ಶಿಗ್ಗಾವ್

ಗುರುಗಳನ್ನು ನೆನೆಯುವುದು ವಿದ್ಯಾರ್ಥಿಗಳ ಕರ್ತವ್ಯ: ಎಸ್‌.ಪಿ.ಜೋಶಿ

ಗುರುಗಳನ್ನು ನೆನೆಯುವುದು ವಿದ್ಯಾರ್ಥಿಗಳ ಕರ್ತವ್ಯ: ಎಸ್‌.ಪಿ.ಜೋಶಿ

ಶಿಗ್ಗಾವಿ 26: ಬಡಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದೆ ನಮ್ಮ ಸಂಸ್ದೆಯ ಮುಖ್ಯ ಉದ್ದೇಶವಾಗಿದೆ ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಒಂದನೇ ತರಗತಿಯಿಂದ ಹಿಡಿದು ಪಿ.ಯು.ಸಿ ವರೆಗೂಅತಿಕಡಿಮೆ ಶುಲ್ಕದಲ್ಲಿ ವಿದ್ಯಾಭ್ಯಾಸ ನೀಡುತ್ತಿದ್ದೇವೆ ಎಂದು ತಾಲೂಕ ಶಿಕ್ಷಣ ಸಮಿತಿಯ ಗೌರವ ಕಾರ್ಯದರ್ಶಿ ಎಸ್‌.ಪಿ.ಜೋಶಿ ಹೇಳಿದರು. 

ನಗರದ ಎಸ್‌.ಬಿ.ಬಿ.ಎಮ್‌.ಡಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪಿ.ಯು.ಸಿ ಹಳೆಯ ವಿದ್ಯಾರ್ಥಿಗಳ ವತಿಯಿಂದ ಹಮ್ಮಿಕೊಂಡ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು ಇಡಿ ಜಿಲ್ಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವ ಏಕೈಕ ಸಂಸ್ಥೆ ನಮ್ಮತಾ ಲೂಕ ಶಿಕ್ಷಣ ಸಮಿತಿ ಎಸ್‌.ಬಿ.ಬಿ.ಎಮ್‌.ಡಿ ಸಂಸ್ಥೆ ಕಾಲಮಾನಕ್ಕೆ ತಕ್ಕ ಹಾಗೆ ಇತ್ತಿಚಿಗೆ ಇಂಗ್ಲಿಷ್ ಮಾಧ್ಯಮ ಆರಂಬಿಸಿದ್ದೆ ನಮ್ಮ ಸಂಸ್ಥೆಯಲ್ಲಿ ಈಗ ಎಲ್‌.ಕೆ.ಜಿ ಇಂದ ಹಿಡಿದು ಪಿ.ಯು.ಸಿ ವರೆಗೂ 1400 ವಿದ್ಯಾರ್ಥಿಗಳು ವಿದ್ಯಾಬ್ಯಾಸ ಮಾಡುತ್ತಿದ್ದಾರೆ. ನಾವು ಸರ್ಕಾರಕ್ಕೆ ಅನುದಾನಕ್ಕಾಗಿ ಬೇಡಿಕೆಯಿಟ್ಟರುಯಾವುದೇ ಸರ್ಕಾರಅನುದಾನ ನೀಡಿಲ್ಲಅದರಿಂದ ಸಂಸ್ಥೆಯ ಅಭಿವೃದ್ಧಿಯು ಸಾಧ್ಯವಾಗುತ್ತಿಲ್ಲ. 

ಕಳೆದ ಸರ್ಕಾರ ಶಾಲಾ ಅಭಿವ್ರದ್ದಿಗೆ ಒಂದುಕೋಟಿ ಅನುದಾನ ಘೋಶಿಸಿದೆ ಆದರೆ ಸರ್ಕಾರ ಬದಲಾದ್ದರಿಂದ ಆ ಅನುದಾನ ಇನ್ನು ಬಂದಿಲ್ಲ  ಮಹಾವಿದ್ಯಾಲಯದ ಅಭಿವೃದ್ದಿಗೆ ನಮ್ಮ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ತನು ಮನ ದನದಿಂದ ಸಹಾಯ ಮಾಡಬೇಕು ಎಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ತಾಲೂಕ ಶಿಕ್ಷಣ ಸಮಿತಿಯ ಉಪಾಧ್ಯಕ್ಷ ದತ್ತಣ್ಣ ವರ್ಣೇಕರ ಮಾತನಾಡಿ ನಮ್ಮ ಸಂಸ್ಥೆಯು ಬಹಳ ಹಳೆಯ ಸಂಸ್ಥೆಯಾಗಿದೆ ಇಲ್ಲಿ ಕಲೆತ ವಿದ್ಯಾರ್ಥಿಗಳು ಇಂದು ಅನೇಕ ದೊಡ್ಡದೊಡ್ಡ ಹುದ್ದೆಯಲ್ಲಿದ್ದಾರೆ ಆದರೆ ಇತಿಹಾಸ ಹೊಂದಿರುವ ಶಾಲೆ ಇಂದು ಅನುದಾನದ ಕೊರತೆಯಿಂದ ಅಭಿವ್ರದ್ದಿಗೆ ಹಿನ್ನಡೆಯಾಗಿದೆ ಎಂದರು. 

