ಪಂಚಮಸಾಲಿಗಳಿಗೆ ಮೀಸಲಾತಿ ನೀಡದಂತೆ ಸಿಎಂಗೆ ಬಿಎಸ್ವೈ ಒತ್ತಡ ಜಯಮೃತ್ಯುಂಜಯಶ್ರೀ ಆರೋಪ: ಮುಖ್ಯಮಂತ್ರಿಗಳ ಮನೆ ಮುಂದೆ ಒಂದು ದಿನದ ಬೃಹತ್ ಸತ್ಯಾಗ್ರಹ
ಲೋಕದರ್ಶನ ವರದಿ
ಶಿಗ್ಗಾವಿ 21: ಮಾಜಿ ಮುಖ್ಯಮಂತ್ರಿಯಡಿಯೂರ್ಪ ಪಂಚಮಸಾಲಿಗಳಿಗೆ ಮೀಸಲಾತಿ ನೀಡದಂತೆ ಬೊಮ್ಮಾಯಿ ಅವರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇದರಿಂದಾಗಿ ಬೊಮ್ಮಾಯಿ ನಮಗೆ ಮೀಸಲಾತಿ ಘೋಷಣೆ ಮಾಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಯಡಿಯೂರ್ಪ ನೀವು ಇದೆ ರೀತಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕುತ್ತಿದ್ದರೆ ನೀವು ಹೋದಲೆಲ್ಲಾ ನಿಮಗೆ ಕಪ್ಪು ಪಟ್ಟಿ ಪ್ರದರ್ಶನ ಮಾಡಬೇಕಾಗುತ್ತದೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮಿಗಳು ಹೇಳಿದರು.
ಪಟ್ಟಣದ ಸವಣೂರ ರಸ್ತೆಯಲ್ಲಿರುವ ಮುಖ್ಯಮಂತ್ರಿಗಳ ಮನೆ ಮುಂದೆ ಹಮ್ಮಿಕೊಂಡಿರುವ ಒಂದು ದಿನದ ಬೃಹತ್ ಸತ್ಯಾಗ್ರಹದ ವೇದಿಕೆಯಲ್ಲಿ ಮಕ್ಕಳಿಗೆ ಮಾಲಾರೆ್ಣ ಮಾಡುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನನಗೆ ಬಂಗಾರದ ಮಠಕಟ್ಟುವ ಅವಶ್ಯಕತೆ ಇಲ್ಲ. ನಮ್ಮ ಸಮಾಜದ ಬಂಗಾರದಂತಹ ಮಕ್ಕಳ ಭವಿಷ್ಯಕ್ಕಾಗಿ ಮೀಸಲಾತಿ ಕೊಡಿಸಬೇಕು ಎನ್ನುವ ಉದ್ದೇಶ ಹೊಂದಿದ್ದೇನೆ. ಚುನಾವಣೆ ಸಂದರ್ಭದಲ್ಲಿ ನಮ್ಮ ಸರ್ಕಾರ ಬಂದರೆ 24 ಗಂಟೆಯಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವುದಾಗಿ ಮೊದಲು ಘೋಷಣೆ ಮಾಡಿದವರು ಮಾಜಿ ಮುಖ್ಯಮಂತ್ರಿ ಯಡಿಯೂರ್ಪ ಆದರೆ, ಅವರು ತಮ್ಮ ಅವಧಿಯಲ್ಲಿ ತಾವುಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆಗಲಿಲ್ಲ. ಅವರ ರಾಜಿನಾಮೆ ನಂತರ ಅವರ ಆಪ್ತ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರು. ಅವರು ಸಹ 4ಬಾರಿ ಕೊಟ್ಟ ಮಾತನ್ನು ತಪ್ಪಿದ್ದಾರೆ. ಹೀಗಾಗಿ ಅಂತಿಮ ಹೋರಾಟಕ್ಕಾಗಿ ಸಮಾಜ ಸಜ್ಜಾಗಿದ್ದು, ಇಂದು ಮುಖ್ಯಮಂತ್ರಿಗಳ ಮನೆ ಮುಂದೆ ಒಂದು ದಿನದ ಬೃಹತ್ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ. ಈ ಹೋರಾಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸಮಾಜದವರು ಬಾಗವಹಿಸುವ ಮೂಲಕ ಯಶಸ್ವಿಗೊಳಿಸಿದ್ದಾರೆ, ಇಂದು ವಿಧಾನಸಭೆಯಲ್ಲಿ ಅಧಿವೇಶನ ನಡೆಯುತ್ತೀದ್ದು ಅಲ್ಲಿ ಸಮಾಜದ ಪರವಾಗಿ ಬಸನಗೌಡ ಪಾಟೀಲ ಯತ್ನಾಳ ಧ್ವನಿ ಎತ್ತಿದ್ದಾರೆ.ಸಿಎಂ ಇಂದು ಅದಿವೇಶನದಲ್ಲಿ ಮೀಸಲಾತಿ ಘೋಷಣೆ ಮಾಡಬೇಕು. ತಪ್ಪಿದಲ್ಲಿ ನಮ್ಮ ಹೋರಾಟ ಗುರಿ ಮುಟ್ಟುವ ವರೆಗೆ ಮುಂದುವರೆಯಲಿದೆ.
