ಕಂಪ್ಯೂಟರ್ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ
ಲೋಕದರ್ಶನ ವರದಿ
ಹೊಸಪೇಟೆ 04: ನಗರದ ಅಂಜುಮನ್ ಶಾದಿಮಹಲ್ ಕಛೇರಿ ಆವರಣದಲ್ಲಿ ಸ್ಥಳೀಯ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯ ವತಿಯಿಂದ ಆಯೋಜಿಸಿದ ಕಾಮನ್ ಸವರ್ಿಸ್ ಸೆಂಟರ್ ಉಧ್ಘಾಟನಾ ಕಾರ್ಯಕ್ರಮ ಹಾಗು ಅಂಜುಮನ್ ಉಚಿತ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ವಿಧ್ಯಾಥರ್ಿಗಳಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ಕೌಟುಂಬಿಕ ಕಲಹಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಶರಿಯತ್ ನ್ಯಾಯಾಲಯದ ಉದ್ಘಾಟನೆಯನ್ನು ದಿ.3ರಂದು ವಿಜಯನಗರ ಜಿಲ್ಲಾಧಿಕಾರಿಗಳು ನೆರವೇರಿಸಿದರು.
ಅಂಜುಮನ್ ಕಮಿಟಿಯ ಅಧ್ಯಕ್ಷ ಹೆಚ್ ಎನ್ ಮೊಹಮ್ಮದ್ ಇಮಾಮ್ ನಿಯಾಜಿರವರು ಮಾತನಾಡಿ ಜಿಲ್ಲಾಧಿಕಾರಿ ದಿವಾಕರ್ ಅವರು ಅವಿರತ ಪರಿಶ್ರಮದಿಂದ ಜಿಲ್ಲೆಯಲ್ಲಿ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತಿರುವುದಕ್ಕೆ ವಿಜಯ ನಗರ ಕ್ಷೇತ್ರದ ಎಲ್ಲಾ ಜನರ ಪರವಾಗಿ ಹಾಗು ಮುಸ್ಲಿಂ ಸಮುದಾಯದ ಕಮಿಟಿಯ ಪರವಾಗಿ ಅಭಿನಂದನೆಗಳನ್ನು ತಿಳಿಸಿ ಜಿಲ್ಲಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಮಿಟಿಯು ಈಗಾಗಲೇ ಅನೇಕ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ಹೊಸಪೇಟೆ ಭಾಗದ ಎಸ್ಎಸ್ಎಲ್ಸಿ ಮುಗಿಸಿದ ಎಲ್ಲಾ ಜಾತಿ ಧರ್ಮಗಳ ಬಡ ವಿದ್ಯಾಥರ್ಿ ವಿದ್ಯಾರ್ಥಿನಿಯರಿಗೆ ಉಚಿತ ಕಂಪ್ಯೂಟರ್ ತರಬೇತಿ ಕೊಡಿಸುವುದು, ಅಂಜುಮನ್ ಆಸ್ಪ್ಪತ್ರೆಯ ಮೂಲಕ ಗಭರ್ಿಣಿ ಸ್ರೀಯರಿಗೆ ಕಡಿಮೆ ದರದಲ್ಲಿ ಹೆರಿಗೆ ಮಾಡಿಸುವುದು, ಮುಸ್ಲಿಂ ಶರಿಯತ್ ನ್ಯಾಯಾಲಯದ ಮೂಲಕ ಕೌಟುಂಬಿಕ ಕಲಹಗಳನ್ನು ಬಗೆಹರಿಸುವುದು. ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಕ್ಷೇತ್ರದಲ್ಲಿ ಸಂಸ್ಥೆಯು ಕಳೆದ 8 ವರ್ಷಗಳಿಂದ ವೈದ್ಯಕೀಯ ಸೇವೆಯಾದ ಅಂಜುಮನ್ ಮಕ್ಕಳ ಹಾಗು ಹೆರಿಗೆ ಆಸ್ಪತ್ರೆಯನ್ನು ಬಾಡಿಗೆ ಕಟ್ಟಡದಲ್ಲಿ ನೆಡೆಸಿ ಈ ವರೆಗೆ 4000 ಹೆರಿಗೆಗಳನ್ನು ಯಶಸ್ವಿಯಾಗಿ ಜರುಗಿಸಿರುತ್ತದೆ. ಆದರೆ ಅಂಜುಮನ್ ಸಂಸ್ಥೆಯ ಜನರಲ್ ಹಾಗೂ ಟ್ರಾಮಾ ಸೆಂಟರ್ ಆಸ್ಪತ್ರೆಗೆ ಸ್ವಂತ ಕಟ್ಟಡ ನಿರ್ಮಿಸಲು ನಮಗೆ ಹಣದ ಅವಶ್ಯಕತೆ ಇರುತ್ತದೆ.
