ರಾಣೆಬೆನ್ನೂರಲ್ಲಿ ಜೆಎಸ್ಕೆ ಕಬಡ್ಡಿ ಪ್ರೀಮಿಯರ್ ಲೀಗ್
ರಾಣೆಬೆನ್ನೂರು 28: ವೃತ್ತಿಯಲ್ಲಿ ವರ್ತಕರಾಗಿದ್ದರು ಸಮಾಜಮುಖಿ ಸೇವೆಯಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡಿರುವ ಜೆಟ್ಟಪ್ಪ ಸಿದ್ದನಗೌಡ ಕರೇಗೌಡ್ರ, ಅವರು ಭವಿಷ್ಯದಲ್ಲಿ ನಡೆಯುವ ಚುನಾವಣೆಗೆ ಪ್ರಬಲ ಆಕಾಂಕ್ಷಿಯಾಗಿದ್ದು, ಅವರ ಅಭಿಮಾನಿ ಬಳಗವು, ರಾಜಕೀಯ ಕ್ಷೇತ್ರದ ಪ್ರವೇಶಕ್ಕೆ ಒಮ್ಮಥದ ಅಭಿಪ್ರಾಯ ನೀಡಿದೆ ಎಂದು ನಗರಸಭಾ ಸದಸ್ಯ ನಿಂಗರಾಜ ಕೋಡಿಹಳ್ಳಿ ಹೇಳಿದರು. ಅವರು ರವಿವಾರ ಮುಂಜಾನೆ ಇಲ್ಲಿನ ರಾಜರಾಜೇಶ್ವರಿ ನಗರದ ಅಭಿಮಾನಿಗಳ ಸಂಘದ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಅವರ ಹುಟ್ಟು ಹಬ್ಬದ ನಿಮಿತ್ತ, ಅಂದು ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ,, ಮಾಜಿ ಯೋಧರ ಅಭಿನಂದನಾ ಸನ್ಮಾನ, ಆಶಾ ಅಂಗನವಾಡಿ ಕಾರ್ಯಕರ್ತರಿಗೆ ಗೌರವ, ಕುಸ್ತಿ ಪಟುಗಳಿಗೆ ಸನ್ಮಾನ, ಸಮಾಜದ ಸಾಧಕ ಗಣ್ಯರಿಗೆ ಸನ್ಮಾನ ನಡೆಯಲಿದೆ. ಯುವ ಕುಸ್ತಿಪಟುಗಳನ್ನು ಪ್ರೋತ್ಸಾಹಿಸಲು ಜೆಎಸ್ಕೆ ಕಬಡ್ಡಿ ಪ್ರೀಮಿಯರ್ ಲೀಗ್ -2022 ಆಯೋಜಿಸಲಾಗಿದೆ. ತಾಲೂಕಿನ ಕಬಡ್ಡಿ ಕ್ರೀಡಾಪಟುಗಳಿಗೆ 14 ದಿವಸಗಳ ಕಾಲ ಕಬಡ್ಡಿ ವೈಭವ ಆಯೋಜಿಸಿದೆ.,
ಜಿಲ್ಲಾ ಪಂಚಾಯತ್ ಕ್ಷೇತ್ರದ ಮೇಡ್ಲೆರಿ ಕಾಕೋಳ, ಹಲಗೇರಿ, ತುಮ್ಮಿನಕಟ್ಟಿ, ಮತ್ತು ಕರೂರು ಇಲ್ಲಿ ಆಯ್ಕೆ ನಡೆಯಲಿದೆ. ಆಯ್ಕೆ ಪ್ರಕ್ರಿಯೆಯು ರಾಣೆಬೆನ್ನೂರು ನಗರಸಭಾ ಕ್ರೀಡಾಂಗಣದಲ್ಲಿ ನಡೆಯುವುದು ಎಂದರು. ಅಂತಿಮವಾಗಿ 28 ತಂಡಗಳ 336 ಕ್ರೀಡಾಪಟುಗಳಿಗೆ ಪುನ: ತರಬೇತಿಗೊಳಿಸಲಾಗುವುದು. ಮೇಘ ಫೈನಲ್ಸ್ ಹೊನಲು ಬೆಳಕಿನ ಮ್ಯಾಟ್ ಲೀಗ್ ಕಂ ನಾಕೌಟ್ . ಪಂದ್ಯಾವಳಿಗಳು ಡಿಸೆಂಬರ್ 24 25 26 -2022 ರಂದು ನಗರಸಭೆ ಕ್ರೀಡಾಂಗಣದಲ್ಲಿ ಜರುಗಲಿದೆ. ವಿಜೇತರಿಗೆ ಪ್ರಥಮ -20,000, ದ್ವಿತೀಯ-15000, ತೃತಿಯ -8000, ಹಾಗೂ ಚತುರ್ಥ 5000, ಮತ್ತು ಆಕರ್ಷಕ ಟ್ರೋಪಿ ದೊರೆಯಲಿದೆ. ಕ್ರೀಡೆಯಲ್ಲಿ ಭಾಗಸುವವರಿಗೆ 25 ವರ್ಷದ ಒಳಗಿನವರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ನಿಂಗರಾಜ್ ಕೋಡಿಹಳ್ಳಿ ವಿವರಿಸಿದರು ಮಾಧ್ಯಮಗೋಷ್ಠಿಯಲ್ಲಿ ಅಧ್ಯಕ್ಷ ಉದಯ ಕಂಬಳಿ, ವ್ಹಿ. ಪಿ.ಪೊಲೀಸ್ ಗೌಡ್ರ, ಎಂ.ಬಿ.ಅಸುಂಡಿ, ಬಾಬಾಜಾನ್ ರಬ್ಬಾನಿ, ಚಂದ್ರ್ಪ ಆಲೂರ್, ಸದ್ದಾಂ ಖಾಜಿ, ಭರಮಪ್ಪ ಬಾಗಲದವರ್, ಗುರುರಾಜ ಸಗಾರ, ವಿಕ್ರಾಂತ್ ವಾಲಿ,