ಮನರಂಜನೆ

ಜಯಾ 4ನೇ ಪುಣ್ಯತಿಥಿ : ಕಂಗನಾ ಶ್ರದ್ಧಾಂಜಲಿ

ಜಯಾ 4ನೇ ಪುಣ್ಯತಿಥಿ : ಕಂಗನಾ ಶ್ರದ್ಧಾಂಜಲಿ

ಹೈದರಾಬಾದ್,  ಡಿಸೆಂಬರ್ 05: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ನಾಲ್ಕನೇ ವರ್ಷದ ಪುಣ್ಯ ತಿಥಿ ಸಂದರ್ಭದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್  ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಜಯಲಲಿತಾ ಅವರ ಬಯೋಪಿಕ್‌ನಲ್ಲಿ ನಟಿಸುತ್ತಿರುವ ನಟಿ ಕಂಗನಾ, ಚಿತ್ರದ ಮೇಕಿಂಗ್ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಪವರ್‌ಫುಲ್ ಮಹಿಳೆ, ಮಾಜಿ ಮುಖ್ಯಮಂತ್ರಿಯನ್ನು ಸ್ಮರಿಸಿ ನಮಿಸಿದ್ದಾರೆ.

''ಜಯ ಅಮ್ಮನ ಪುಣ್ಯ ತಿಥಿಯಂದು ನಮ್ಮ ತಲೈವಿ ಚಿತ್ರತಂಡದಿಂದ ಕೆಲವು ಮೇಕಿಂಗ್ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದೇವೆ. ಅದಕ್ಕಾಗಿ ನಮ್ಮ ತಂಡಕ್ಕೆ ಹಾಗೂ ವಿಶೇಷವಾಗಿ ಈ ಚಿತ್ರವನ್ನು ಬೇಗ ಮುಗಿಸಬೇಕು ಎಂಬ ಉದ್ದೇಶದಿಂದ ಸೂಪರ್ ಮ್ಯಾನ್ ಅಂತೆ ಕೆಲಸ ಮಾಡುತ್ತಿರುವ ವಿಜಯ್ ಸರ್‌ಗೆ ವಿಶೇಷ ಧನ್ಯವಾದಗಳು'' ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.

ತಲೈವಿ ಸಿನಿಮಾದ ಚಿತ್ರೀಕರಣ ಕೇವಲ ಇನ್ನೊಂದು ವಾರ ಮಾತ್ರ ಬಾಕಿ ಇದೆ. ಹಿಂದಿ, ತಮಿಳು ಹಾಗೂ ತೆಲುಗಿನಲ್ಲಿ ತಯಾರಾಗುತ್ತಿರುವ ಚಿತ್ರವನ್ನು ಎಎಲ್ ವಿಜಯ್ ನಿರ್ದೇಶನ ಮಾಡುತ್ತಿದ್ದಾರೆ.

ಪ್ರಸ್ತುತ, ಕಂಗನಾ ರಣಾವತ್ ಅವರು ಹೈದರಾಬಾದ್‌ನಲ್ಲಿ ತಲೈವಿ ಸಿನಿಮಾ ಶೂಟಿಂಗ್ ಮಾಡುತ್ತಿದ್ದಾರೆ. ಇನ್ನು ಅರವಿಂದ್ ಸ್ವಾಮಿ ಅವರು ಎಂಜಿಆರ್ ದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.    

ಪ್ರಕಾಶ್ ರೈಅವರು ಕರುಣಾನಿಧಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿಷ್ಣುವರ್ಧನ ಇಂಧುರಿ ಮತ್ತು ಶೈಲೇಶ್ ಆರ್ ಸಿಂಗ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಸುದ್ದಿ ಓದಿ