ನಂದ್ದೇಮ್ಮ ದೇವಿಯ ಜಾತ್ರಾ ಮಹೋತ್ಸವ
ಬೈಲಹೊಂಗಲ 18: ಪಟ್ಟಣದ ನಂದ್ದೇಮ್ಮದೇವಿನಗರದ ನಂದ್ದೇಮ್ಮ ದೇವಿಯ ಜಾತ್ರಾ ಮಹೋತ್ಸವವು ಶನಿವಾರ ಅದ್ಧೂರಿಯಾಗಿ ಜರುಗಿತು.ಜಾತ್ರೆಯ ನಿಮಿತ್ಯ ದೇವಿಗೆ ವಿಶೇಷ ಪೂಜೆ ಪುನಸ್ಕಾರ ನಡೆದವು. ದೇವಿಯನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ದೇವಿಯ ಪಲ್ಲಕ್ಕಿ ತೆಗೆದುಕೊಂಡು ನೂರಾರು ಭಕ್ತರು ಬೆಂಕಿ ಕಿಚ್ಚಹಾಯ್ದು ತಮ್ಮ ಭಕ್ತಿ ಭಾವ ಮೆರೆದರು. ಪಟ್ಟಣದ ಸುತ್ತಮುತ್ತಲಿನ ಜನತೆ ದೇವಸ್ಥಾನಕ್ಕೆ ತೆರಳಿ ದೇವಿಗೆ ಪೂಜೆ ಸಲ್ಲಿಸಿ ಪುನೀತರಾದರು. ಅಪಾರ ಸಂಖ್ಯೆಯ ಭಕ್ತಾಧಿಗಳು ಉರುಳು ಸೇವೆ ಸಲ್ಲಿಸಿದರು. ಗುತ್ತಿಗೆದಾರ ಎಲ್.ಬಿ.ಬಂಡಿವಡ್ಡರ, ಅರ್ಜುನ ಬಂಡಿವಡ್ಡರ, ಶಾಬು ಬಂಡಿವಡ್ಡರ, ಮಹಾಂತೇಶ ಬಡ್ಲಿ, ಹನುಮಂತ ಬಂಡಿವಡ್ಡರ, ರಾಮು ಬಂಡಿವಡ್ಡರ, ವಿನಾಯಕ ಒಡೆಯರ, ಲಕ್ಷ್ಮಣ ಬಂಡಿವಡ್ಡರ, ಮಹೇಶ ಬಂಡಿವಡ್ಡರ, ಮಾನಿಂಗ ಬಂಡಿವಡ್ಡರ, ಬಸವರಾಜ ಹೊಸಮನಿ, ಮಹಾಂತೇಶ ಹೊಸಮನಿ, ಹನುಮಂತ ಒಡೆಯರ, ಬಸವರಾಜ ಮಾರಿಹಾಳ, ಶಂಕರ ಬಂಡಿವಡ್ಡರ ಹಾಗೂ ಅಪಾರ ಸಂಖ್ಯೆಯ ಭಕ್ತಾಧಿಗಳು ಇದ್ದರು. ಪಟ್ಟಣದ ನಂದೆಮ್ಮ ನಗರದ ನಂದ್ದೇಮ್ಮ ದೇವಿಯ ಜಾತ್ರಾ ನಿಮಿತ್ಯ ಶನಿವಾರ ನೂರಾರು ಭಕ್ತರು ಬೆಂಕಿಯಲ್ಲಿ ಕಿಚ್ಚು ಹಾಯ್ದು ಭಕ್ತಿ ಭಾವ ಮೆರೆದರು.