ರಾಷ್ಟ್ರೀಯ

ನಿಗದಿಯಂತೆ ನೀಟ್- ಜೆಇಇ ಪರೀಕ್ಷೆ : ಸುಪ್ರೀಂ ಕೋರ್ಟ್

ನಿಗದಿಯಂತೆ ನೀಟ್- ಜೆಇಇ ಪರೀಕ್ಷೆ : ಸುಪ್ರೀಂ ಕೋರ್ಟ್

 ನವದೆಹಲಿ,  ಆಗಸ್ಟ್ 17: ಕಾರಣಕ್ಕಾಗಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ನೀಟ್ ಮತ್ತು ಜಂಟಿ ಪ್ರವೇಶ ಜೆಇಇ ಪರೀಕ್ಷೆಯನ್ನು ಮುಂದೂಡಬೇಕು ಎಂಬ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಳ್ಳಿಹಾಕಿದೆ. ಪರೀಕ್ಷೆಗಳು ಈಗಾಗಲೇ ನಿಗದಿಯಂತೆ ಸೆಪ್ಟೆಂಬರ್ ನಲ್ಲಿ ನಡೆಸಲು ಸುಪ್ರೀಂ ಕೋರ್ಟ್ ಕೋರ್ಟ್ ಅನುಮತಿ ನೀಡಿದೆ. ಕರೋನ ಹಿನ್ನೆಲೆಯಲ್ಲಿ ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ಮುಂದೂಡಬೇಕೆಂದು ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು, ಅದನ್ನು ತಳ್ಳಿಹಾಕಿರುವ ಸುಪ್ರೀಂ ಕೋರ್ಟ್, ಯುವಜನತೆಯ ಭವಿಷ್ಯವನ್ನು ಅಪಾಯಕ್ಕೆ ನೂಕಲು ಸಾಧ್ಯವಾಗದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. 11 ರಾಜ್ಯಗಳ 11 ವಿದ್ಯಾರ್ಥಿಗಳ ಪರವಾಗಿ ವಕೀಲ ಅಲಖ್ ಅಲೋಕ್ ಶ್ರೀವಾಸ್ತವ ಅವರು ಈ ಅರ್ಜಿಯನ್ನು ಸಲ್ಲಿಸಿದ್ದರು. ಎಂಜಿನಿಯರಿಂಗ್ ಪ್ರವೇಶ ಸೆಪ್ಟೆಂಬರ್ 1 ರಿಂದ 6 ರವರೆಗೆ ನಡೆಯಲಿದ್ದು, ವೈದ್ಯಕೀಯ ಪ್ರವೇಶವನ್ನು ಸೆಪ್ಟೆಂಬರ್ 13 ಕ್ಕೆ ನಿಗದಿಪಡಿಸಲಾಗಿದೆ. ಕರೋನ ನಂತರದ ಬಿಕ್ಕಟ್ಟಿನ ಸ್ಥಿತಿ ಸುಧಾರಿಸಿದ ನಂತರ ವೇ ಪ್ರವೇಶ ಪರೀಕ್ಷೆಗಳನ್ನು ನಡೆಸಲು ಈ ಮನವಿ ಮಾಡಲಾಗಿತ್ತು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪರೀಕ್ಷೆಗಳನ್ನು ನಡೆಸಬೇಕು ಮತ್ತು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುವುದು ಎಂದು ಎನ್ಟಿಎ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ. ನ್ಯಾಯಾಲಯಗಳು ಮತ್ತೆ ತೆರೆಯಬೇಕೆಂದು ನೀವು ಒತ್ತಾಯಿಸುತ್ತಿಲ್ಲವೇ? ಮುನ್ನೆಚ್ಚರಿಕೆಗಳೊಂದಿಗೆ ಪರೀಕ್ಷೆಗಳನ್ನು ಏಕೆ ನಡೆಸಲು ಸಾಧ್ಯವಿಲ್ಲ? ಎಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ಪ್ರಶ್ನೆ ಮಾಡಿದ್ದಾರೆ. ಪರೀಕ್ಷೆಗಳು ನಡೆಯದಿದ್ದರೆ, ಅದು ದೇಶಕ್ಕೆ ನಷ್ಟವಾಗುವುದಿಲ್ಲವೇ? ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷವನ್ನು ಕಳೆದುಕೊಳ್ಳುತ್ತಾರೆ ಎಂದು ನ್ಯಾಯಾಲಯ ಹೇಳಿ ಮನವಿಯನ್ನು ವಜಾ ಮಾಡಿದೆ.

ಸುದ್ದಿ ಓದಿ