ಕುಂಭೋತ್ಸವಕ್ಕೆ ಮೆರಗು ತಂದ ಮಹಿಳೆಯರು
ಲೋಕದರ್ಶನ ವರದಿ
ರಾಣಿಬೆನ್ನೂರ 06: ನಗರದ ಹೊರವಲಯದಲ್ಲಿರುವ ಹಿರೇಮಠದ ಶನೈಶ್ಚರ ಸ್ವಾಮಿ ಮಂದಿರದ ಆವರಣದಲ್ಲಿ ಲೋಕಕಲ್ಯಾಣಾರ್ಥವಾಗಿ ಹಾಗೂ ಪ್ರದೇಶಾಭಿವೃದ್ದಿಗಾಗಿ ನಿರಂತರ 384 ದಿನಗಳ ಕಾಲ ನಡೆದ ವಿವಿಧ ಧಾರ್ಮಿಕ ಹಾಗೂ ಪೂಜಾ ಕಾರ್ಯಕ್ರಮದ 9 ನೇ ವರ್ಷದ ಶನೈಶ್ಚರ ಸ್ವಾಮಿಯ 9ನೇ ವಾರ್ಷಿಕೋತ್ಸವ ಮತ್ತು ಎಲ್ಲ ಕಾರ್ಯಕ್ರಮಗಳ ಮಂಗಲೋತ್ಸವದ ಅಂಗವಾಗಿ ನಗರದಲ್ಲಿ ಶನಿವಾರದಂದು ಮಹಿಳೆಯರಿಂದ ಬೃಹತ್ ಕುಂಭೋತ್ಸವವು ಜರುಗಿತು.
ಸ್ಥಳೀಯ ದೊಡ್ಡಪೇಟೆಯ ಬಸವೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಿಂದ ಅರಂಭಗೊಂಡ 500ಕ್ಕೂ ಅಧಿಕ ಮಹಿಳೆಯರ ಕುಂಭೋತ್ಸವಕ್ಕೆ ಹಿರೇಮಠ ಶನೈಶ್ಚರ ಮಂದಿರದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಸೇರಿದಂತೆ ಮತ್ತಿತರ ಶ್ರೀಗಳು ಚಾಲನೆ ನೀಡಿದರು. ದೊಡ್ಡಪೇಟೆ, ಕೊಟ್ಟೂರೇಶ್ವರ ನಗರದ ಮೂಲಕ ಹಾಯ್ದು ಅಂತ6ಇಮವಾಗಿ ಶನೈಶ್ಚರ ಮಂದಿರಕ್ಕೆ ಕುಂಭೋತ್ಸವವು ತಲುಪಿತು.