ರಾಣೀಬೆನ್ನೂರ ಕಾಮಧೇನು ಗೋಶಾಲೆಗೆ ಜೆಸಿಐ ತಂಡ ಭೇಟಿ
ರಾಣೀಬೆನ್ನೂರ 31: ಭಾರತೀಯ ಪರಂಪರೆಯಲ್ಲಿ ನಮ್ಮ ದೇಶಿಯ ಗೋ-ತಳಿಗಳಿಗೆ ಆರಂಭದಿಂದಲೂ ವಿಶೇಷವಾದ ಗುರುತಿಸುವಿಕೆ ಇದೆ. ಗೋ-ಮಾತೆ ನಮ್ಮ ದೇಶದ ಸಮಗ್ರ ರೈತ ಸಮುದಾಯದ ಜೀವನಾಡಿ ಮತ್ತು ಭಾರತೀಯರ ಸಂಸ್ಕೃತಿಯ ಪ್ರತೀಕವಾಗಿದೆ. ಎಂದು ಸ್ಥಳೀಯ ಜೆಸಿಐ ಸಂಸ್ಥೆಯ ಅಧ್ಯಕ್ಷ ಆರ್.ವಿ.ಪಾಟೀಲ ಹೇಳಿದರು.
ಅವರು ಇತ್ತೀಚೆಗೆ ಇಲ್ಲಿನ ದೇವರಗುಡ್ಡ ರಸ್ತೆಯಲ್ಲಿನ ಶ್ರೀ ಕಾಮಧೇನು ಗೋ-ರಕ್ಷಾ ಚಾರಿಟೇಬಲ್ ಟ್ರಸ್ಟ್ನ ಗೋ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಗೋ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ವಾಣಿಜ್ಯ ನಗರದಲ್ಲಿ ಪ್ರಾರಂಭಗೊಂಡಿರುವ ಈ ಗೋ ಶಾಲೆಯಿಂದಾಗಿ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಿದೆ. ಇದರಿಂದಾಗಿ ನಗರ ಸಂಪದ್ಭರಿತವಾಗಿದೆ. ಎಂದ ಅವರು ಆಡಳಿತ ಮಂಡಳಿಯ ಸೇವಾ ಕಾರ್ಯವು ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಡಾ. ಸಂಜಯ ನಾಯಕ ಅವರು ಸಮಾಜಮುಖಿ ಕಾರ್ಯದಲ್ಲಿ ಸಮಾನ ಮನಸ್ಕರು ಕೂಡಿಕೊಂಡು ಕಳೆದ 3ವರ್ಷಗಳ ಹಿಂದೆ ಈ ಗೋ ಶಾಲೆಯನ್ನು ಆರಂಭಿಸಿದ್ದು ಪ್ರಸ್ತುತ 50ಕ್ಕೂ ಹೆಚ್ಚು ದೇಶಿಯ ತಳಿಗಳು ಸೇರಿದಂತೆ ವಿವಿಧ ಪ್ರಭೇದಗಳ ರಾಸುಗಳು ಇಲ್ಲಿವೆ. ಹಂತ-ಹಂತವಾಗಿ ಅಭಿವೃದ್ಧಿ ಪಥದತ್ತ ಸಾಗುತ್ತಲಿದೆ. ಸಾರ್ವಜನಿಕರ ಸಹಕಾರ ಬಹು ಮುಖ್ಯವಾಗುತ್ತದೆ. ಇದರ ಪ್ರಗತಿಯಲ್ಲಿ ಸ್ಥಳೀಯ ಜೈನ್ ಸಮುದಾಯದ ಮತ್ತು ಯುವಕರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಅವರ ಸೇವೆಗೆ ನಾವೆಲ್ಲರೂ ಋಣಿಯಾಗಿದ್ದೇವೆ ಎಂದ ಅವರು ಯುವಕರ ಮತ್ತು ಸದಸ್ಯರ ಹಾಗೂ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಕೆ.ಸಿ.ಕೋಮಲಾಚಾರ್, ರೋಣೇಶ ಜೈನ್, ಕಿಶೋರ ಜೈನ್, ಭರತ್ ಜೈನ್, ರಾಜೇಶ ನವಲೆ, ಜೇಸಿ ಸಂಸ್ಥೆಯ ಜಿ.ಡಿ. ಬಗಾಡೆ, ಎರ್ಫ.ಹೆಚ್.ಗಚ್ಚಿನಮಠ, ವಿ.ಎಸ್.ಹಿರೇಮಠ, ಪ್ರಕಾಶ ಬನಕೋಡ, ವೆಂಕಟೇಶ ಕಾಕಿ, ಪ್ರಭು ಯಳೇಹೊಳೆ, ಜಯಣ್ಣ ಕರಡೇರ, ಸಂತೋಷ ಹಿರೇಮಠ, ಬಸವರಾಜ ಕುಸರಿ, ರಾಜು ಹಿರೇಮಠ, ದ್ಯಾಮಣ್ನ ಸುಂಕಾಪುರ, ಕೆ.ಎಸ್.ನಾಗರಾಜ, ತೇಜಸ್ ಕುಮಾರ ಕೆ.ಕೆ. ಸೇರಿದಂತೆ ಮತ್ತಿತರ ಗಣ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಗೋ ಸೇವೆಗಾಗಿ ಜೇಸಿ ಸಂಸ್ಥೆಯಿಂದ ದೇಣಿಗೆ ಸಮರ್ಪಿಸಲಾಯಿತು.