ಶಿಗ್ಗಾವ್

ಮುಖ್ಯಮಂತ್ರಿಗಳ ರೈತ ವಿದ್ಯಾ ನಿಧಿ ಯೋಜನೆಯ ಪ್ರಮಾಣ ವಿತರಣೆ

ಮುಖ್ಯಮಂತ್ರಿಗಳ ರೈತ ವಿದ್ಯಾ ನಿಧಿ ಯೋಜನೆಯ ಪ್ರಮಾಣ ವಿತರಣೆ

ಲೋಕದರ್ಶನ ವರದಿ 


ಶಿಗ್ಗಾವಿ 22: ರೈತ ಮಕ್ಕಳಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು “ಮುಖ್ಯಮಂತ್ರಿಗಳ ರೈತ ವಿದ್ಯಾ ನಿಧಿ” ಯೋಜನೆ ಜಾರಿಗೆ ತಂದಿದ್ದು ಇದರ ಸದುಪಯೋಗವನ್ನು ರಾಜ್ಯ ಸೇರಿದಂತೆ ಶಿಗ್ಗಾವಿ ತಾಲೂಕಿನ ಎಲ್ಲ ವಿದ್ಯಾರ್ಥಿಗಳು ಸದುಪಯೋಗ ಪಡೆಯಬೇಕು ಎಂದು ಹಾವೇರಿ ಕೃಷಿ ಇಲಾಖೆಯ ಜೆ ಡಿ ಮಂಜುನಾಥ ಬಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. 

ಪಟ್ಟಣದ ಚನ್ನಪ್ಪ ಕುನ್ನೂರ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ “ಮುಖ್ಯಮಂತ್ರಿಗಳ ರೈತ ವಿದ್ಯಾ ನಿಧಿ” ಯೋಜನೆಯ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು ತಂದೆ ಅಥವಾ ತಾಯಿಯ ಹೆಸರಲ್ಲಿ ಜಮೀನು ಇರುವ ಒಂದು ಸಾವಿರ ಕೋಟಿ ರೂ.ದ ಯೋಜನೆ  

ಮುಖ್ಯಮಂತ್ರಿಗಳ ರೈತ ನಿಧಿ ಯೋಜನೆಯಾಗಿದೆ, ವಾರ್ಷಿಕ ವರಮಾನ ಎಷ್ಟೆ ಇದ್ದರು ಈ ಯೋಜನೆ ಅರ್ಹವಾಗಿದ್ದು ವಿದ್ಯಾಥಿಗಳು ಹೆಸರನ್ನು ಇಂದೆ ನೋಂದಾಯಿಸಬೇಕು, ಜಿಲ್ಲೆಯಲ್ಲಿ ಈಗಾಗಲೇ 15,155 ವಿದ್ಯಾರ್ಥಿಗಳು ಈ ಯೋಜನೆ ಪಡೆಯುತ್ತಿದ್ದಾರೆ, ತಾಲೂಕಿನಲ್ಲಿಯೂ ಈ ಯೋಜನೆಯ ಸದುಪಯೋಗ ಪಡೆಸಿಕೊಳ್ಳಿ, ಶಿಗ್ಗಾವಿಯಲ್ಲಿ 1517 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ, ನಿಮ್ಮ ಸ್ನೇಹಿತರಿಗೂ ಇದನ್ನು ತಿಳಿಸಿ ಎಂದರು.   

ಜಿಲ್ಲಾ ಸಹಾಯಕ ಕೃಷಿ ಅಧಿಕಾರಿ ಸವಿತಾ ಚಕ್ರಸಾಲಿ ಮಾತನಾಡಿ ಬೇರೆ ಶಿಷ್ಯವೇತನ ಪಡೆದರು ಈ ಯೋಜನೆಯನ್ನು ಪಡೆಯಬಹುದಾಗಿದ್ದು ಆಧಾರ ನಂಬರ ಕಡ್ಡಾಯ, ತಂದೆ ತಾಯಿ ಆಧಾರ ನಂ ಕಡ್ಡಾಯ, ಮೊದಲು ನಿಮ್ಮ ಮೋಬೈಲ್‌ನಲ್ಲಿಯಾದರೂ ಖಾತೆಯ ತೆರೆಯಬೇಕು, ವೈಯಕ್ತಿಕ ಶೈಕ್ಷಣಿಕ ಮತ್ತು ವಿವಿಧ ವಿವರ ಸಲ್ಲಿಸಿ, ನೇರವಾಗಿ ಖಾತೆಗೆ ಜಮಾ ಆಗುತ್ತದೆ, ಜಿಲ್ಲೆ ಹೆಚ್ಚು ವಿದ್ಯಾರ್ಥಿಗಳು ಲಾಗಿನ್ ಮಾಡಿಕೊಳ್ಳಲು ತಿಳಿಸಿದರು. 

ಭಾಜಪ ತಾಲೂಕಾ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ ಸಿ ಎಂ ಬೊಮ್ಮಾಯಿಯವರ ದೂರದೃಷ್ಟಿಯ ರೈತರ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿಯೇ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಮಾಡಿದ ಯೋಜನೆ ಇದಾಗಿದ್ದು, ಕಷ್ಟದಲಿರುವ ರೈತರ ಮಕ್ಕಳಿಗೆ ಅನ್ನದಾತರ ಮಕ್ಕಳ ಹಿತದೃಷ್ಟಿಯಿಂದ ಈ ಯೋಜನೆ ಫಲಪ್ರದವಾದುದ್ದು ಆದ್ದರಿಂದ ಹೆತ್ತವರಿಗೆ ಹೆಸರು ತರುವ ಕಾರ್ಯ ವಿದ್ಯಾರ್ಥಿಗಳು ಮಾಡಬೇಕು ಎಂದರು. 

ಪ್ರಾಚಾರ್ಯ ಡಾನಾಗರಾಜ ದ್ಯಾಮನಕೋಪ್ಪ ಮಾತನಾಡಿ ಸರ್ಕಾರಿ ನೌಕರಿಯಲ್ಲಿದ್ದರೂ  ಪಹಣಿ ಪತ್ರಿಕೆ ನೀಡಿ ವಿದ್ಯಾರ್ಥಿಗಳು ಈ ಯೋಜನೆ ಸದುಪಯೋಗ ಪಡೆಯಬಹುದು, ವಿವೇಚನೆಯಲ್ಲಿ ಜನರ ಸೇವೆ ಮಾಡುವವರು ಅಧಿಕಾರದಲ್ಲಿದರೆ ಇಂತಹ ಯೋಜನೆಗಳು ಮನೆ ಬಾಗಿಲಿಗೆ ಬರುತ್ತವೆ ಎಂದರು. 

ಈ ಸಂದರ್ಭದಲ್ಲಿ ತಾಲೂಕಾ ಸಹಾಯಕ ಕೃಷಿ ಅಧಿಕಾರಿ ಸುರೇಶ ದೀಕ್ಷೀತ ಸೇರಿದಂತೆ ಕೃಷಿ ಇಲಾಖೆಯ ಮತ್ತು ಶಾಲೆಯ ಸಿಬ್ಬಂದಿಗಳು, ವಿದ್ಯಾರ್ಥಿಗಳು ಇದ್ದರು. 


ಸುದ್ದಿ ಓದಿ