ಈ ನಿಟ್ಟಿನಲ್ಲಿ ತಮ್ಮ ಅಧೀನ ಆಧಿಕಾರದಲ್ಲಿ ಬರುವ ಯಾವುದೇ ಯೋಜನೆ ಅಡಿಯಲ್ಲಿ ನಮಗೆ ಹಣ ಬಿಡುಗಡೆ ಮಾಡಿಕೊಡಬೇಕೆಂದು ವಿನಂತಿಸಿದರು. ಹಾಗೂ ಬೆಳೆಯುತ್ತಿರುವ ನಗರದಲ್ಲಿ ಮುಸ್ಲಿಂ ಸಮಾಜಕ್ಕೆ ಸ್ಮಶಾನವು ಸಣ್ಣ ಪ್ರಮಾಣದ ಸ್ಥಳಗಳಿದ್ದು ತೊಂದರೆಯಾಗುತ್ತಿದೆ. ಆದ್ದರಿಂದ ಸ್ಮಶಾನ ನಿರ್ಮಿಸಲು ಸರ್ಕಾರೀ ಜಮೀನನ್ನು ಒದಗಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ಮುಸ್ಲಿಂ ಸಮಾಜದ ಪರವಾಗಿ ಅಂಜುಮನ್ ಕಮಿಟಿಯ ಸದಸ್ಯರುಗಳೊಂದಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ದಿವಾಕರ್ರವರು ಮಾತನಾಡಿ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯ ಸರ್ವ ಧರ್ಮದ ಸಾಮಾಜಿಕ ಕಳಕಳಿ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು.ನಾನು ನಿಮ್ಮ ಕ್ಷೇತ್ರಕ್ಕೆ ಬಂದಿರುವ ಅತಿಥಿ ಅಷ್ಟೆ, ಅಧಿಕಾರಿಯಾಗಿ ನನ್ನ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದರು.