ಕೇವಲ ಸಮುದಾಯ ಭವನ ಕಟ್ಟುವುದು, ಡಿಜೆ, ಅನ್ನ ಸಂತರೆ್ಣ ಹಣ ನೀಡುವುದರಿಂದ ನಮ್ಮ ಸಮಾಜದ ಸಮಸ್ಯೆ ಬಗೆಹರಿಯುವುದಿಲ್ಲ. ನಮ್ಮ ಸಮಾಜದ ಕೃಪೆಯಿಂದ ಮೂರು ಬಾರಿ ಶಾಸಕರಾಗಿ ಸದ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದೀರಿ. ಅದರ ಋಣ ತೀರಿಸಿ. ನಮ್ಮ ಸಮಾಜದ ಜತೆಗೆ ಕುರುಬ ಮತ್ತು ವಾಲ್ಮೀಕಿ ಸಮಾಜಕ್ಕೂ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.
ಎಂದರು.
ಚನ್ನಮ್ಮ ಮೂರ್ತಿಗೆ ಮಾಲಾರೆ್ಣ : ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೃಹತ್ ಧರಣಿ ಸತ್ಯಾಗ್ರಹದ ನಿಮಿತ್ತ ಪ್ರತಿಭಟನಾ ಮೆರವಣಿಗೆ ನಡೆಯಿತು, ಪಟ್ಟಣದ ಚನ್ನಮ್ಮ ಸರ್ಕಲ್ನಲ್ಲಿ ಜಮಾಗೊಂಡ ಸಾವಿರಾರು ಜನರ ಸಮ್ಮುಖದಲ್ಲಿ ಶ್ರೀಗಳು ಚನ್ನಮ್ಮಳ ಮೂರ್ತಿಗೆ ಮಾಲಾರೆ್ಣ ಮಾಡುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.
ಶಶಿಧರ ಯಲಿಗಾರ ಅವರಿಂದ ಪ್ರಸಾದ ಸೇವೆ : ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಮಂಗಳವಾರ ಶಿಗ್ಗಾಂವಿ ಪಟ್ಟಣದಲ್ಲಿ ಬೃಹತ್ ಸತ್ಯಾಗ್ರಹಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದಜನರಿಗೆ ಸಿ.ಬಿ.ಯಲಿಗಾರ ಸೇವಾ ಸಂಸ್ಥೆ ಅಧ್ಯಕ್ಷ ಶಶಿಧರ ಯಲಿಗಾರ ಊಟ ಮತ್ತು ನೀರಿನ ವ್ಯವಸ್ಥೆಕೈಗೊಂಡಿದ್ದರು. ಜನರುಇರುವಲ್ಲಿಗೆ ಟ್ರ್ಯಾಕ್ಟರ್ಗಳ ಮೂಲಕ ಊಟವನ್ನು ಪೂರೈಸಿ ಜನರ ಪ್ರಶಂಸೆಗೆ ಪಾತ್ರರಾದರು.
ಬಿಗಿ ಪೋಲೀಸ್ ಬಂದೋಬಸ್ತ್ : ಶಿಗ್ಗಾವಿ ಪಟ್ಟಣದಲ್ಲಿ ಪಂಚಮಸಾಲಿ ಹೋರಾಟಕ್ಕೆ ಎಸ್ಪಿ ಹನುಮಂತರಾಯ ನೇತೃತ್ವದಲ್ಲಿ 200 ಕ್ಕೂ ಹೆಚ್ಚು ಪೋಲಿಸರನ್ನು ಬಿಗಿ ಪೋಲೀಸ್ ಬಂದೋಬಸ್ ವಹಿಸಲಾಗಿತ್ತು.
ಮಾಜಿ ಸಚಿವ ವಿನಯಕುಲಕರ್ಣಿ, ವಿಜಯಾನಂದ ಕಾಶೆಪ್ಪನವರ, ಪಿ.ಸಿ.ಸಿದ್ದನಗೌಡ್ರ, ಎ.ಬಿ.ಪಾಟೀಲ, ಎಚ್.ಎಸ್.ಶಿವಶಂಕರ್ಪ, ಸೋಮಣ್ಣ ಬೇವಿನಮರದ, ಶಶಿಧರ ಯಲಿಗಾರ, ಮಲ್ಲೇಶಣ್ಣ ಮೈಸೂರ, ಬಸವರಾಜ ಹಾಲಪ್ಪನವರ, ಪಿ.ಎಮ್.ಪಾಟೀಲ, ಶಿವಾನಂದ ಬಾಗೂರ, ಭ.ಫ.ಯಲಿಗಾರ, ಎಸ್.ಕೆ.ಅಕ್ಕಿ, ಅನಿತಾ ಶೆಟ್ಟರ, ನಿಂಗಪ್ಪಕರೆಕಟ್ಟಿ, ಪಾಲಾಕ್ಷಪ್ಪ ಹಾವಣಗಿ, ಮಾದೇವಪ್ಪ ಅಗಸರ,ಪ್ರೇಮಾ ಪಾಟೀಲ, ವಸಂತಾ ಬಾಗೂರ ಮತ್ತಿತರರು ಉಪಸ್ಥಿತರಿದ್ದರು.