ಶಿಗ್ಗಾವ್

ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ

ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ

ಶಿಗ್ಗಾವಿ : ಪಟ್ಟಣದ ರಂಭಾಪುರಿ ಕಾಲೇಜಿನಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ," ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತ್ತು.  

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದ ಪ್ರೊ ಎಸ್ ವ್ಹಿ ಕುಲಕರ್ಣಿ, ಭೊಲೋಕದಲ್ಲಿ ದುಷ್ಟರ ಹಾವಳಿಯಿಂದ ಶಿಷ್ಟರ ನಾಶವಾಗುವ ಸಂದರ್ಭದಲ್ಲಿ ಆದಿ ರೇಣುಕಾಚಾರ್ಯರು ತಮ್ಮ ದಿವ್ಯ ದೃಷ್ಟಿಯಿಂದ ವೀಕ್ಷಿಸಿ ಶಿವಗಣಾಧಿಯವರಿಂದ  ಶಿಷ್ಟರ ರಕ್ಷಣೆ ಮಾಡಿದ ಪ್ರತೀತವಿದೆ. 

 ಕೊಲ್ಲಿ ಪಾಕಿಯ ಮಲಯಾಚಲದಲ್ಲಿ  ಅವತರಿಸಿದ ರೇಣುಕರು ಶಿವನ ಸಂಜಾತರಾದ ಭಕ್ತರನ್ನು ಉದ್ಧರಿಸಿದ ಶೈವರ ನಂದಾದೀಪ ಜಗದ್ಗುರು ರೇಣುಕಾಚಾರ್ಯರು,  ಶಿವತತ್ವ ಸಿದ್ದಾಂತದ  ಮೌಲ್ಯಗಳನ್ನು ಅರ್ಥೈಸಿದ ರೇಣುಕಾಚಾರ್ಯರು ಮೂರು ಕೋಟಿ ಲಿಂಗಳಿಗೇ ಪ್ರಾಣ ಪ್ರತಿಷ್ಠಾಪನೆ ಮಾಡಿಸುವುದರ ಮೂಲಕ ಭಕ್ತರಲ್ಲಿ ಪವಾಡ ಪುರುಷರಾದರು ಅದೇ ರೀತಿ ಪ್ರಸ್ತುತ ರಂಭಾಪುರೀ ಪೀಠದ ಜಗದ್ಗುರುಗಳು ಆದಿರೇಣುಕರ ಇಷ್ಟಲಿಂಗ ಪೂಜೆಯ ಮೂಲಕ ಆದಿರೇಣುಕರನ್ನು ಭಕ್ತರಿಗೆ ಜೀವನ ರೂಪಿಸಲು ಅಭಿನವ ರೇಣುಕರಾಗಿದ್ದಾರೆ ಎಂದರು. 

ಶಿಗ್ಗಾವಿ ಅರ್ಬನ್ ಬ್ಯಾಂಕಿನ ನಿರ್ದೇಶಕ ಟಿ ವಿ ಸುರಗಿಮಠ ಮಾತನಾಡಿ ವೀರಶೈವರ ಆರಾಧ್ಯ ದೈವ ಆದಿ ರೇಣುಕಾಚಾರ್ಯರು ಅವತರಿಸಿ, ವೀರಶೈವ ಧರ್ಮ ಸ್ಥಾಪಿಸಿದ್ದು, ನಮ್ಮೆಲ್ಲರ ಭಾಗ್ಯವೇ ಸರಿ ಎಂದರು. 

ಪ್ರಾಚಾರ್ಯ ಎಫ್ ಎಸ್ ಶಿವಣ್ಣನವರು ಅಧ್ಯಕ್ಷತೆ ವಹಿಸಿದ್ದರು. ಎನ್ ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಪ್ರೊ. ಶಿವಯ್ಯ ಪೂಜಾರ, ಎಮ್ ಎಸ್ ಸಿದ್ದಪ್ಪನವರ, ಎಸ್ ಎನ್ ತೀರ್ಥ, ಎಸ್ ವ್ಹಿ ಬಳೆಗಾರ, ಎಮ್ ಎಸ್ ಸಂಗಣ್ಣನವರ, ಎನ್ ಸಿ ನಾಯಕ, ಎಸ್ ಎಸ್ ಚಿಕ್ಕಮಠ, ಬಿ ಸಿ ಹೊನ್ನಣ್ಣವರ ಮುಂತಾದವರು ಭಾಗವಹಿಸಿದ್ದರು. 


ಸುದ್ದಿ ಓದಿ