ಅಂತರಾಷ್ಟ್ರ ಮಟ್ಟದ ಪುಟ್ ಬಾಲ್ ಪಂದ್ಯಾವಳಿ
ಜಮಖಂಡಿ 04: ನಗರದ ಐತಿಹಾಸಿಕ ಪೋಲೋ ಮೈದಾನದಲ್ಲಿ ನಡೆದ ಗುರುದೇವ ರಾನಡೆ ಪುಟ್ ಬಾಲ್ ಕ್ರೀಡಾ ಸಂಸ್ಥೆಯ ಸಹಯೋಗದಲ್ಲಿ ನಡೆದ ಪುರುಷ ಮತ್ತು ಮಹಿಳಾ ವಿಭಾಗ 7-ಎ ಸೈಡ್ 22ನೇ ರಾಷ್ಟ್ರ ಹಾಗೂ ಅಂತರಾಷ್ಟ್ರ ಮಟ್ಟದ ಪುಟ್ ಬಾಲ್ ಪಂದ್ಯಾವಳಿಗಳು ಜರುಗಿದವು.
ಇಲ್ಲಿನ ಪುಟ್ ಬಾಲ್ ಪಂದ್ಯಾವಳಿಗಳ ಕ್ರೀಡಾಪಟುಗಳ ಪಥಸಂಚಲನ ಹಳೆ ತಹಶೀಲ್ದಾರ ಕಚೇರಿಯಿಂದ ಪ್ರಾರಂಭಗೊಂಡು ನಗರದ ಪ್ರಮುಖ ರಸ್ತೆಯ ಮೂಲಕ ಸಂಚರಿಸಿತು. ಕ್ರೀಡಾಪಟುಗಳ ಪಥಸಂಚಲನದಲ್ಲಿ ಜಾಂಜ್ ಪಥಗಳ ಮೂಲಕ ಪಥಸಂಚಲನ ಸಾಗಿತು. ಪಥಸಂಚಲನದಲ್ಲಿ ಗೊಂಬೆಗಳ ಕುಣಿತ ಎದ್ದು ಕಾಣುತ್ತಿತ್ತು. ಬೇರೆ, ಬೇರೆ ರಾಜ್ಯಗಳಿಂದ ಆಗಮಿಸಿದ ಕ್ರೀಡಾಪಟುಗಳು ಜಾಂಜ್ ಪಥದಲ್ಲಿ ಕುಣಿದು ಕುಪ್ಪಳಿಸುತ್ತಿದ್ದರು. ಕ್ರೀಡಾಪಟುಗಳ ಪಥಸಂಚಲನದಲ್ಲಿ ರಾಜಕೀಯ ನಾಯಕರುಗಳು ಹಾಗೂ ಕ್ರೀಡಾ ಅಭಿಮಾನಿಗಳು ಭಾಗಿಯಾಗಿದ್ದರು.