ಹೊಸಪೇಟೆ

ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ" ಕಾರ್ಯಕ್ರಮಕ್ಕೆ ಅತಿಥಿಗಳಿಗೆ ಆಹ್ವಾನ

ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ"  ಕಾರ್ಯಕ್ರಮಕ್ಕೆ ಅತಿಥಿಗಳಿಗೆ ಆಹ್ವಾನ

ಹೊಸಪೇಟೆ 16: ತಾಲೂಕು ವಾಲ್ಮೀಕಿ ನಾಯಕ ಸಂಘದ ಪದಾಧಿಕಾರಿಗಳು ಹುಡಾ ಕಚೇರಿಯಲ್ಲಿ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಅಂಜುಮನ್ ಕಮಿಟಿಯ ಅಧ್ಯಕ್ಷರಾದ ಹೆಚ್‌.ಎನ್‌. ಮೊಹಮ್ಮದ್ ಇಮಾಮ್ ನಿಯಾಜಿ ಭೇಟಿ ಮಾಡಿ ವಾಲ್ಮೀಕಿ ನಾಯಕ ಸಂಘ ಹಾಗೂ ಜಿಲ್ಲಾಡಳಿತ ಸಂಯುಕ್ತ ಆಶ್ರಯದಲ್ಲಿ ಪುಣ್ಯಾನಂದಪುರಿ ಕಲ್ಯಾಣ ಮಂಟಪ, ಹೊಸಪೇಟೆಯಲ್ಲಿ  ನಡೆಯುವ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ"  ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಅಗಮಿಸುವಂತೆ ಅಮಂತ್ರಣ ಪತ್ರಿಕೆ ನೀಡಿ ಆಹ್ವಾನ ನೀಡಿದರು. 

ಇದೇ ವೇಳೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್‌.ಎನ್‌. ಮೊಹಮ್ಮದ ಇಮಾಮ್ ನಿಯಾಜಿ ತಾಲೂಕು ವಾಲ್ಮೀಕಿ ನಾಯಕ ಸಂಘದ ನೂತನ ಅಧ್ಯಕ್ಷರಾದ ಗುಜ್ಜಲ ಶ್ರೀನಾಥ ಹಾಗೂ ಸಹ ಕಾರ್ಯದರ್ಶಿಗಳಾದ ದೇವರಮನಿ ಶ್ರೀನಿವಾಸ ಸನ್ಮಾನಿಸಿ ಅಭಿನಂದಿಸುವ ಮೂಲಕ ಶುಭ ಕೋರಿದರು. 

ನಂತರ ಮಾತನಾಡಿ ಇಡೀ ಸಮಾಜದ  ಶ್ರೇಯೋಭಿವೃದ್ಧಿಗಾಗಿ  ನಾವೆಲ್ಲರೂ ಪರಸ್ಪರ ಸ್ನೇಹ, ಸಹಕಾರ,  ಸೌಹಾರ್ದತೆಯಿಂದ  ಕೆಲಸ ಮಾಡೋಣವೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ  ವಾಲ್ಮೀಕಿ ನಾಯಕ ಸಂಘದ ವಿವಿಧ ಪದಾಧಿಕಾರಿಗಳಾದ ಕಿನ್ನಾಲ ಹನುಮಂತ, ಗೋಸಲ ಭರಮಪ್ಪ, ಕಣ್ಣಿ ಶ್ರೀಕಂಠ, ಜಂಬಾನಳ್ಳಿ ವಸಂತ, ಗುಡಗುಂಟಿ ಮಲ್ಲಿಕಾರ್ಜುನ ಹಾಗೂ ಸಮಾಜದ ಮುಖಂಡರು, ಗಣ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