ಇಂದಿನ ಆಧುನಿಕ ಸಮಾಜದಲ್ಲಿ ಮಕ್ಕಳಿಗೆ ಹಿರಿಯರನ್ನು ಗೌರವಿಸುವುದನ್ನು ಶಿಕ್ಷಣದ ಜೊತೆ ಜೊತೆಗೆ ಕಲಿಸಿರಿ. ಎಷ್ಟೋ ಕೌಟುಂಬಿಕ ಕಲಹಗಳಲ್ಲಿ ಮಕ್ಕಳು ಹಿರಿಯನ್ನು ಸರಿಯಾಗಿ ಪಾಲನೆ ಪೋಷಣೆ ಮಾಡದೆ ಅಗೌರವಿಂದ ಕಾಣುವುದು ನಮ್ಮ ಗಮನಕ್ಕೆ ಬರುತ್ತಿರುವದರಿಂದ ನ್ಯಾಯಾಲಯದ ಸಮಯ ವ್ಯರ್ಥವಾಗುತ್ತಿದೆ, ಈ ನಿಟ್ಟಿನಲ್ಲಿ ಬೇರೆ ಬೇರೆ ಗಂಭೀರ ಪ್ರಕರಣಗಳ ವಿಚಾರಣೆಗಳು ವಿಳಂಬವಾಗುತ್ತವೆ. ದಯವೇ ಧರ್ಮದ ಮೂಲವಾಗಿರುವುದರಿಂದ ಹಿಂದು, ಮುಸ್ಲಿಂ, ಕ್ರಿಸ್ಚಿಯನ್ ಹಾಗು ಎಲ್ಲಾ ಧರ್ಮಗಳು ಇದನ್ನೇ ಸಾರುತ್ತವೆ ಇದೇ ಸಂದರ್ಭದಲ್ಲಿ ಉದರ್ು ಕವಿತೆಯಾಗಿರುವ (ಹೊಸ್ಬನುಲ್ಲಾಹ್ ವಾ ನಿಮಲ್ ವಕೀಲ್, ನಿಮೆಲ್ ಮೌಲಾ, ನಿಮೆಲ್ ನಾಸೀರ್) ಸ್ಮರಿಸುತ್ತಾ ಅಂದರೆ ಯಾವುದಕ್ಕೂ ಭಯ ಪಡದಿರಿ ಈ ಜಗತ್ತಿನಲ್ಲಿ ದೇವರ ನ್ಯಾಯಾಲಯದಲ್ಲಿ ವಕೀಲನು ಭಗವಂತನೆ ನಾಯಾಧೀಶನು ಭಗವಂತನೆ, ಬಂದಿರುವುದನ್ನು ಶಾಂತ ಮನದಿ ಸ್ವೀಕರಿಸುವುದು ಒಳಿತು, ನಿಮ್ಮ ಬೇಡಿಕೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆಂದರು.
ಬಿಡಿಸಿಸಿ ಬ್ಯಾಂಕ್ನ ಅಧಿಕಾರಿ ಹಾಗೂ ಅಂಬೇಡ್ಕರ ಸಂಘದ ಅಧ್ಯಕ್ಷ ಉಮಾಪತಿ, ಸಮಾಜ ಸೇವಕ, ಕಾಂಗ್ರೆಸ್ ಮುಖಂಡ ರಾಮನ ಗೌಡ, ರಫಿಕ್ ಯಂಕಪ್ಪ, ಗೌರೀಶ್, ನಜ್ಮುನ್, ಆರೀಫಾ ಬ್ಯಾಟರಿ ಅತೀಕ್, ಹಾಗು ಅಂಜುಮನ್ ಕಮಿಟಿಯ ಉಪಾಧ್ಯಕ್ಷ ಎಮ್ ಫಿರೋಜ್ ಖಾನ್, ಕಾರ್ಯದರ್ಶಿ ಎಮ್.ಡಿ.ಅಬೂಬಕ್ಕರ್, ಖಜಾಂಚಿ ಜಿ. ಅನ್ಸರ್ ಭಾಷ, ಸಹಕಾರ್ಯದರ್ಶಿ ಡಾ.ಎಮ್.ಡಿ. ದುರ್ವೇಶ್ ಮೈನುದ್ದಿನ್ ಹಾಗು ಸದ್ಯಸರುಗಳಾದ ಕೋತ್ವಾಲ್ ಮೊಹಮ್ಮದ್ ಮೋಸಿನ್ ಅಡ್ವಕೇಟ್ ಸದ್ದಾಮ್ ಹುಸೇನ್, ಎಲ್. ಗುಲಾಮ್ ರಸೂಲ್ ಹಾಗೂ ನೂರಾರು ವಿದ್ಯಾರ್ಥಿಗಳು ಪಾಲಕರು ಪೋಷಕರು ಸಮುದಾಯದ ಹಿರಿಯ ಮುಖಂಡರು ಭಾಗವಹಿಸಿದ್ದರು