ಉಪಕಾರ ಸ್ಮರಣೆ, ಕ್ಷಮಾಗುಣ ಜೈನಧರ್ಮ ಪ್ರತಿಪಾದಿಸುತ್ತದೆ : ಬೊಮ್ಮಾಯಿ
ಶಿಗ್ಗಾವಿ,10 : ಉಪಕಾರ ಸ್ಮರಣೆ ಹಾಗೂ ಕ್ಷಮಾಗುಣವನ್ನು ಜೈನಧರ್ಮ ಪ್ರತಿಪಾದಿಸುತ್ತದೆ. ಅಹಿಂಸೆ ಸತ್ಯ ಮಾನವೀಯ ಗುಣಗಳಿಂದ ಕೂಡಿರುವಂಥದ್ದು ಜೈನಧರ್ಮ, ಎಲ್ಲಿ ಮುಂದಿನ ಹತ್ತು ದಿನಗಳಲ್ಲಿ ಕಲ್ಮಷಗಳನ್ನು ತೊಳೆಯುವ ಕೆಲಸವನ್ನು ಮಾಡುತ್ತಿರುವುದು ಶ್ರೇಷ್ಠ ವಾದ ಕೆಲಸ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕಿನ ದುಂಡಸಿ ಗ್ರಾಮದಲ್ಲಿ ಜೈನ ಸಮಾಜದ ವತಿಯಿಂದ ಏರಿ್ಡಸಿದ ಹಾವೇರಿ ಜಿಲ್ಲಾ ದಿಗಂಬರ ಜೈನ ಸಂಘದ ದಶ ಲಕ್ಷ ಮಹಾಪರ್ವ ಅವರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಎಲ್ಲ ಧರ್ಮಗಳ ಮೂಲ ಮಾನವ ಅಭಿವೃದ್ಧಿ ಮಾನವೀಯತೆ ಎಲ್ಲ ಧರ್ಮಗಳ ಆಗರ, ನಾವೆಲ್ಲರೂ ಪರಸ್ಪರರು ಪ್ರೀತಿ ವಿಶ್ವಾಸದಿಂದ ಬದುಕು ಸಾಗಿಸುವಂತದ್ದು, ಮಾನವ ಉಳಿದೆಲ್ಲ ಪ್ರಾಣಿಗಳಿಗಿಂತ ಶ್ರೇಷ್ಠ, ದೇವರು ಮಾನವನಿಗೆ ಬುದ್ದಿ ಶಕ್ತಿಯನ್ನುಕೊಟ್ಟಿದ್ದಾನೆ. ಅದನ್ನು ಅಭಿವ್ಯಕ್ತಿ ಮಾಡುವ ಧ್ವನಿಯನ್ನು ಕೊಟ್ಟಿದ್ದಾನೆ. ಮಾನವ ಕುಲ ಸಾವಿರಾರು ವರ್ಷಗಳಿಂದ ಬೇರೆ ಬೇರೆ ಆಯಾಮದಲ್ಲಿ ಬೆಳೆದುಕೊಂಡು ಬಂದಿದೆ. ಮೂಲ ತತ್ವ ಮಾನೀಯತೆ ಎನ್ನುವುದು ಎಂದೂ ಬದಲಾಗಿಲ್ಲ. ಬದಲಾಗುವುದೂ ಇಲ್ಲ. ಮಾನವ ಧರ್ಮಕ್ಕೆ ಜಯವಾಗಲಿ ಅಂತ ಹೇಳಿದ್ದಾರೆ. ಮನಷ್ಯ ಧರ್ಮಕ್ಕೆ ಜಯವಾಗಲಿ ಅಂತ ಹೇಳಿಲ್ಲ. ಕಾಮ, ಕ್ರೋಧ, ಮದ, ಮತ್ಸರದ ಸಂಕೋಲೆಯಲ್ಲಿ ಇರವುದು ಮನುಷ್ಯ, ಕಾಮ, ಕ್ರೋಧ, ಮದ, ಮತ್ಸರದ ಸಂಕೋಲೆಯಿಂದ ಹೊರ ಬಂದು ಪ್ರೀತಿ ವಿಶ್ವಾಸದ ಸಂಕೋಲೆಯಲ್ಲಿ ಸಿಲುಕುವುದು ಮಾನವಧರ್ಮ ಎಂದರು.
