ರಾಣೆಬೆನ್ನೂರ

ರೋಗಗಳಿಗೆ ನೂರು ಓಷಧಿಗಿಂತಲು ಯೋಗವು ಒಂದೇ ದಿವ್ಯ ಓಷಧ: ಮಾರಿಹಾಳ

ರೋಗಗಳಿಗೆ ನೂರು ಓಷಧಿಗಿಂತಲು ಯೋಗವು ಒಂದೇ ದಿವ್ಯ ಓಷಧ: ಮಾರಿಹಾಳ

ರಾಣೇಬೆನ್ನೂರು 22: ಪತಂಜಲಿ ಮಹರ್ಷಿಗಳು ವಿಶ್ವಕ್ಕೆ ಯೋಗವೆಂಬ ಮಹಾಶಕ್ತಿಯನ್ನು ಕೊಟ್ಟಿದ್ದಾರೆ, ಇದರಿಂದಾಗಿ ಜಗತ್ತು ಆರೋಗ್ಯದಿಂದಿರಲು ಸಾಧ್ಯವಿದೆ. ಮಾನಸಿಕ, ಆಧ್ಯಾತ್ಮಿಕ ಮತ್ತು ದೈಹಿಕ ಸದೃಢ ಆರೋಗ್ಯಕ್ಕೆ ಯೋಗ ಅವಶ್ಯವಾಗಿದೆ. ನೂರು ಓಷಧಿಗಿಂತಲು ಆರೋಗ್ಯದ ದೃಷ್ಟಿಯಿಂದ ಯೋಗವು ಒಂದು ದಿವ್ಯ ಓಷಧಿವಾಗಿದೆ ಎಂದು ಯೋಗಶಿಕ್ಷಕರಾದ ಅಶೋಕ ಮಾರಿಹಾಳ ಅಭಿಪ್ರಾಯಪಟ್ಟರು. 

ಅವರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ್ಘ 2, ರೋವರ​‍್ಸ‌-ರೇಂಜರ​‍್ಸ‌, ದೈಹಿಕ ಶಿಕ್ಷಣ ವಿಭಾಗ ಹಾಗೂ ಐಕ್ಯೂಏಸಿ ವತಿಯಿಂದ ಆಯೋಜಿಸಲಾದ “7ನೇ ಅಂತರರಾಷ್ಟ್ರೀಯ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಕಲುಷಿತ ವಾತಾವರಣದಲ್ಲಿ ಸಮಾಜದ ಜನರು ಯೋಗಪರಂಪರೆಯನ್ನು ಮುಂದುವರೆಸುಕೊಂಡು ಹೋಗದಿದ್ದರೆ ಸ್ವಾಸ್ಥತೆ ಸಾಧ್ಯವಿಲ್ಲ. ವಿಶ್ವದ 175 ರಾಷ್ಟ್ರಗಳು ಯೋಗವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಶಾಂತಿಯ ಬದುಕು ನಡೆಸಿಕೊಂಡು ಹೊಗುತ್ತಿದ್ದಾರೆ. ಯೋಗಕ್ಕೆ ಐದು ಸಾವಿರ ವರ್ಷದ ಇತಿಹಾಸವಿದೆ. ಯೋಗವು ಕೇವಲ ವ್ಯಾಯಾಮವಲ್ಲ ಯೋಗವು ಸಮರಸ ಜೀವನವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.        ಪ್ರಾಂಶುಪಾಲರಾದ ಎಲ್‌.ವಿ.ಸಂಗಳದ ಮಾತನಾಡಿ,  ಯೋಗ ಕೇವಲ ಕೆಲ ಮತ, ಧರ್ಮ ಪಂಗಡದವರಿಗೆ ಸೀಮಿತವಾಗಲಾರದೆ ಸಕಲ ಮಾನವ ಜನಾಂಗಕ್ಕೆ ಅವಶ್ಯಕವಾಗಿದೆ. ಬದಲಾಗುತ್ತಿರುವ ಜೀವನ ಶೈಲಿಗೆ ಯೋಗಬೇಕೇ ಬೇಕು ಎಂದರು.  

ಎನ್‌ಎಸ್‌ಎಸ್ ಅಧಿಕಾರಿ ಡಾ.ಅರುಣಕುಮಾರ ಚಂದನ್ ಅವರು  ಸ್ವಾಗತಿಸಿ, ಶರೀರದ ಕೋಶಗಳು ಕ್ರೀಯಾಶೀಲವಾಗಬೇಕು, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಮಾನಸಿಕ ಖಿನ್ನತೆ ಮತ್ತು ಕ್ಯಾನ್ಸರ್ ಇನ್ನಿತರ ರೋಗಗಳಿಂದ ಮುಕ್ತರಾಗಬೇಕಾದರೆ ಪ್ರತಿನಿತ್ಯದ ಯೋಗ ಬಹುಮುಖ್ಯ ಎಂದರು. ಡಾ.ಸಿದ್ದಲಿಂಗಮ್ಮ ಬಿ.ಜಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಏಳು ವರ್ಷಗಳಿಂದ ಭಾರತೀಯ ಪರಂಪರೆಯ ಯೋಗವನ್ನು ಅಂತರರಾಷ್ಟ್ರೀಯ ದಿನವನ್ನಾಗಿ ಮಾಡಿರುವುದು ನಮ್ಮೆಲ್ಲರ ಹೆಮ್ಮೆ ಎಂದರು. ನಂತರ ಯೋಗ ಶಿಕ್ಷಕರಾದ ಶೋಕ ಮಾರಿಹಾಳ ಅವರು ಯೋಗದ ಪ್ರಾತ್ಯಕ್ಷಿಕೆ ನಡೆಸಿದರು. ಕಾಲೇಜಿನ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಪ್ರಾತ್ಯಕ್ಷಿಕೆ ಹಾಗೂ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು. ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಭಾಗವಹಿಸಿದ್ದರು. ಕೊನೆಯಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ರಾಘವೇಂದ್ರ ಕೆ. ವಂದಿಸಿದರು.   

ಡಾ.ಎಲ್‌.ಎಮ್‌. ಪೂಜಾರ, ಡಾ.ಶೋಭಾ ಸಾವಕಾರ, ರವಿಕುಮಾರ ನಾಯಕ, ಡಾ.ಎಸ್‌.ಕೆ.ಪಾಟೀಲ, ರಾಜಶೇಖರ ಚಕ್ಕಿ, ಸುನೀಲ ಎಂ.ಎಚ್‌., ಎಸ್‌.ಎಂ.ಸೀತಾಳದ, ಹನುಮಂತಗೌಡ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