ರಾಷ್ಟ್ರೀಯ

ಸ್ತ್ರೀಯರಿಗಾಗಿ ಜಗತ್ತನ್ನು ಸುರಕ್ಷಿತವಾಗಿಸಿ : ಉಪ ರಾಷ್ಟ್ರಪತಿ ಕರೆ

ಸ್ತ್ರೀಯರಿಗಾಗಿ ಜಗತ್ತನ್ನು ಸುರಕ್ಷಿತವಾಗಿಸಿ : ಉಪ ರಾಷ್ಟ್ರಪತಿ ಕರೆ

ನವದೆಹಲಿ, ನವೆಂಬರ್ 25: ಅಂತಾರಾಷ್ಟ್ರೀಯ ಮಹಿಳಾ ಹಿಂಸಾಚಾರ ಪ್ರತಿಭಟನಾ ದಿನದಂದು ಮಹಿಳೆಯರಿಗಾಗಿ ಜಗತ್ತನ್ನು ಸುರಕ್ಷಿತವಾಗಿಸಲು ಉಪಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಕರೆ ನೀಡಿದ್ದಾರೆ.

ಈ ಕುರಿತು ಬುಧವಾರ ಸಂದೇಶ ನೀಡಿರುವ ನಾಯ್ಡು, ಪ್ರತಿಯೊಬ್ಬರೂ ಮಹಿಳೆಯರಿಗೆ ರಕ್ಷಣೆಯ ಪ್ರಮಾಣವಚನ ಸ್ವೀಕರಿಸಬೇಕು ಎಂದು ಹೇಳಿದ್ದಾರೆ.

ಸಂಸ್ಕೃತ ನುಡಿಗಟ್ಟುಗಳನ್ನು ಉಲ್ಲೇಖಿಸಿ,  "ಯತ್ರ ನಾರ್ಯಸ್ತು ಪೂಜ್ಯಂತೆ, ರಮಂತೆ ತತ್ರ ದೇವತಾಃ” ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಲಿಂಗ ತಾರತಮ್ಯವನ್ನು ಕೊನೆಗೊಳಿಸುವುದು ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸುವ ಅಗತ್ಯವಿದೆ. ಕೊರೋನಾ ಸಮಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವು ನಾಗರಿಕ ಸಮಾಜಕ್ಕೆ ಕಳಂಕವಾಗಿದೆ. ಈ ಸಂದರ್ಭದಲ್ಲಿ, ಸಮಾಜ, ಕುಟುಂಬ ಮತ್ತು ಕ್ಷೇತ್ರದಲ್ಲಿ ಮಹಿಳೆಯರ ಸ್ವಾತಂತ್ರ್ಯ ಮತ್ತು ಪ್ರತಿಭೆಯನ್ನು ಗೌರವಿಸುವುದಾಗಿ ಎಲ್ಲರೂ ಪ್ರತಿಜ್ಞೆ ಮಾಡಬೇಕೆಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಆಗ್ರಹಿಸಿದ್ದಾರೆ.

ಸುದ್ದಿ ಓದಿ