ರಾಷ್ಟ್ರೀಯ

ಜಮ್ಮು ಕಾಶ್ಮೀರ ಭೂಪಟ , ವಿಕಿಪೀಡಿಯಾಗೆ ಕೇಂದ್ರ ಆದೇಶ

ಜಮ್ಮು ಕಾಶ್ಮೀರ ಭೂಪಟ ,  ವಿಕಿಪೀಡಿಯಾಗೆ ಕೇಂದ್ರ ಆದೇಶ

ನವದೆಹಲಿ, ಡಿ 3:  ವಿಕಿಪೀಡಿಯಾ ದಲ್ಲಿ ತಪ್ಪಾಗಿ  ತೋರಿಸಲಾಗಿರುವ    ಜಮ್ಮು - ಕಾಶ್ಮೀರದ  ಭೂಪಟವನ್ನು  ತೆಗೆದುಹಾಕುವಂತೆ  ಭಾರತ ಸರ್ಕಾರ ಆದೇಶಿಸಿದೆ.  ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 69 ಎ   ಅನ್ವಯ  ಲಿಂಕ್  ಅನ್ನು  ತೆಗೆದು ಹಾಕುವಂತೆ ಎಲೆಕ್ಟ್ರಾನಿಕ್ಸ್ , ಐಟಿ ಸಚಿವಾಲಯ ವಿಕಿಪೀಡಿಯಾಗೆ  ಆದೇಶ ಜಾರಿ ಮಾಡಿದೆ.

ಭಾರತ, ಭೂತಾನ್ ಸಂಬಂಧಗಳಿಗೆ ಸಂಬಂಧಿಸಿದಂತೆ   ವಿಕಿಪೀಡಿಯಾ ಪುಟದಲ್ಲಿ  ಜಮ್ಮು- ಕಾಶ್ಮೀರ ಭೂಪಟವನ್ನು   ತಪ್ಪಾಗಿ  ತೋರಿಸಲಾಗಿದೆ  ಎಂದು ಟ್ವಿಟರ್ ಬಳಕೆದಾರರೊಬ್ಬರು  ಗುರುತಿಸಿದ  ನಂತರ  ಈ ಅಂಶ ಬೆಳಕಿಗೆ ಬಂದಿತ್ತು. ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕೆಂದು ಅವರು ಸರ್ಕಾರಕ್ಕೆ ಮನವಿ ಮಾಡಿದ್ದರು.  ಭಾರತ ದೇಶ  ಪ್ರಾದೇಶಿಕ ಸಮಗ್ರತೆ,ಸಾರ್ವಭೌಮತ್ವದ ಭಂಗತರುವ  ಸದರಿ  ಭೂಪಟವನ್ನು  ಕೂಡಲೇ  ತೆಗೆದುಹಾಕುವಂತೆ  ಕೇಂದ್ರ  ಸರ್ಕಾರ  ನವೆಂಬರ್ 27 ರಂದು ವಿಕಿಪೀಡಿಯಾಗೆ  ಆದೇಶ ನೀಡಿರುವುದಾಗಿ  ತಿಳಿದುಬಂದಿದೆ.

ಸುದ್ದಿ ಓದಿ