ತಾಳಿಕೋಟಿ

ಜಲಜೀವನ್ ಮಿಷನ್ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ; ಶಾಸಕ ರಾಜುಗೌಡ

ಜಲಜೀವನ್ ಮಿಷನ್ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ;  ಶಾಸಕ ರಾಜುಗೌಡ

ತಾಳಿಕೋಟಿ 06: ಮನೆ ಮನೆಗೆ ನಳ ಜೋಡಣೆ ಜಲಜೀವನ್ ಮಿಷನ್ ಕೇಂದ್ರ ಸರ್ಕಾರದ ಒಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ನಳ ಜೋಡಣೆ ಮೂಲಕ ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವುದು ಈ ಯೋಜನೆ ಮುಖ್ಯ ಉದ್ದೇಶವಾಗಿದೆ. ಇದರ ಯಶಸ್ಸು ಕಾಮಗಾರಿಯ ಗುಣಮಟ್ಟವನ್ನು ಅವಲಂಬಿಸಿದೆ.  ಗುತ್ತಿಗೆದಾರರು ಹಾಗೂ ಇಲಾಖೆಯ ಅಧಿಕಾರಿಗಳು ಕಾಮಗಾರಿ ಗುಣಮಟ್ಟದ್ದಾಗಿರುವಂತೆ ನೋಡಿಕೊಳ್ಳಲು ನಾನು ಸೂಚಿಸುತ್ತೇನೆ ಎಂದು ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ್ ಹೇಳಿದರು.   

ಸೋಮವಾರ ತಾಲೂಕಿನ ಗಡಿ ಸೋಮನಾಳ ಮತ್ತು ಬಿಂಜಲ  ಬಾವಿ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸನ್ 2018 22 23ನೇ ಸಾಲಿನ ಜಲಜೀವನ್ ಮಿಷನ್ ಅಡಿಯಲ್ಲಿ ಸುಮಾರು 1.45 ಕೋಟಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ನಂತರ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.  ಸದರಿ ಕಾಮಗಾರಿ ಆರಂಭವಾಗುವಲ್ಲಿ ವಿಳಂಬವಾಗಿದೆ ಆದ್ದರಿಂದ ಈ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಲು ನಾನು ಅಧಿಕಾರಿಗಳಿಗೆ ಹೇಳುತ್ತೇನೆ ರಾಜ್ಯದಲ್ಲಿ ಬೀಕರ ಬರಗಾಲ ಇರುವುದರಿಂದ ಕುಡಿಯುವ ನೀರಿಗೆ ತುಂಬಾ ತೊಂದರೆ ಇದೆ. ಸರ್ಕಾರದಲ್ಲಿ ಅನುದಾನದ ಕೊರತೆ ಇದ್ದು ಹೆಚ್ಚಿನ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ನಿಮ್ಮ ಬೇಡಿಕೆಗಳಾದ ಈ ಗ್ರಾಮಕ್ಕೆ ಸಿಸಿ ರಸ್ತೆ ಹಾಗೂ ಸಂತ ಸೇವಾಲಾಲ್ ದೇವಸ್ಥಾನದ ಕೆಲಸವನ್ನು ಆದಷ್ಟು ಬೇಗ ಮಾಡಲು ಪ್ರಯತ್ನಿಸುತ್ತೇನೆ. ನಿಮ್ಮ ಸಹಕಾರ  ಹಾಗೂ  ಆಶೀರ್ವಾದ ನನಗೆ ಬೇಕು ಎಂದರು. ಜೆಡಿಎಸ್ ಮುಖಂಡ  ಮಡುಸೌಕಾರ ಬಿರಾದಾರ  ಮಾತನಾಡಿ ಶಾಸಕರಾಜುಗೌಡರು ಸರಳ ಸಜ್ಜನ ರಾಜಕಾರಣಿ ನುಡಿದಂತೆ ನಡೆಯುವವರು. ಚುನಾವಣೆ ಸಂದರ್ಭದಲ್ಲಿ ಹೇಳಿದ ಭರವಸೆಗಳನ್ನು ಕಾರ್ಯರೂಪಕ್ಕೆ ತರಲು ಅವರು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರ ಇಲ್ಲ. ಅನುದಾನದ ಬಹಳಷ್ಟು ಕೊರತೆ ಇದೆ. ಆದರೂ ಸಹ ಅವರು ಅನುದಾನ ತಂದು ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿರುವ ಸರ್ಕಾರ ಎಲ್ಲ ರಂಗದಲ್ಲಿ ವಿಫಲವಾಗಿದ್ದು ಬಹುಬೇಗನೆ ಪತನವಾಗಲಿದೆ. ಮುಂದೆ ರಾಜು ಗೌಡರಿಗೆ ಒಳ್ಳೆಯ ಅವಕಾಶಗಳಿವೆ ನಿಮ್ಮೆಲ್ಲರ ಸಹಕಾರ ಅವರಿಗೆ ಬೇಕು ಎಂದರು.  