ಕಾಲೇಜಿನ ಪ್ರಾಂಶುಪಾಲ ಆರ್‌.ಎಸ್‌.ಭಟ್ಟ ಮಾತನಾಡಿ ಈ ದಿನ ನಮ್ಮ ಕಾಲೇಜಿಗೆ ಅವಿಸ್ಮರಣೀಯ ದಿನವಾಗಿದೆ ನಮ್ಮ ವಿದ್ಯಾರ್ಥಿಗಳೆಲ್ಲ ಉತ್ತಮ ಪ್ರಜೆಗಳಾಗಿ ಸಮಾಜದಲ್ಲಿ ಗೌರವಯುತವಾದ ಜೀವನ ನಡೆಸಿ ಮತ್ತು ನಿಮ್ಮ ವಿದ್ಯಾರ್ಥಿ ಸಂಘಟನೆಇನ್ನು ಹೆಚ್ಚು ಗಟ್ಟಿಯಾಗಲಿ ನಮ್ಮ ಸಂಸ್ಥೆಗೆ ಬೆನ್ನೆಲುಬಾಗಿ ಕೆಲಸ ಮಾಡಲಿ ಎಂದರು. 

ನಂತರ ಕಾಲೇಜಿನ ನಿವೃತ್ತ ಉಪನ್ಯಾಸಕರನ್ನು ಹಾಗೂ ಕರ್ತವ್ಯನಿರತ ಉಪನ್ಯಾಸಕರನ್ನು ಹಳೆಯ ವಿದ್ಯಾರ್ಥಿಗಳ ಬಳಗದಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಉಪನ್ಯಾಸಕ ಎಲ್‌.ಬಿ.ದಳವಾಯಿ, ಕೆ.ಡಿ.ಪಾಟೀಲ, ಜಿ ಬಸವರಾಜಪ್ಪ, ಜಿ.ಎನ್‌.ಯಲಿಗಾರ, ಡಾ.ಎಸ್‌.ಬಿಹರ್ಲಾಪುರ, ಎಮ್‌.ಎಸ್ ಸಿದ್ದಪ್ಪನವರ, ಎಸ್‌.ಬಿ ಬಳ್ಳಾರಿ, ಆರ್‌.ಎಸ್‌.ಹೆಸರೂರ ಅವರು ಮಾತನಾಡಿದರು. ಎನ್‌.ಎಸ್‌.ಹಾವಣಗಿ, ಎಸ್‌.ಬಿ ಸವಡಿ, ಸುರಗಿಮಠ ಸೇರಿದಂತೆ 2005 ರಿಂದ 2008 ನೆ ಸಾಲಿನ ಹಳೆಯ ವಿದ್ಯಾರ್ಥಿಗಳು ಹಾಜರಿದ್ದರು. ಜೋಡಿ ಬಸವೇಶ್ವರಜನಪದ ಕಲಾ ತಂಡದ ಬಸವರಾಜ ಶಿಗ್ಗಾಂವ ಹಾಗೂ ಸಂಗಡಿಗರು ಪ್ರಾರ್ಥಿಸಿದರು ಹಳೆಯ ವಿದ್ಯಾರ್ಥಿಗಳಾದ ಶಂಭು ನಡುವಿನಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು ಮಂಜುಳಾ ಹಿರೇಮಠ ಸ್ವಾಗತಿಸಿದರು ಬಸವರಾಜ ಜವಳಗಟ್ಟಿ ಕಾರ್ಯಕ್ರಮ ನಿರೂಪಿಸಿದರು ಶರೀಫ ಮಾಕಪ್ಪನವರ ಸನ್ಮಾನಿತರನ್ನು ಪರಿಚಯಸಿ ವಂದಿಸಿದರು. 


ಸುದ್ದಿ ಓದಿ