ಮಹಾವೀರರ ಬದುಕಿನಲ್ಲಿ ಸಂಪೂರ್ಣ ತ್ಯಾಗ ಇದೆ. ತ್ಯಾಗ ಎಂದರೆ ಸಂಬಂಧಗಳನ್ನು ಕಡಿತಗೊಳಿಸುವುದು, ಆಸೆ ಮೋಹ ಬಿಡುವುದು, ಕಾಮ ಕ್ರೋಧಗಳನ್ನು ಬಿಡುವುದು, ಮಹಾವೀರರುಎಲ್ಲತ್ಯಾಗ ಮಾಡಲುತೀರ್ಮಾನ ಮಾಡಿದರು. ಆಸ್ತಿ, ಅಂತಸ್ತು, ಅರಮನೆ, ಬಂಗಾರ, ವೈಡೂರ್ಯ ಎಲ್ಲ ತ್ಯಾಗ ಮಾಡುತ್ತಾರೆ. ಮೈಮೇಲೆ ಒಂದು ಬಟ್ಟೆ ಇರುತ್ತದೆ. ಅವರ ಎದುರಿಗೆ ಒಬ್ಬ ಕುಂಟ ಬಂದು ಎಲ್ಲರಿಗೂ ದಾನ ಕೊಟ್ಟಿದ್ದೀರಾ ನನಗೂ ಏನಾದರೂ ಕೊಡಿ ಎಂದು ಕೇಳುತ್ತಾನೆ. ಮಹಾವೀರರು ನನ್ನ ಬಳಿ ಏನೂ ಇಲ್ಲ ಎನ್ನುತ್ತಾರೆ. ಅಂತಹ ಸಂತತಿಗೆ ಜೈನರು ಸೇರಿದ್ದೀರಿ. ನೀವು ಶ್ರೇಷ್ಠರು ಎಂದರು. ಅಧಿಕಾರ ಇರುತ್ತದೆ ಬರುತ್ತದೆ, ಹೋಗುತ್ತದೆ. ಯಾವುದೂ ಶಾಸ್ವತ ಅಲ್ಲ, ಮನಷ್ಯ ತಾನು ಹುಟ್ಟಿರುವ ಅರಿವು, ಮಾಡಬೇಕಿರುವ ಕರ್ತವ್ಯ, ಯಾವಗುಣ ಕಲಿತುಕೊಳ್ಳಬೇಕು ಎನ್ನುವುದು ಮುಖ್ಯ. ಯಶಸ್ಸಿನ ಮಾರ್ಗವನ್ನು ಸುಲಭವಾಗಿ ತಿಳಿದುಕೊಳ್ಳಬೇಕೆಂದರೆ ಜೈನಧರ್ಮದಿಂದ ತಿಳಿದುಕೊಳ್ಳಬೇಕು ಎಂದರು.
ಈ ಸಂಧರ್ಭದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಶಶಿಧರ ಯಲಿಗಾರ, ಭಾಜಪ ಮಂಡಲ ಅಧ್ಯಕ್ಷ ವಿಶ್ವನಾಥ ಹರವಿ, ಶಿವಾನಂದ ಮ್ಯಾಗೇರಿ, ಶ್ರೀಕಾಂತ ಡುಂಡಿಗೌಡ್ರ ಸೇರಿದಂತೆ ಸಮಾಜದ ಹಲವಾರು ಪ್ರಮುಖರು ಹಾಗೂ ಮುಖಂಡರು ಸಮಾರಂಭದಲ್ಲಿ ಉಪಸ್ಥಿತರಿದ್ದರು.