ಜೆಸಿಐ ಸಂಸ್ಥೆಯ ವಾರ್ಷಿಕ ಸಪ್ತಾಹ: ಸಾಧಕರ ಸನ್ಮಾನ
ರಾಣೇಬೆನ್ನೂರು 18: ಇಲ್ಲಿನ ಹೂರವಲಯದ ಮಾಗೋಡು ರಸ್ತೆ ಶಿಕ್ಷಕರ ಶಕ್ತಿ ಬಡಾವಣೆ ಭವನದಲ್ಲಿ ಜೆಸಿಐ ಸಂಸ್ಥೆಯು ತನ್ನ ವಾರ್ಷಿಕ ಸಪ್ತಾಹ ಕಾರ್ಯಕ್ರಮ ಆಯೋಜಿಸಿತ್ತು. ಅಧ್ಯಕ್ಷತೆ ವಹಿಸಿದ್ದ ಜೆಸಿ ಅಧ್ಯಕ್ಷ ರವಿ ಪಾಟೀಲ ಅವರು ಸಂಸ್ಥೆಯು ಎಲ್ಲ ಸದಸ್ಯರ ಸಹಕಾರದೂಂದಿಗೆ ವರ್ಷದುದ್ದಕ್ಕೂ ಪರೀಕ್ಷಾ ಪೂರ್ವ ತರಬೇತಿ, ಕೋವಿಡ್ ಕಿಟ್ ವಿತರಣೆ, ರಕ್ತದಾನ ಶಿಬಿರ, ಮದುಮೇಹ ತಪಾಸಣೆ, ಯೋಗ ಶಿಕ್ಷಣ ಸೇರಿದಂತೆ ಮತ್ತಿತರೆ ಸಮಾಜ ಮುಖಿ ಕಾರ್ಯಕ್ರಮಗಳ ಮೂಲಕ ತನ್ನ ಕರ್ತವ್ಯಗಳನ್ನು ಮಾಡುತ್ತಲಿದೆ ಇದರಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ಮತ್ತು ಪ್ರೀತಿ ವಿಶ್ವಾಸದಿಂದ ಭಾವೈಕ್ಯತೆಯಿಂದ ಬದುಕಲು ಸಾಧ್ಯವಾಗಲಿದೆ ಎಂದರು.
ಇದೆ ಸಂಧರ್ಭದಲ್ಲಿ ಕಮಲ ಪತ್ರ ಪ್ರಶಸ್ತಿ ಗಳಿಸಿದ ವೆಂಕಟೇಶ ಕಾಕಿ, ಲಕ್ಷ್ಮೀ ಅಡಕಿ, ಯುವರಾಜ ಬಾರಟಕ್ಕೆ ,ಹರೀಶ ಕೋರ್ಪಡೆ, ಪ್ರಕಾಶ ಬನ್ನಿಕೋಡ, ನಾರಾಯಣ ಬಿಸಲಹಳ್ಳಿ, ಪ್ರವೀಣ್ ಸುರಹೂನ್ನಿ, ಸರೋಜಾ ಕುಬಸದ, ಸೇರಿದಂತೆ ಮೂದಲಾದವರನ್ನು ಕೂಡಮಾಡಿದ ಪ್ರಶಸ್ತಿಗಳನ್ನು ವಲಯ ಉಪಾಧ್ಯಕ್ಷ ವೀರಯ್ಯ ಪ್ರಸಾಧಿಮಠ ಅವರು ವಿತರಿಸಿ,ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಸಂಸಥೆಯ ಸದಸ್ಯರಾದ ಸಂತೋಷ ಪಾಟೀಲ, ಚೇತನಾ ಪಾಟೀಲ, ಪ್ರಭು ಎಳೆಹೂಳೆ, ಜಿ.ಡಿ.ಬಗಾಡೆ, ಪ್ರಭುಲಿಂಗಪ್ಪ ಹಲಗೇರಿ, ಪ್ರಕಾಶ ಗಚ್ಚಿನಮಠ, ಎನ್.ಹೆಚ್.ದೇವಕುಮಾರ,ಶಿವರುದ್ರಯ್ಯಾ ,ಶ್ರೇಯಾ ಪಾಟೀಲ, ಲಕ್ಷ್ಮಣ ಕನಕಿ, ಪ್ರವೀಣ ಬಗಾಡೆ, ಸಂತೋಷ ಹಿರೇಮಠ, ನಿಂಗಪ್ಪ ಅಡಕೆಸೇರಿದಂತೆ ಮತ್ತಿತರ ಗಣ್ಯರು ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.