ಚಿಕ್ಕೋಡಿ

ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ರಾಜ್ ಜಾಧವ ಮತ್ತು ಕಾರ್ಯದರ್ಶಿಯಾಗಿ ಡಾ. ರಾಜು ಟಿಕ್ಕೆ

ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ರಾಜ್ ಜಾಧವ ಮತ್ತು ಕಾರ್ಯದರ್ಶಿಯಾಗಿ ಡಾ. ರಾಜು ಟಿಕ್ಕೆ

ಚಿಕ್ಕೋಡಿ 16: ಇಲ್ಲಿನ ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ರಾಜ್ ಜಾಧವ ಮತ್ತು ಕಾರ್ಯದರ್ಶಿಯಾಗಿ ಡಾ. ರಾಜು ಟಿಕ್ಕೆ ಅಧಿಕಾರ ಸ್ವೀಕರಿಸಿದರು. 

ಇಲ್ಲಿನ ಇಂದಿರಾ ನಗರದ ಹತ್ತಿರ ಇರುವ ಮಾರ್ಕಟೂ ಹೊಟೇಲದಲ್ಲಿ ನಡೆದ ಪ್ರಸಕ್ತ ವರ್ಷದ ರೋಟರಿ ಕ್ಲಬ್ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.  

ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಆಗಮೀಸಿದ ಬೆಳಗಾವಿ ವೆಂಕಟೇಶ ದೇಶಪಾಂಡೆ ಮಾತನಾಡಿ, ಇಡೀ ಜಗತ್ತಿನಲ್ಲಿ ಸಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವ ರೋಟರಿ ಮೈತ್ರಿಯುತ ಸೇವೆ ಶ್ಲಾಘನೀಯವಾಗಿದೆ. ಕಷ್ಟ ಕಾಲದಲ್ಲಿ ಸಹಾಯ ಸಹಕಾರ ಮಾಡುವುದು ಮಾನವ ಧರ್ಮದ ಅತ್ಯಂತ ಪುಣ್ಯದ ಕಾರ್ಯ ಎಂದರು. 

ಉಪಪ್ರಾಂತಪಾಲ ದಿನೇಶ ಕಾಳೆ ಅವರು ರೋಟರಿ ಸಂಸ್ಥೆಯ ಇತಿಹಾಸದ ಕುರಿತು ಮಾತನಾಡಿದರು.  

ನೂತನ ಅಧ್ಯಕ್ಷ ರಾಜ್ ಜಾಧವ ಮಾತನಾಡಿ, ಸಂಸ್ಥೆಯ ನಿಯಮದಂತೆ ಚಾಚು ತಪ್ಪದೇ ಕಾರ್ಯನಿರ್ವಹಿಸುವ ಛಲ ನನ್ನದಾಗಿದೆ. ಹಿರಿಯರ ಮಾರ್ಗದರ್ಶನದಲ್ಲಿ ರೋಟರಿ ಸಂಸ್ಥೆಗೆ ಸೇವೆ ಸಲ್ಲಿಸುವುದಾಗಿ ಭರವಸೆ ನೀಡಿದರು. 

ಈ ಸಂದರ್ಭದಲ್ಲಿ ಶಾಸಕ ಗಣೇಶ ಹುಕ್ಕೇರಿ, ಸ್ಥಾಪಕ ಸದಸ್ಯ ವಿಜಯ ಮಾಂಜ್ರೇಕರ, ಆನಂದ ಆರಾ​‍್ವರೆ, ಶಿವಮೂರ್ತಿ ಪಡಲಾಳೆ, ರವಿ ಕೊಂಡೆಬೆಟ್ಟು, ಸತೀಶ ಕುಲಕರ್ಣಿ, ಅಶೋಕ ಪಾಠಕ, ಮಹೇಶ ನೇರ್ಲಿ, ನರೇಂದ್ರ ನೇರ್ಲಿಕರ, ಗುಲಾಬ ಬಾಗವಾನ, ಪುಟ್ಟು ದಿವಟೆ, ಉದಯ ಪಾಟೀಲ ಸೇರಿದಂತೆ ಮುಂತಾದವರು ಇದ್ದರು. 

ನಿಕಟಪೂರ್ವ ಅಧ್ಯಕ್ಷ ರಾಜೇಂದ್ರ ಪಾಟೀಲ ಸ್ವಾಗತಿಸಿದರು. ಶವಕುಮಾರ ಹಂಜಿ ನಿರೂಪಿಸಿದರು. 


ಸುದ್ದಿ ಓದಿ