ಜನಹಿತ ಪಕ್ಷ ಪ್ರಣಾಳಿಕೆ ಬಿಡುಗಡೆ ಹಲವರು ಪಕ್ಷಕ್ಕೆ ಸೇರ್ಪಡೆ
ಬಳ್ಳಾರಿ:ಜನಹಿತ ಪಕ್ಷ ಸಂಸ್ಥಾಪಕ ಅಧ್ಯಕ್ಷ ವಿ ವಿಜಯ್ ಕುಮಾರ್, ಮತ್ತು ರಾಜ್ಯ ಕಾರ್ಯಾಧ್ಯಕ್ಷ ಡಿ ಪಾರ್ಥಸಾರಥಿ ಮತ್ತು ಪಕ್ಷದ ಇತರೆ ಕಾರ್ಯಕರ್ತರು ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದರು. ಬುಧವಾರ ಬುಡಾ ಕಾಂಪ್ಲೆಕ್ಸ್ ಜೆ.ಎಚ್.ಪಿ ಪಕ್ಷದ ಕಛೇರಿಯಲ್ಲಿ ಹಲವಾರು ಜನ ಸೇರ್ಪಡೆ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.
ತಮ್ಮ ಪಕ್ಷಕ್ಕೆ ಕಾರ್ಮಿಕರು, ವೀರಶೈವ ಮುಖಂಡರು ಸಾಮಾಜ ಸೇವಕರು ಆಗಿರುವ ಹಂಪೇರು ಹಾಲೇಶ್ ಗೌಡರನ್ನು ಪಕ್ಷಕ್ಕಷೆ ಸೇರ್ಪಡೆ ಮಾಡಿಕೊಂಡು ಅವರನ್ನೆ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಿದರು. ನಗರದ ಕುಮಾರಸ್ವಾಮಿರವರನ್ನು ಪಕ್ಷಕ್ಕೆ ಅಹ್ವಾನಿಸಿ ಸೇರ್ಪಡೆ ಮಾಡಿಕೊಂಡು ರಾಜ್ಯ ಘಟಕದ ಪರಿಶಿಷ್ಟ ಜಾತಿಯ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದರು.
ಜಯರಾಮ್ ಅವರು ಮಾತನಾಡುತ್ತಾ ತಮ್ಮ ಪಕ್ಷದಿಂದ ರಾಜ್ಯದಲ್ಲಿ ಐವತ್ತು ಜನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ಇದೇ ತಿಂಗಳ ಹತ್ತನೆ ದಿನಾಂಕದಂದು ಬಿಡುಗಡೆ ಮಾಡಲಾಗುವುದೆಂದರು. ನಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ರಾಜ್ಯ ರೈತರಿಗೆ ಕನಿಷ್ಟ ಒಂದು ಲಕ್ಷ ಗಳಿಸುವ ಯೋಜನೆ ರೂಪಿಸಲಾಗುವುದು. ಮತ್ತು ಎರಡು ಕೋಟಿ ಬಡ ಕುಟುಂಬಳಿಗೆ 30*40 ಅಳತೆಯ ನಿವೇಶನಗಳನ್ನು ನೀಡಲಾಗುವುದು, ಜನಪರ ಯೋಜನೆಗಳಾದ ಅಡುಗೆ ಅನಿಲವನ್ನು ಕೇವಲ 300ರೂಪಾಯಿಗಳಿಗೆ, ಪ್ರತಿ ಕುಟುಂಬಕ್ಕೆ ಮೂನ್ನೂರು ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುಲವುದು, ಮತ್ತು ವೃದ್ಧರಿಗೆ ಮತ್ತು ವಿಕಲಚೇತನರಿಗೆ ಪಿಂಚಣಿಯನ್ನು ಮೂರಿಂದ ಐದು ಸಾವಿರಕ್ಕೆ ಏರಿಸಲಾಗುವುದು, ಕೇವಲ ಹತ್ತು ಸಾವಿರ ರೂಪಾಯಿಗಳಿಗೆ ಅಟೋ ರಿಕ್ಷ ಕೊಳ್ಳುವ ಯೋಜನೆಯ ಜೊತೆಗೆ ಒಟ್ಟು 42 ಯೋಜನೆಗಳನ್ನು ಜಾರಿಗೊಳಿಸಲಾಗುವುದೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಯರಾಮ್ ರಾಜ್ಯ ಕಾರ್ಯಾಧ್ಯಕ್ಷ ಬಿ ಪಾರ್ಥಸಾರಥಿ, ಹಂಪೇರು ಹಾಲೇಶ್ ಗೌಡ, ಕುಮಾರಸ್ವಾಮಿ ಜಿ.ಪಿ ರಾವ್, ಲಾಲಪ್ಪ, ನಾಗರಾಜು, ಗುರುಸ್ವಾಮಿ, ರಾಜಶೇಖರ್, ಸಾದಿಕ್, ರಝಾಕ್, ಉಮಾಪತಿ ಸೇರಿದಂತೆ ಇತರರಿದ್ದರು .