರಲಾರದೆಂದರೆ ಅತಿಶಯೋಕ್ತಿ ಎನಲ್ಲ, ಜ್ಞಾನವೆಂದರೆ ಕತ್ತಲು ಕೋಣೆಯಿಂದ ಕಣ್ಣುಕಟ್ಟಿಕೊಂಡು ಇಲ್ಲದ ಕರಿಬೆಕ್ಕನ್ನು ಹುಡುಕಾಡಿದಂತೆ, ನೋಟ ಸ್ಪರ್ಶ ಮತ್ತು ಶಬ್ದಕ್ಕೆ ನಿಲುಕಲಾರದ ಅಪಾರಜ್ಞಾನ ಭಂಡಾರ ಅವರಲ್ಲಿತ್ತು ಎಂದರು.
ಶರಣರ ಮಹಾಕ್ರಾಂತಿಯಲ್ಲಿ ಅಂಬಿಗರ ಚೌಡಯ್ಯ ವಚನಕಾರಲ್ಲಿ ಒಬ್ಬ ಕ್ರಾಂತಿ ಪುರುಷನಾಗಿ ಹೊರವೊಮ್ಮಿದ ಅನಘ್ರ್ರ್ಯ ರತ್ನಗಳಲ್ಲಿ ಅಂಬಿಗರ ಚೌಡಯ್ಯನವರು ಒಬ್ಬರಾಗಿದ್ದಾರೆ. ಕೆಳವರ್ಗದಲ್ಲಿ ಜನ್ಮವೆತ್ತಿ ಮಹಾನುಭಾವಿ ಅಣ್ಣ ಬಸವಣ್ಣನವರ ಒಡನಾಟದಲ್ಲಿ ಬೆಳೆದು ಶ್ರೇಷ್ಟ ಜ್ಞಾನಿಯಾಗಿ ಶಿವಶರಣರಲ್ಲಿ ಮಹೊನ್ನತ ಸ್ಥಾನ ಪಡೆದು ಆಧ್ಯಾತ್ಮಿಕ ಶಿಖರಮುಟ್ಟಿ ಶರಣ ಧರ್ಮದ ಕೀರ್ತಿ ಪತಾಕೆಯನ್ನ ಎತ್ತಿಹಿಡಿದವರು ಚೌಡಯ್ಯನವರು ಎಂದರು.
ನಿವೃತ್ತ ಬ್ಯಾಂಕ್ ಮ್ಯಾಜೇರ ಬಸವರಾಜ ಗುರ್ಕಿ, ನ್ಯಾಯವಾದಿ ಕೆ.ಶಿವಲಿಂಗಪ್ಪ, ನಿವೃತ್ತ ದೈಹಿಕ ಶಿಕ್ಷ ಎಚ್.ಡಿ. ಬಡಕರಿಯಪ್ಪನವರ ಮಾತನಾಡಿದರು. ನಿರ್ದೇಶಕ ಕೃಷ್ಣಮೂರ್ತಿ ಸುಣಗಾರ, ಹನುಮಂತಪ್ಪ ಕುರವತ್ತಿ, ಗಣೇಶ ಜಡಮಲಿ, ಲಕ್ಷ್ಮಣ ದಾಸರ, ವೀರಣ್ಣ ಬಾರ್ಕಿ, ಲಕ್ಷ್ಮಣ ಸುಣಗಾರ, ರಾಜೇಂದ್ರ ಅಂಬಿಗೇರ, ಶಿವಲಿಂಗಪ್ಪ ಮೇದಾರ, ಜಲಜಾಕ್ಷಿ ಕುರ್ಗಿ, ರೇಣುಕಾ ಅಬ್ಬಿಗೇರ, ಅನ್ನಪೂರ್ಣ ಬಾರ್ಕಿ, ರಾಮಪ್ಪ ಲಮಾಣಿ, ರಾಜು ಅಡಿವೆಪ್ಪನವರ, ನಿತ್ಯಾನಂದ ಕುಂದಾಪುರ, ಕಾಳಪ್ಪ ಅಂಬಿಗೇರ, ಆಂಜನೇಯ ಬಾಳಿಕಾಯಿ, ಮಂಜುನಾಥ ಬಾಳಿಕಾಯಿ ಸೇರಿದಂತೆ ಮತ್ತಿತರರು ಇದ್ದರು.