ಶಿಗ್ಗಾವ್

ನೀರಲಗಿ ಗ್ರಾಮದಲ್ಲಿ ಜೆಸಿಐ ವತಿಯಿಂದ ಜೈಥ್ರಾ ಜೆಸಿ ಸಪ್ತಾಹ

ನೀರಲಗಿ ಗ್ರಾಮದಲ್ಲಿ ಜೆಸಿಐ ವತಿಯಿಂದ ಜೈಥ್ರಾ ಜೆಸಿ ಸಪ್ತಾಹ

ಶಿಗ್ಗಾವಿ 09: ತಾಲೂಕಿನ ನೀರಲಗಿ ಗ್ರಾಮ (ಎನ್‌ಎಂ ತಡಸ)ದ ಸರಕಾರಿ ಪ್ರೌಢಶಾಲೆಯಲ್ಲಿ ಜೆಸಿಐ ಶಿಗ್ಗಾಂವ ವತಿಯಿಂದ ಜೈಥ್ರಾ ಜೆಸಿ ಸಪ್ತಾಹ - 2023ರ ಉದ್ಘಾಟನಾ ಸಮಾರಂಭ ಹಾಗೂ ಪ್ರಥಮ ದಿನದ ಕಾರ್ಯಕ್ರಮವಾದ ಆರೋಗ್ಯ ತಪಾಸಣಾ ಶಿಬಿರ ಮತ್ತು ಉಚಿತ ಓಷಧ ವಿತರಣಾ ಕಾರ್ಯಕ್ರಮ ಜರುಗಿತು.  

 ಕಾರ್ಯಕ್ರಮದ ಅಧ್ಯಕ್ಷತೆ ಘಟಕದ ಅಧ್ಯಕ್ಷೆ ಜೆಸಿ ಅನಿತಾ ಡಿ ಗೊಬ್ಬರಗುಂಪಿ  ಮಾತನಾಡಿ ಮಕ್ಕಳಲ್ಲಿ ತೀವ್ರತರವಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದು ಆದ್ದರಿಂದ ಮಕ್ಕಳಿಗಾಗಿ ವಿಶೇಷ ಆರೋಗ್ಯ ತಪಾಸಣಾ ಶಿಬಿರ ಏರಿ​‍್ಡಸಿದ್ದೇವೆ ಎಂದರು. 

 ಮುಖ್ಯ ಅತಿಥಿಯಾಗಿ ಸರಕಾರಿ ಪ್ರೌಢಶಾಲೆ ಕನ್ನಡ ಶಿಕ್ಷಕ ಜಗದೀಶ ಹುಲ್ಲೂರ ಮಾತನಾಡಿ ಮಕ್ಕಳ ಆರೋಗ್ಯ ತಪಾಸಣೆಗೆ ನಮ್ಮ ಶಾಲೆ ಆಯ್ಕೆ ಮಾಡಿ ಮಕ್ಕಳ  ಆರೋಗ್ಯ ತಪಾಸಣೆ ಮಾಡಿದ ಜೆ.ಸಿ.ಐ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು. 

 ಶಿಗ್ಗಾವಿ ನಗರದ ವೈದ್ಯರು ಡಾ. ಲತಾ ಜಿ. ನಿಡಗುಂದಿ, ಡಾ. ಕುಮಾರಗೌಡ ಎಚ್‌. ಪಾಟೀಲ, ಡಾ. ಚಂದ್ರಿಕಾ ಕೆ. ಪಾಟೀಲ ಆರೋಗ್ಯ ಶಿಬಿರವನ್ನು ನಡೆಸಿಕೊಟ್ಟರು. ಇನ್ನೂ ಕಾರ್ಯಕ್ರಮದಲ್ಲಿ ಹಿರಿಯ ಜೆಸಿಗಳಾದ ಜೆಸಿಯ ಸೆನೆಟರ್ ಜಿ.ಎನ್‌.ಯಲಿಗಾರ, ಜೆಸಿ ಡಾ.ಡಿ. ಎ. ಗೊಬ್ಬರಗುಂಪಿ, ಜೆಸಿ ಗುರುರಾಜ ಹುಚ್ಚಣ್ಣನವರ ಮತ್ತು  ಶಿಕ್ಷಕರಾದ ಎಸ್‌. ಐ. ಮಡಿವಾಳರ, ಟಿ. ಆರ್ ಮಹದೇವಯ್ಯ  ಪದ್ಮಶ್ರೀ ಪಾಟೀಲ ಉಪಸ್ಥಿತಿ ಇದ್ದರು. ಜೆಸಿ ರಾಘವೇಂದ್ರ ದೇಶಪಾಂಡೆ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