ಸಿಂಧಗಿ

ಸಿಂದಗಿ ತಾಲೂಕು ನೂತನ ಜಿಲ್ಲೆಗಾಗಿ ಆಗ್ರಹಿಸಿ ಜಯ ಕರ್ನಾಟಕ ಮನವಿ

ಸಿಂದಗಿ ತಾಲೂಕು ನೂತನ ಜಿಲ್ಲೆಗಾಗಿ ಆಗ್ರಹಿಸಿ ಜಯ ಕರ್ನಾಟಕ ಮನವಿ

ಸಿಂದಗಿ 10; ಕರ್ನಾಟಕ ರಾಜ್ಯದಲ್ಲಿ ಐತಿಹಾಸಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಹೆಸರುವಾಸಿಯಾಗಿರುವ ವಿಜಯಪುರ ಜಿಲ್ಲೆಯು ಬಹುದೊಡ್ಡ ಜಿಲ್ಲೆಯಾಗಿದ್ದು, ಈಗ ವಿಭಜಿಸಿ ಒಂದು ಹೊಸ ಜಿಲ್ಲೆ ಸೃಷ್ಟಿ ಮಾಡಬೇಕೆಂಬ ಕೂಗು ಅಲ್ಲಲ್ಲಿ ಕೇಳಿ ಬರುತ್ತಿದೆ. ವಿಜಯಪುರ ಜಿಲ್ಲೆ ವಿಭಜಿಸಿ ಹೊಸ 

ಜಿಲ್ಲೆ ಮಾಡುವುದಾದರೇ ಸಿಂದಗಿ ತಾಲೂಕು ಹೊಸ ಜಿಲ್ಲೆಯಾಗಲಿ ಎಂದು ಸಿಂದಗಿ ತಾಲೂಕಾ ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ನಿಂಗರಾಜ ಬಗಲಿ ಆಗ್ರಹಿದರು. 

ಈ ಸಂದರ್ಭದಲ್ಲಿ ಅಶೋಕ ಅಲ್ಲಾಪುರ, ದಾನಪ್ಪ ಜೋಗುರ, ನಿಂಗನಗೌಡ ಪಾಟೀಲ, ಸಿದ್ರಾಮ ರಂಜುಣಗಿ, ಶಿವಕುಮಾರ ಶಿವಶಿಂಪಗೇರ, ಶಿವಾನಂದ ಕಲಬುರ್ಗಿ, ಸಿದ್ದಬಸವ ಕುಂಬಾರ, ಗುರು ತಾರಾಪುರ, ಗುರು ಬಸರಕೋಡ, ಕುಮಾರ ಬಗಲಿ, ಅಣ್ಣಾರಾಯ ಈಳಗೆರ ಸೇರಿದಂತೆ ಹಲವರು ಮಾತನಾಡಿ, ಸಿಂದಗಿ ತಾಲೂಕು ವಿಜಯಪುರ ಜಿಲ್ಲೆಯ ಎಲ್ಲಾ ತಾಲೂಕುಗಳಿಗಿಂತ ಜನಸಂಖ್ಯೆಯಲ್ಲಿ ದೊಡ್ಡದಾಗಿದೆ. ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದೆ. ಆರ್‌.ಟಿ.ಓ. ಕಛೇರಿಯಲ್ಲಿ ವಾಹನ ನೊಂದಣಿಯಲ್ಲಿ ಸಿಂದಗಿ ಮುಂದಿದೆ. ರಾಷ್ಟ್ರೀಯ ಹೆದ್ದಾರಿ -50 ಸಿಂದಗಿ ನಗರದೊಂದಿಗೆ ಸಂಪರ್ಕ ಬೆಸೆದಿದ್ದು, ಸಾರಿಗೆ ಸಂಪರ್ಕಕ್ಕೆ ಉತ್ತಮ ನಿದರ್ಶನವಾಗಿದೆ. ಬರುವ ದಿನಗಳಲ್ಲಿ ಬ್ರಿಟಿಷರ ಕಾಲದಲ್ಲಿ ಸಮೀಕ್ಷೆ ಮಾಡಲಾಗಿದ್ದ ಶೇಡಬಾಳ-ಸಿಂದಗಿ ಶಹಾಬಾದ್ ರೇಲ್ವೇ ಮಾರ್ಗಸೃಷ್ಠಿಯಾಗುವ ಲಕ್ಷಣಗಳಿದ್ದು, ಪೂರ್ವ ದಿಕ್ಕಿನಲ್ಲಿ ಕಲಬುರಗಿ ಹಾಗೂ ಪಶ್ಚಿಮದಲ್ಲಿ ವಿಜಯಪುರ ಜಿಲ್ಲೆಯಲ್ಲಿ ವಿಮಾನ ನಿಲ್ದಾಣಗಳಿದ್ದು, ರಾಜ್ಯದ ರಾಜಧಾನಿ ಸಂಪರ್ಕಿಸಲು ಸಮಯದ ಉಳಿತಾಯವಾಗುವುದು ಮತ್ತ ಉತ್ತಮ ಕೈಗಾರೀಕರಣ ವಲಯವಾಗಿ ಪರಿವರ್ತಿಸಲು ಕೇಂದ್ರ ಸ್ಥಾನದಲ್ಲಿದೆ. ಕಲ್ಯಾಣ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದ ಹೆಬ್ಬಾಗಿಲು ಆಗಿ ಭೌಗೋಳಿಕವಾಗಿ ಎರಡು ವಲಯಗಳನ್ನು ಸಂಪರ್ಕಿಸಿ ಸಾಂಸ್ಕೃತಿಕ ಪ್ರತಿಬಿಂಬವಾಗಿದೆ. ಸುತ್ತಮುತ್ತಲಿನ ಎಲ್ಲ ತಾಲೂಕುಗಳಿಗೆ ಕೇವಲ 20 ರಿಂದ 40 ಕೀಮಿ ಅಂತರ ಹೊಂದಿದ್ದು, ಇದರಿಂದ ಇಂಡಿ ಜಿಲ್ಲೆಯನ್ನು ಸೃಷ್ಟಿಸದೇ, ಸಿಂದಗಿ ಜಿಲ್ಲಾ ಕೇಂದ್ರವೆಂದು ಪರಿಗಣಿಸಿ ಈ ಭಾಗದ ಜನರ ಬಹುದಿನದ ಬೇಡಿಕೆಯಾದ ಸಿಂದಗಿ, ಆಲಮೇಲ, ದೇವರಹಿಪ್ಪರಗಿ, ತಾಳಿಕೋಟಿ ಈ ತಾಲೂಕುಗಳನ್ನು ಗಮನದಲ್ಲಿಟ್ಟುಕೊಂಡು ಈ ಎಲ್ಲಾ ವಿಷಯಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಸಿಂದಗಿ ತಾಲೂಕನ್ನು ನೂತನ ಜಿಲ್ಲೆಯಾಗಿ ಸರಕಾರ ಘೋಷಣೆ ಮಾಡಬೇಕೆಂದು ಮುನ್ನಾ ಮುಜಾವರ, ಶರಣೂ ಮನಗೂಳಿ, ಭೀಮಣ್ಣ ಯಳಮೇಲಿ, ರಮೇಶ ರಾಠೋಡ, ರಾಗುಜಾ ಚವ್ಹಾಣ, ಸಿನ್ನು ರಾಠೋಡ, ರಮೇಶ ಎಂ ರಾಠೋಡ, ಮನೋಜಕುಮಾರ ಪಾಟೀಲ, ಅಶೋಕ ಪಾಟೀಲ, ಸಿಹಾಕ ಮುಜಾವರ, ಮಹ್ಮದಇಕ್ಬಾಲ ಮುಜಾವರ ಸೇರಿದಂತೆ ಅನೆಕ ಕನ್ನಡಪರ ಸಂಘಟನೆಯ ಪ್ರಮುಖರು ಆಗ್ರಹಿಸಿದರು. 


ಸುದ್ದಿ ಓದಿ