ಕರವೇ ಜಿಲ್ಲಾ ಉಪಾಧ್ಯಕ್ಷ ಜೈ ಭೀಮುತ್ತಿಗೆ ಮಾತನಾಡಿ ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ತಲುಪಿಸುವುದು ಸರ್ಕಾರಗಳ ಮೂಲಭೂತ ಕರ್ತವ್ಯವಾಗಿದೆ ಈ ಕಾರಣಕ್ಕಾಗಿ ಜೆಜೆ ಎಂ ಯೋಜನೆ ತರಲಾಗಿದೆ ಸದರಿ ಕಾಮಗಾರಿ ಯು ಗುಣಮಟ್ಟದ್ ಆಗಿರುವಂತೆ ನೋಡಿಕೊಳ್ಳಬೇಕು ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಗ್ರಾಮಸ್ಥರು ಸಹಕರಿಸಬೇಕು ರಾಜು ಗೌಡ್ರು ಕ್ರಿಯಾಶೀಲ ಶಾಸಕರಾಗಿದ್ದಾರೆ ಅವರಿಗೆ ನಾವೆಲ್ಲರೂ ಸಹಕರಿಸಬೇಕಾಗಿದೆ ಎಂದರು.   

ಇದೇ ಸಂದರ್ಭದಲ್ಲಿ ಗ್ರಾಮಸ್ಥರ ವತಿಯಿಂದ ಶಾಸಕ ರಾಜುಗೌಡ ಪಾಟೀಲರನ್ನು ಸನ್ಮಾನಿಸಿ ಗೌರವಿಸಲಾಯಿತು.  ಈ ಸಮಯದಲ್ಲಿ ಕೊಡಗಾನೂರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಶ್ವಿನಿ ಬಿರಾದಾರ. ಕಲಕೇರಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜ ಅಹ್ಮದ್ ಶಿರಸಿಗಿ. ಗಣ್ಯರಾದ ಅಮರೇಶ ಗೌಡ ನಾಡಗೌಡ ಬಿಂಜಲಬಭಾವಿ. ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ. ಎಂ .ಎಂ. ಪಾಟೀಲ. ರಾಜುಗೌಡ ಕೋಳೂರು. ಪ್ರಭುಗೌಡ ನಾಡಗೌಡ . ಡಾ .ಬಿ ಹೆಚ್‌. ನಡಹಳ್ಳಿ. ಭೀಮನಗೌಡ ತಂಗಡಗಿ ಅಶೋಕ ಅಸ್ಕಿ ಅಭಿಯಂತರ ಡಿ ಬಿ ಕಲಬುರ್ಗಿ ಶಾಂತಪ್ಪ ನಾಯಕ್ ಪರಶುರಾಮ್ ನಾಯಕ್ ಮುರುಗೇಶ್ ತಳಿಕೋಟಿ ಬಸವರಾಜ್ ನಾಯಕ. ಎ.ಇ.ಇ. ಆರ್‌. ಎಸ್ .ಹಿರೇಗೌಡರ. ಅಭಿಯಂತರರಾದ ಅನಿಲ್ ಸಜ್ಜನ್ ಮಲ್ಲಿಕಾರ್ಜುನ  ಹಿಕ್ಕನಗುತ್ತಿ . ಪಿಡಿಓ ಗಳಾದ ಅನೀಲ  ಕಿರಣಗಿ. ಚೌದ್ರಿ. ಮತ್ತಿತರರು ಇದ್ದರು 


ಸುದ್ದಿ ಓದಿ