ಕಿತ್ತೂರ ರಾಣಿ ಚನ್ನಮ್ಮ ಬಾಲಕಿಯರ ವಸತಿ ಸೈನಿಕ ಶಾಲೆಯಲ್ಲಿ ವಿದ್ಯಾರ್ಥಿನಿಯರ ಪದಗ್ರಹಣ ಸಮಾರಂಭ
ಕಿತ್ತೂರ 01: ಕಿತ್ತೂರ ರಾಣಿ ಚನ್ನಮ್ಮ ಬಾಲಕಿಯರ ವಸತಿ ಸೈನಿಕ ಶಾಲೆಯಲ್ಲಿ ಆಗಸ್ಟ್ 1, 2026ರಂದು ವಿದ್ಯಾರ್ಥಿ ಪರಿಷತ್‌ಗೆ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಪದಗ್ರಹಣ ಸಮಾರಂಭವನ್ನು ಆಯೋಜಿಸಲಾಗಿತ್ತು. ಶಾಲೆಯ ಧ್ಯೇಯವಾಕ್ಯ ಮತ್ತು ನೀತಿಗೆ ಅನುಗುಣವಾಗಿ ಪ್ರಾಮಾಣಿಕತೆ ಮತ್ತು ಶಿಸ್ತಿನಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವುದಾಗಿ (ವಿದ್ಯಾರ್ಥಿನಿಯರು) ನೇಮಕಾತಿಗಳು ಪ್ರಮಾಣವಚನವನ್ನು ಸ್ವೀಕರಿಸಿದರು.
ಈ ಕಾರ್ಯಕ್ರಮಕ್ಕೆ ಬೆಳಗಾವಿಯ ಆರ್‌ಎಂಎಸ್ ನ ಪ್ರಾಂಶುಪಾಲರಾದ ಲೆಫ್ಟಿನಂಟ್ ಕರ್ನಲ್ ಪ್ರಭಾ ಬಿಶ್ಟ್ ಮುಖ್ಯ ಅತಿಥಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಅಧಿಕಾರವು ಜವಾಬ್ದಾರಿಯೊಂದಿಗೆ ಬರುತ್ತದೆ ಮತ್ತು ಕೆಲವೇ ಜನರಿಗೆ ನಾಯಕರಾಗಲು ಅವಕಾಶ ಸಿಗುತ್ತದೆ ಎನ್ನುತ್ತ ಎಚ್ಚರಿಕೆಯಿಂದ ಜವಾಬ್ದಾರಿ ನಿರ್ವಹಿಸಿ ಎಂದು ನೇಮಕಾತಿಗಳಿಗೆ ಸಲಹೆ ನೀಡಿದರು. ಪ್ರಾಂಶುಪಾಲರು ಅವರ ಸ್ಥಾನಕ್ಕೆ ತಕ್ಕಂತೆ ಮಾದರಿಯಾಗಿ ಮುನ್ನಡೆಯಲು ಪ್ರೇರೇಪಿಸಿ, ಅವರನ್ನು ಅಭಿನಂದಿಸಿದರು. ಕೆಲಸದ ಜವಾಬ್ದಾರಿ ಮತ್ತು ಬಲವಾದ ಸಂದೇಶವನ್ನು ಒಳಗೊಂಡಿದ್ದ ಈ ಸಮಾರಂಭವು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.