ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಗೌಡ ಶಿವಣ್ಣನವರ್ ಅವರಿಂದ ಪಾದಯಾತ್ರೆ ಆರಂಭ
ರಾಣೆಬೆನ್ನೂರು ಡಿ 06-ಜೆಡಿಎಸ್ ಪಕ್ಷದ ಕುಮಾರಸ್ವಾಮಿಯವರ ಆಡಳಿತದಲ್ಲಿ ಅನೇಕ ಯೋಜನೆಗಳು ಜಾರಿಗೆ ತರಲಾಗಿದೆ ಕೊಟ್ಟ ಮಾತಿನಂತೆ ನಡೆದುಕೊಂಡು ಕುಮಾರಸ್ವಾಮಿಯವರ ಆಡಳಿತ ಪುನಃ ಈ ರಾಜ್ಯಕ್ಕೆ ಬೇಕಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಜಯಾನಂದ ದ್ಯಾವಣ್ಣನವರ್ ಹೇಳಿದರು.
ಸೋಮವಾರ ಮುಂಜಾನೆ ಕುರುಬಗೇರಿಯ ಬನಶಂಕರಿ ದೇವಸ್ಥಾನ ಆವರಣದಿಂದ ಆರಂಭವಾದ ಜೆಡಿಎಸ್ ಪಕ್ಷದ ಅಭ್ಯರ್ಥಿ ಮಂಜುನಾಥ್ ಗೌಡ ಶಿವಣ್ಣನವರ್ ಅವರ ಅಭಿಮಾನಿ ಬಳಗ ಮತ್ತು ಕಾರ್ಯಕರ್ತರು ತಾಲೂಕಿನಲ್ಲಿ ತಿಂಗಳ ಕಾಲ ಆಯೋಜಿಸಿರುವ, ಚುನಾವಣಾ ಪಾದಯಾತ್ರೆ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಜಾತಿ ಮತ ಭೇದ ಭಾವ ಎಣಿಸದೆ ಸರ್ವರೂ ಸಮಾನರು ಎನ್ನುವ ಜಾತ್ಯತೀತ ತತ್ವದಲ್ಲಿ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ, ನಾಡಿನ ಅಭಿವೃದ್ಧಿ ಜೆಡಿಎಸ್ ನಿಂದ ಮಾತ್ರ ಸಾಧ್ಯವಿದೆ ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತ, ಮತ್ತು ಚುನಾವಣೆಯ ನಂತರ ರೂಪಿಸಿರುವ ಕ್ರಿಯಾ ಯೋಜನೆಗಳ ಕುರಿತು ಸಾಧ್ಯಂತವಾಗಿ ವಿವರಿಸಿ ಮಾತನಾಡಿದರು.
ಹಾವೇರಿ ಜಿಲ್ಲಾ ಉಸ್ತುವಾರಿ ಹಾಗೂ ಮಾಧ್ಯಮ ಸಲಹೆಗಾರ ಮಹೇಶ್ ಗೌಡ ಅವರು ಮಾತನಾಡಿ, ಕಾಂಗ್ರೆಸ್ ಮತ್ತು ಬಿಜೆಪಿ ಇವೆರಡು ಪಕ್ಷಗಳಿಂದ ಯಾವುದೇ ಪ್ರಯೋಜನ ಕಂಡಿಲ್ಲ. ಜಾತಿ ಜಾತಿಗಳ ಮಧ್ಯೆ ಹೊಡೆದಾಳುವ ನೀತಿ ಬಿಜೆಪಿಯನ್ನು ಅನುಸರಿಸಿ ಭಾವೈಕ್ಯತೆಯ ಭಾರತ ಛಿದ್ರ ಮಾಡುತ್ತಲಿದೆ. ಇನ್ನು ಕಾಂಗ್ರೆಸ್ ಅಲ್ಪಸಂಖ್ಯಾತರ ಮತಗಳನ್ನು ಗುರಿಯಾಗಿಟ್ಟುಕೊಂಡು ಸಾಗುತ್ತಿದೆ ಹೀಗಾದರೆ ನಾಡಿನ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಕಿಡಿ ಕಾರಿದರು.
ಜೆಡಿಎಸ್ ಅಭ್ಯರ್ಥಿ, ಯುವ ನಾಯಕ ಮಂಜುನಾಥ್ ಗೌಡ ಶಿವಣ್ಣನವರ್ ಮಾತನಾಡಿ ತಾಲೂಕಿನಲ್ಲಿ ಜನರು ನೀರೀಕ್ಷಿಸಿದಷ್ಟು ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ. ತಾಲೂಕಿನ ವಿಧಾನಸಭಾ ಕ್ಷೇತ್ರದ ಜನತೆ ಸಂಪೂರ್ಣ ಬದಲಾವಣೆ ಬಯಸಿದ್ದಾರೆ. ಜನರ ಅಪೇಕ್ಷೆಯ ಮೇರೆಗೆ, ಅಭಿಮಾನಿಗಳ, ಕಾರ್ಯಕರ್ತರ ನೀರೀಕ್ಷೆ ತಾಲೂಕಿನಲ್ಲಿ ರಾಜಕೀಯ ಬದಲಾಗಬೇಕು ಎಂದು ನಿರ್ಧರಿಸಿದ್ದಾರೆ. ಎಂದರು. ಈಗಾಗಲೇ ವಿಧಾನಸಭಾ ಚುನಾವಣೆಗೆ ವೇದಿಕೆ ಸಿದ್ಧವಾಗುತ್ತಲಿದ್ದು, ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ, ತಾಲೂಕಿನ ಬಹುಜನರ ನಿರ್ಧಾರದ ಮೇರೆಗೆ ಪ್ರಚಾರ ಕಾರ್ಯ ಆರಂಭಿಸಲಾಗಿದೆ ಎಂದ ಅವರು, ಇಂದು ಬನಶಂಕರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದರ ಮೂಲಕ ಪಾದಯಾತ್ರೆ ಆರಂಭಿಸಲಾಗಿದೆ, ತಾಲೂಕಿನ 88 ಗ್ರಾಮಾಂತರ ಪ್ರದೇಶದಲ್ಲಿ ಪ್ರಚಾರ ಕಾರ್ಯ ಆರಂಭಿಸಲಾಗುವುದು. ಮತ್ತು ಜನವರಿ 3 ರಂದು ಪುನ: ನಗರಕ್ಕೆ ಆಗಮಿಸುವ ಪಾದಯಾತ್ರೆ ಸಮಾರೂಪ ಗೊಳಿಸಲಾಗುವುದು ಎಂದರು.
ಪಾದಯಾತ್ರೆ ಮುಂಚೂಣಿಯಲ್ಲಿ ಮಂಜುನಾಥಗೌಡ ಶಿವಣ್ಣನವರ ಅಭಿಮಾನಿಗಳ ಸಂಘದ ಅಧ್ಯಕ್ಷ ಕರಿಯಪ್ಪ ಸಿಡಗನಾಳ, ಪರಿಶಿಷ್ಟ ಜಾತಿ ಗ್ರಾಮೀಣ ಘಟಕದ ಅಧ್ಯಕ್ಷ ಸಿದ್ದಪ್ಪ ಗುಡಿಮುಂದಲರ್, ಶಶಿಕಲಾ ಗೌಡ ಶಿವಣ್ಣನವರ್, ಸುಧಾ ಪಾಟೀಲ್, ಸರೋಜಾ ಮಡಿವಾಳರ, ವಿದ್ಯಾ ಕೊಟ್ರ್ಪನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಹೊನ್ನಜ್ಜೇರ, ಮಲ್ಲಿಕಾರ್ಜುನ ತೆಗ್ಗಿನ, ಜಯರಾಮ್ ಅಗಡಿ, ಮಾಜಿ ಸೈನಿಕ ಹನುಮಂತಪ್ಪ ಮೂಲಿಮನಿ, ಶಿವು ಕರಿಯಪ್ಪನವರ, ಪ್ರಭು ಹುಬ್ಬಳ್ಳಿ, ಬಿ.ಕೆ. ರಾಜನಹಳ್ಳಿ, ಮಂಜು ಹಲಗೇರಿ, ಶಿವು ಕಡೂರು, ಬಸವರಾಜ, ಪ್ರವೀಣ್ ಹೊದಿಗ್ಗೇರಿ, ರಾಜಣ್ಣ ಹಲಗೇರಿ, ಮಂಜುನಾಥ ಗಡ್ಡದಗೋಳಿ, ಸರೋಜಾ ಅಂತರವಳ್ಳಿ, ಶಾಂತಮ್ಮ, ಲಕ್ಷ್ಮಿ, ಸೇರಿದಂತೆ ನೂರಾರು ಕಾರ್ಯಕರ್ತರು, ಅಭಿಮಾನಿಗಳ ಸಂಘದ ಅಧ್ಯಕ್ಷರು ಪದಾಧಿಕಾರಿಗಳು, ಮತ್ತು ಯುವ ಮುಖಂಡರು, ಹಿರಿಯ ನಾಗರಿಕರು ಪಾಲ್ಗೊಂಡಿದ್ದರು. ಸಿದ್ದೇಶ್ವರ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನ ಮತ್ತು ಕುರುಬಗೇರಿ ಬೀರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಕಾರ್ಯಕರ್ತರು ಹಲಗೇರಿ ರಸ್ತೆ ಮೂಲಕ ತಮ್ಮ ಪಾದಯಾತ್ರೆ ಆರಂಭಿಸಿದರು. ತಾಲೂಕಿನಲ್ಲಿ ಸಂಚರಿಸುವ ಜೆಡಿಎಸ್ ಅಭ್ಯರ್ಥಿ ಮತ್ತು ಪಕ್ಷದ ಸಿದ್ಧಾಂತವನ್ನು ಮತ್ತು ಜಾರಿಗೊಳಿಸುವ ಯೋಜನೆಯನ್ನು ಪ್ರಚಾರಪಡಿಸುವುದರ ಮೂಲಕ ತಿಂಗಳ ಕಾಲ ಪಾದಯಾತ್ರೆ ನಡೆಯಲಿದೆ ಎಂದು ಮುಖಂಡರು ಹೇಳಿದರು