ಬೈಲಹೊಂಗಲ

ಮನಸ್ಸಿನ ಕಲ್ಮಶ ಹೊರ ಹಾಕಲು ಆಂತರಿಕ ಕೃಷಿ ಬಹು ಮುಖ್ಯ : ಜ್ಯೋತಿ

ಮನಸ್ಸಿನ ಕಲ್ಮಶ ಹೊರ ಹಾಕಲು ಆಂತರಿಕ ಕೃಷಿ ಬಹು ಮುಖ್ಯ : ಜ್ಯೋತಿ
ತಾಲೂಕಿನ ಮಲ್ಲಮ್ಮನ ಬೆಳವಡಿಯ ಓ ಶಾಂತಿ ಸತ್ಸಂಗ ಕೇಂದ್ರದಲ್ಲಿ ಹೃದಯಮೋಹಿನಿ ದಿದಿಯವರ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು

ಬೈಲಹೊಂಗಲ 31: ಮನಸ್ಸಿನ ಕಲ್ಮಶ ಹೊರ ಹಾಕಲು ಆಂತರಿಕ ಕೃಷಿ ಬಹು ಮುಖ್ಯ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾನಿಲಯದ ಸಹೋದರಿ ಜ್ಯೋತಿ ಹೇಳಿದರು.

ತಾಲೂಕಿನ ಮಲ್ಲಮ್ಮನ ಬೆಳವಡಿಯ ಪ್ರಜಾಪಿತ ಬ್ರಹ್ಮಕುಮಾರಿ ಓಂ ಶಾಂತಿ ಸತ್ಸಂಗ ಕೇಂದ್ರದಲ್ಲಿ ಆಯೋಜಿಸಲಾಗಿದ್ದ  ಇತ್ತೀಚೆಗೆ ನಿಧನರಾದ ಬ್ರಹ್ಮಕುಮಾರಿ ಆಡಳಿತಾಧಿಕಾರಿ ಮಹಾತಪಸ್ವಿನಿ ರಾಜಯೋಗಿನಿ ದಾದಿ ಹೃದಯಮೋಹಿನಿಯವರ ಶ್ರದ್ಧಾಂಜಲಿ ಮತ್ತು ಸಹೋದರಿ ಜಾನಕಿ ದಿದಿಯವರ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜ್ಞಾನವೆಂಬ ಕಸಪೊರಕೆಯಿಂದ ಅಜ್ಞಾನದ ಕಸವನ್ನು ತೊಲಗಿಸುವ ಕೆಲಸವಾಗಬೇಕು. ದಿದಿ ಹರದಯಮೋಹಿನಿಯವರು ಹೆಸರಿಗೆ ತಕ್ಕಂತೆ ತಮ್ಮ ಅತ್ಯುನ್ನತ ಆಧ್ಯಾತ್ಮಿಕ ವ್ಯಕ್ತಿತ್ವದಿಂದ ಸರ್ವರ ಹೃದಯ ಗೆದ್ದವರು. ಅವರು ಹಾಕಿಕೊಟ್ಟ ಆದರ್ಶ ಮಾರ್ಗದಲ್ಲಿ ನಾವು ನಡೆಯಬೇಕು ಎಂದು ಹೇಳಿದರು.

ದೊಡವಾಡ, ಬೆಳವಡಿ, ಕಿತ್ತೂರು ಸೇರಿದಂತೆ ವಿವಿಧ ಭಾಗಗಳ ಓಂ ಶಾಂತಿ ಸತ್ಸಂಗ ಕೇಂದ್ರಗಳ ಭಕ್ತರು ಭಾಗವಹಿಸಿದ್ದರು. 

ಸಹೋದರಿ ಪಾರ್ವತಿ, ಮಲ್ಲಪ್ಪ ಯರಿಕಿತ್ತೂರ, ಚನ್ನಬಸಪ್ಪ ಅರಳಿಮರದ, ವೆಂಕಪ್ಪ ಯರಿಕಿತ್ತೂರ, ಮಲ್ಲಪ್ಪ ಭದ್ರಶೆಟ್ಟಿ, ಮೋಹನ ಅಕ್ಕಿ, ಮೂಗಪ್ಪ ಸಂಗೊಳ್ಳಿ, ರಮೇಶ ಸಪ್ಪಡ್ಲಿ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿ ಓದಿ