ಮನರಂಜನೆ

ನೆಟ್‌ಫಿಕ್ಸ್‌ ಸಂಸ್ಥೆಗೆ ಭಾರತದಲ್ಲಿ ನಿರಾಶೆಯಾಗಿದೆಯೇ ?

ನೆಟ್‌ಫಿಕ್ಸ್‌ ಸಂಸ್ಥೆಗೆ ಭಾರತದಲ್ಲಿ ನಿರಾಶೆಯಾಗಿದೆಯೇ ?

 ವಿಶ್ವದ ಅತಿದೊಡ್ಡ ಒಟಿಟಿ ಫ್ಲಾಟ್‌ಫಾರಂಗಳಲ್ಲಿ ನೆಟ್‌ಫಿಕ್ಸ್‌ ಅಗ್ರಗಣ್ಯವಾಗಿದೆ. ಮಾರುಕಟ್ಟೆಯಲ್ಲಿ ಯಾವ ಚಿತ್ರ – ಧಾರವಾಹಿ – ಸಾಕ್ಷ್ಯಚಿತ್ರ ಗೆಲ್ಲುತ್ತದೆ ಎಂದು ನಿಖರವಾಗಿ ಊಹಿಸುವ ತಜ್ಞರು ಅಲ್ಲಿದ್ದಾರೆ. ಅಂಥವರು ಭಾರತದಲ್ಲಿ ಸ್ಟ್ರೀಮಿಂಗ್ ಆರಂಭ ಬಹುದೊಡ್ಡ ಯಶಸ್ಸು ತಂದುಕೊಡುತ್ತದೆ ಎಂದೇ ಶಿಫಾರಸು ಮಾಡಿದ್ದರು. ಅವರ ಈ ಗ್ರಹಿಕೆ ಸುಳ್ಳಾಗುತ್ತಿದೆಯೇ ?

ಮೂರು ವರ್ಷದ ಹಿಂದೆ ದೆಹಲಿಯಲ್ಲಿ ನಡೆದ ಜಾಗತಿಕ ವ್ಯಾಪಾರ ಶೃಂಗಸಭೆಯಲ್ಲಿ ನೆಟ್‌ಫ್ಲಿಕ್ಸ್‌ ಸಂಸ್ಥೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರೀಡ್ ಹೇಸ್ಟಿಂಗ್ಸ್ ಅವರು ಸ್ಟ್ರೀಮಿಂಗ್ ದೈತ್ಯ ಕಂಪನಿಗೆ ಮುಂದಿನ 100 ಮಿಲಿಯನ್ ಚಂದಾದಾರರು ಭಾರತದಿಂದ ಬರುತ್ತಾರೆ. ಏಕೆಂದರೆ ವಿಸ್ತರಿಸುತ್ತಿರುವ ಮಾರುಕಟ್ಟೆ ಮತ್ತು ಅಗ್ಗದ ಇಂಟರ್ನೆಟ್ ಕಾರಣ ಎಂದು ಅಭಿಪ್ರಾಯಪಟ್ಟಿದ್ದರು.

ಆದರೆ ಈ ಮೂರುವರ್ಷಗಳಲ್ಲಿ ಭಾರದಲ್ಲಿ  ಸಾಕಷ್ಟು ಅಲೆಗಳ ಏರಿಳಿತ ಉಂಟಾಗಿದೆ. ಕಂಪನಿ ಸಿಇಒ ಮಾತು ಈಗ ಉತ್ಸಾಹದಿಂದ ಧ್ವನಿಸುತ್ತಿಲ್ಲ. ಏಕೆಂದರೆ ಕಳೆದವಾರ ಜರುಗಿದ ಹೂಡಿಕೆದಾರರ ಸಭೆಯಲ್ಲಿ ಅವರು ನಿರಾಶೆಯಿಂದ ಮಾತನಾಡಿದ್ದಾರೆ.

ಜಗತ್ತಿನ ಬೇರೆಬೇರೆ ದೇಶಗಳಲ್ಲಿ ನೆಟ್‌ಫ್ಲಿಕ್ಸ್‌ ಯಶ್ವಿಯಾಗಿದೆ. ಆದರೆ  ನಾವು ಭಾರತದಲ್ಲಿ ಏಕೆ ಯಶಸ್ವಿಯಾಗಲಿಲ್ಲ ಎಂಬುದೇ ನಿರಾಶೆಗೊಳಿಸುವ ವಿಷಯವಾಗಿದೆ. ಆದರೂ ನಾವು ಈ ಮಾರುಕಟ್ಟೆ ಬಗ್ಗೆ ಒಲವು ತೋರುತ್ತಿದ್ದೇವೆ”ಎಂದು ಹೇಳಿದ್ದಾರೆ.

ಭಾರತದಲ್ಲಿ ಎಲ್ಲ ಒಟಿಟಿ ಫ್ಲಾಟ್‌ಫಾರಂಗಳಲ್ಲಿಯೂ ಸೇರಿ  ಸ್ಟ್ರೀಮಿಂಗ್ ಮಾರುಕಟ್ಟೆಯು ಸುಮಾರು 100 ಮಿಲಿಯನ್ ಚಂದಾದಾರಿಕೆ ಹೊಂದಿದೆ ಎಂದು ಮೀಡಿಯಾ ಪಾರ್ಟ್‌ನರ್ಸ್ ಏಷ್ಯಾ, ಮಾಧ್ಯಮ ಸಲಹಾ ಸಂಸ್ಥೆ ತಿಳಿಸಿದೆ. ಆದರೆ ಆರು ವರ್ಷಗಳ ಹಿಂದೆ ಪ್ರಾರಂಭವಾದಾಗಿನಿಂದ, ನೆಟ್‌ಫ್ಲಿಕ್ಸ್ ಇಲ್ಲಿ ಏರಿಳಿತ ಕಾಣುತ್ತಿದೆ.

ಉದ್ಯಮದ ಅಂದಾಜಿನ ಪ್ರಕಾರ, ಅಂದಾಜು 5.5 ಮಿಲಿಯನ್ ಪಾವತಿಸುವ ಚಂದಾದಾರರೊಂದಿಗೆ, ಪ್ರಪಂಚದ ಅತಿದೊಡ್ಡ ಸ್ಟ್ರೀಮರ್ ನೆಟ್‌ಫ್ಲಿಕ್ಸ್‌  ತನ್ನ ಪ್ರಮುಖ ಪ್ರತಿಸ್ಪರ್ಧಿಗಳಾದ ಡಿಸ್ನಿ+ ಹಾಟ್‌ಸ್ಟಾರ್ (46 ಮಿಲಿಯನ್) ಮತ್ತು ಅಮೆಜಾನ್ ಪ್ರೈಮ್ ವಿಡಿಯೋ (19 ಮಿಲಿಯನ್) ಗಿಂತ ಹಿಂದುಳಿದಿದೆ.

ನೆಟ್‌ಫ್ಲಿಕ್ಸ್ 2018 ರಲ್ಲಿ ಸೇಕ್ರೆಡ್ ಗೇಮ್ಸ್‌ನೊಂದಿಗೆ ಬೃಹತ್‌ ಹೂಡಿಕೆಯ ಆನ್‌ ಲೈನ್‌ ಕಾರ್ಯಕ್ರಮ ಆರಂಭಿಸಿತು. ಬಾಲಿವುಡ್ ಸ್ಟಾರ್‌ ತಾರಾಗಣವನ್ನು ಹೊಂದಿದ್ದ ಈ ಧಾರವಾಹಿಯನ್ನು ಖ್ಯಾತ ನಿರ್ದೇಶಕರೇ ನಿರ್ದೇಶಿಸಿದ್ದಾರೆ.  ಈ ಥ್ರಿಲ್ಲರ್ ಕಥಾನಕ ಬಹುಬೇಗ ವೀಖ್ಷಕರ ಮೆಚ್ಚುಗೆ ಪಡೆಯಿತು.


ಭಾರತ, ವಿಶಾಲವಾದ ಮನರಂಜನಾ ಮಾರುಕಟ್ಟೆಯಾಗಿದೆ. 200 ಮಿಲಿಯನ್‌ಗಿಂತಲೂ ಹೆಚ್ಚು ಕುಟುಂಬಗಳು ಟಿವಿ ಸೆಟ್‌ಗಳನ್ನು ಹೊಂದಿವೆ ಚಲನಚಿತ್ರಗಳು, ಕ್ರೀಡೆಗಳು ಮತ್ತು ಸುದ್ದಿಗಳ ಸಲುವಾಗಿ ಹೆಚ್ಚಿನ ಗ್ರಾಹಕರು ಪದೇಪದೇ ಚಾನೆಲ್‌ ಗಳನ್ನು ಬದಲಿಸುತ್ತಿರುತ್ತಾರೆ.

ಈ ನಡುವೆ ಗ್ರಾಹಕರು ನೈಜ ಕಥೆಗಳನ್ನು ಆಧರಿಸಿದ ಪ್ರದರ್ಶನಗಳನ್ನು ಅತಿಯಾಗಿ ವೀಕ್ಷಿಸಲು ಪ್ರಾರಂಭಿಸಿದ್ದಾರೆ. ಅತಿಯಾದ ಹಿಂಸಾಚಾರ ಮತ್ತು ಅಶ್ಲೀಲತೆಯಿಂದ ಕೂಡಿದ ಡಾರ್ಕ್ ಹಾರ್ಟ್‌ಲ್ಯಾಂಡ್ ಥ್ರಿಲ್ಲರ್‌ ಕಥಾನಕ ಹೊಂದಿರುವ ಧಾರವಾಹಿಗಳನ್ನು ಕುಟುಂಬದೊಟ್ಟಿಗೆ ಕುಳಿತು ವೀಕ್ಷಿಸಲು ಭಾರತೀಯರು ಬಯಸುವುದಿಲ್ಲ. ಇದು ಕೂಡ ಪ್ರಮುಖ ಅಂಶವಾಗಿದೆ.

ಈ ಎಲ್ಲ ಹಿನ್ನೆಲೆಯಲ್ಲಿ ಭಾರತದಲ್ಲಿ ಗ್ರಾಹಕರನ್ನು ಸೆಳೆಯಲು ನೆಟ್‌ಫ್ಲಿಕ್ಸ್ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಲೇಯಿದೆ. ಇದು ತನ್ನ ಮಾಸಿಕ ಪ್ಲಾನ್ ಬೆಲೆಗಳನ್ನು ಶೇಕಡ 6೦ ವರೆಗೆ ಕಡಿತಗೊಳಿಸಿದೆ – ಮೊಬೈಲ್ನಲ್ಲಿ ಮಾತ್ರ ವೀಕ್ಷಣೆ ಮಾಡುವ  ಮಾಸಿಕ ಯೋಜನೆಗೆ ಈಗ 149 ರೂಪಾಯಿ ವಿಧಿಸುತ್ತಿದೆ.  30 ಕ್ಕೂ ಹೆಚ್ಚು ಹಿಂದಿ ಭಾಷೆಯ ಚಲನಚಿತ್ರಗಳು ಸೇರಿದಂತೆ ಒಟ್ಟು 50 ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ಮಿಸಲು ಅತ್ಯಧಿಕ ಹಣ ಹೂಡಿಕೆ ಮಾಡಿದೆ.

ಹೂಡಿಕೆಗೆ ತಕ್ಕ ಮರು ಪಾವತಿಯಾಗುತ್ತಿಲ್ಲ ಎಂದೇ  ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮಾಧ್ಯಮ ಸಲಹಾ ಸಂಸ್ಥೆ ಓರ್ಮ್ಯಾಕ್ಸ್ ಪ್ರಕಾರ, ಕಳೆದ ವರ್ಷ ಅತಿ ಹೆಚ್ಚು ವೀಕ್ಷಿಸಿದ ಟಾಪ್ 15 ಹಿಂದಿ ಭಾಷೆಯ ಸ್ಟ್ರೀಮಿಂಗ್ ಶೋಗಳಲ್ಲಿ ನೆಟ್‌ಫ್ಲಿಕ್ಸ್ ಒಂದೇ ಒಂದು ಪ್ರದರ್ಶನವನ್ನು (ಕೋಟಾ ಫ್ಯಾಕ್ಟರಿ) ಹೊಂದಿತ್ತು

ಇಂಡಿಯನ್ ಮ್ಯಾಚ್‌ಮೇಕಿಂಗ್, ರಿಯಾಲಿಟಿ ಡೇಟಿಂಗ್ ಸರಣಿ, ಮತ್ತು ಇತ್ತೀಚೆಗೆ, ಡಿಕೌಪ್ಲ್ಡ್, ಮದುವೆಯ ಮೇಲಿನ ವಿಡಂಬನೆ, ಆಕರ್ಷಣೆ ಉಂಟು ಮಾಡಿದೆಯಾದರೂ ಈ ಕಾರ್ಯಕ್ರಮಗಳು ಸಂಸ್ಥೆಯ ಜಾಗತಿಕ ಖ್ಯಾತಿಗಳಿಸಿರುವ ಸ್ಕ್ವಿಡ್ ಗೇಮ್ಸ್, ಮನಿ ಹೀಸ್ಟ್ ಮತ್ತು ನಾರ್ಕೋಸ್‌ಗಳೊಂದಿಗೆ ಹೋಲಿಸಿದಾಗ ಯಶಸ್ಸು ತೀರಾ ಕಡಿಮೆ ಎಂದೇ ಭಾವಿಸಲಾಗಿದೆ.

ಇದಕ್ಕೂ ಕಾರಣಗಳಿವೆ ಎಂದು ವಿಮರ್ಶಕರು ಹೇಳುತ್ತಾರೆ. “ಭಾರತದಲ್ಲಿ ನೆಟ್‌ಫ್ಲಿಕ್ಸ್ ಅನ್ನು ಇನ್ನೂ ಉನ್ನತ ಮಾರುಕಟ್ಟೆ, ದುಬಾರಿ ಸೇವೆ ಎಂದು ಗ್ರಹಿಸಲಾಗಿದೆ. ಇದನ್ನು ಇನ್ನೂ ವಿದೇಶಿಯಾಗಿ ನೋಡಲಾಗುತ್ತದೆ” ಎಂದು ಅವರು ಅಭಿಪ್ರಾಯಪಡುತ್ತಾರೆ..

ಅಮೆಜಾನ್ ಪ್ರೈಮ್ ವಿಡಿಯೋ 10 ಭಾರತೀಯ ಭಾಷೆಗಳಲ್ಲಿ ದಿಗ್ಭ್ರಮೆಗೊಳಿಸುವ ವ್ಯಾಪಕ ಶ್ರೇಣಿಯ ಕಾರ್ಯಕ್ರಮಗಳನ್ನು ನೀಡುತ್ತಿದೆ. ಅದರ ಆಕ್ಷನ್-ಡ್ರಾಮಾ, ಫ್ಯಾಮಿಲಿ ಮ್ಯಾನ್, ಕಳೆದ ವರ್ಷ ಅತಿ ಹೆಚ್ಚು ವೀಕ್ಷಿಸಿದ ಹಿಂದಿ ಸ್ಟ್ರೀಮಿಂಗ್ ಶೋ ಆಗಿತ್ತು. ಮಿರ್ಜಾಪುರ್ ಧಾರವಾಹಿಯ ರಾಷ್ಟ್ರವ್ಯಾಪಿ ಹಿಟ್ ಆಗಿದೆ.

ಓರ್ಮ್ಯಾಕ್ಸ್ ಮೀಡಿಯಾದ ಸಿಇಒ ಶೈಲೇಶ್ ಕಪೂರ್ ಪ್ರಕಾರ, ಭಾರತೀಯ ಭಾಷೆಗಳಲ್ಲಿ ಸುಮಾರು 40% ನಷ್ಟು ಬ್ಲಾಕ್ಬಸ್ಟರ್ ಚಲನಚಿತ್ರಗಳು ಅಮೆಜಾನ್ ಒಡೆತನದಲ್ಲಿದೆ.‌ ಭಾರತೀಯ ಗ್ರಾಹಕರನ್ನು ತನ್ನತ್ತ ಸೆಳೆಯಲು ಈ ಕಂಪನಿ ಬೇರೆಬೇರೆ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ.

ಈ ವರ್ಷದಿಂದ, ಕ್ರಿಕೆಟ್ ಲೈವ್ ಸ್ಟ್ರೀಮಿಂಗ್ ಆರಂಭಿಸಲಾಗಿದೆ. ಇದರ  ಸದಸ್ಯತ್ವವು ಅಮೆಜಾನ್‌ ನಲ್ಲಿ ಖರೀದಿ ಮಾಡುವುದರೊಂದಿಗೆ ಬರುತ್ತದೆ. ಪ್ರೈಮ್ ತನ್ನ ಸದಸ್ಯರಿಗೆ ಇತರ ಎಂಟು ಸಣ್ಣ ಸ್ಟ್ರೀಮಿಂಗ್ ಸೇವೆಗಳನ್ನು ಪ್ರವೇಶಿಸಲು ಸಹ ಅನುಮತಿಸುತ್ತದೆ – ಶೋಗಳು, ಚಲನಚಿತ್ರಗಳು, ರಿಯಾಲಿಟಿ ಟಿವಿ, ಸಾಕ್ಷ್ಯಚಿತ್ರಗಳು – ಹೀಗೆ ಎಲ್ಲರಿಗೂ ಒಂದೇ ಪಾವತಿ ಆಯ್ಕೆಯನ್ನು ನೀಡುತ್ತದೆ.

ನೆಟ್‌ಫ್ಲಿಕ್ಸ್ ಮಿಲಿಯನ್‌ಗಟ್ಟಲೆ ಡಾಲರ್‌ಗಳನ್ನು ಬಂಡವಾಳವಾಗಿದೆ ಹೂಡಿದೆ. ಭಾರತದಲ್ಲಿ ತನ್ನ ಜಾಗತಿಕ ಯಶಸ್ಸನ್ನು ಪುನರಾವರ್ತಿಸಲು ತನ್ನ “ಅಂತರರಾಷ್ಟ್ರೀಯ ಪ್ಲೇಬುಕ್” ಅನ್ನು ಅಳವಡಿಸಿಕೊಂಡಿದೆ ಎಂದು ಉದ್ಯಮ ತಜ್ಞರು ಹೇಳುತ್ತಾರೆ. ಸಂಸ್ಥೆಯು ಪ್ರಮುಖ ಬಾಲಿವುಡ್ ಸ್ಟುಡಿಯೋಗಳು ಮತ್ತು ಚಲನಚಿತ್ರಗಳಿಗಾಗಿ ನಿರ್ಮಾಪಕರೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ.

ಈ ರಚನೆಕಾರರಲ್ಲಿ ಯಾರೊಬ್ಬರೂ ಸ್ಟ್ರೀಮಿಂಗ್ ಶೋಗಳನ್ನು ಮಾಡುವ ಅನುಭವವನ್ನು ಹೊಂದಿಲ್ಲ. ನಿರ್ಮಿತವಾಗಿರುವುದರಲ್ಲಿ ಹೆಚ್ಚಿನವು ವಿಫಲವಾಗಿವೆ,” ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಮೀಡಿಯಾ ಪಾರ್ಟ್‌ನರ್ಸ್ ಏಷ್ಯಾದ ಉಪಾಧ್ಯಕ್ಷ ಮಿಹಿರ್ ಷಾ  “ನೆಟ್‌ಫ್ಲಿಕ್ಸ್ ಹೆಚ್ಚು ಸ್ಥಳೀಯತೆಗೆ ಆದ್ಯತೆ ನೀಡಬೇಕಾಗಿದೆ. ಇದು ಹೆಚ್ಚಿನ ಯಶಸ್ಸು ಸಾಧಿಸುವಲ್ಲಿ ಸಹಕಾರಿಯಾಗಬಲ್ಲುದು ಎಂದೇ ಅಭಿಪ್ರಾಯಪಡುತ್ತಾರೆ.

ಭಾರತದಲ್ಲಿ ನೆಟ್‌ಫ್ಲಿಕ್ಸ್ ಹೇಳುವಂತೆ ತಾನು 2016 ರಲ್ಲಿ ಪ್ರಾರಂಭವಾದಾಗಿನಿಂದ ಅದು ನಿರ್ಮಿಸಿದ ಕಾರ್ಯಕ್ರಮಗಳ ಬಗ್ಗೆ ಹೆಮ್ಮೆಯಿದೆ ಎಂದು ಹೇಳುತ್ತದೆ. “ನಾಟಕದಿಂದ ಹಾಸ್ಯ, ರೋಮ್ಯಾನ್ಸ್, ಕಾಲ್ಪನಿಕ ಕಥೆಗಳಿಗೆ – ಪ್ರಕಾರಗಳು ಮತ್ತು ಸ್ವರೂಪಗಳಾದ್ಯಂತ ಅತ್ಯುತ್ತಮ-ದರ್ಜೆಯ ಕಥೆಗಳೊಂದಿಗೆ ನಮ್ಮ ಸದಸ್ಯರನ್ನು ರಂಜಿಸಲು ನಾವು ಗಮನಹರಿಸಿದ್ದೇವೆ. ಎಂದು ಸಂಸ್ಥೆ ಅಭಿಪ್ರಾಯಪಡುತ್ತದೆ.

“ವಿವಿಧ ಭಾಷೆಗಳನ್ನು ಮಾತನಾಡುವ ಸದಸ್ಯರಿಗೆ ಸಂತೋಷ ಉಂಟು ಮಾಡಲು  ದೇಶದ ಎಲ್ಲಾ ಮೂಲೆಗಳಿಂದ ಹೆಚ್ಚು ವೈವಿಧ್ಯಮಯ ಕಥೆಗಳಲ್ಲಿ ಹೂಡಿಕೆ ಮಾಡುತ್ತಿದೆ” ಎಂದು ಸಂಸ್ಥೆ ಹೇಳುತ್ತದೆ. ಈ ದಿಶೆಯಲ್ಲಿ ಕಳೆದ ತಿಂಗಳು, ಕಂಪನಿ,  ಮಿನ್ನಲ್ ಮುರಳಿ ಎಂಬ ಮಲಯಾಳಂ ಭಾಷೆಯ ಸೂಪರ್‌ಹೀರೋ ಚಲನಚಿತ್ರವನ್ನು ಬಿಡುಗಡೆ ಮಾಡಿದೆ.

ಉದ್ಯಮದ ಅಂದಾಜಿನ ಪ್ರಕಾರ ಭಾರತದ ಸ್ಟ್ರೀಮಿಂಗ್ ಮಾರುಕಟ್ಟೆಯು 2026 ರ ವೇಳೆಗೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. ಆದರೆ ಲಕ್ಷಾಂತರ ಗ್ರಾಹಕರನ್ನು ಸೇರಿಸುವುದರಿಂದ ನೆಟ್‌ಫ್ಲಿಕ್ಸ್ ವ್ಯಾಪಕ ಶ್ರೇಣಿಯ ವಿಷಯವನ್ನು ನೋಡಬೇಕಾಗುತ್ತದೆ – ಬೇರೆ ರೀತಿಯಲ್ಲಿ ಹೇಳುವುದಾದರೆ, ಹೆಚ್ಚು ಸ್ಥಳೀಯತೆಗಳಿಗೆ ಆದ್ಯತೆ ನೀಡಬೇಕಾಗುತ್ತದೆ.

ಆದರೆ ಈಗ ಅದು ಅಷ್ಟು ಸರಳ ಮತ್ತು ಸುಲಭವಲ್ಲ. ಭಾರತವು ಈಗಾಗಲೇ 75 ಕ್ಕೂ ಹೆಚ್ಚು ಸ್ಟ್ರೀಮಿಂಗ್ ಸೇವೆಗಳನ್ನು ಹೊಂದಿದೆ. ಕೆಲವು ಹಿಟ್‌ಗಳಿವೆ ಮತ್ತು ಅನೇಕ ವೈಫಲ್ಯಗಳಿವೆ. ಭಾರತೀಯ ಭಾಷೆಗಳಲ್ಲಿ 225 ಪ್ರದರ್ಶನಗಳನ್ನು ಪ್ರಾರಂಭಿಸಲಾಯಿತು – ಅವುಗಳಲ್ಲಿ 170  ಹಿಂದಿಯಲ್ಲಿ.  ಕಳೆದ ವರ್ಷದ ಸ್ಟ್ರೀಮಿಂಗ್ ಸೇವೆಗಳಲ್ಲಿ, 15-20 ಮಾತ್ರ ಯಶಸ್ವಿಯಾಗಿದೆ.. “ಪ್ರತಿಯೊಬ್ಬರೂ ಹೆಚ್ಚು ಕಾರ್ಯಕ್ರಮ ನಿರ್ಮಾಣ ಮಾಡುತ್ತಿದ್ದಾರೆ ಪ್ರಯೋಗ ಮಾಡುತ್ತಿದ್ದಾರೆ. ಆದರೆ ನೆನಪಿಡಬೇಕಾದ ಅಂಶವೆಂದರೆ ಭಾರತವು ಸಂಕೀರ್ಣ ಮಾರುಕಟ್ಟೆಯಾಗಿದೆ.

ಸುದ್ದಿ ಓದಿ