ಬೈಲಹೊಂಗಲ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಬೈಲಹೊಂಗಲ 09: ಸ್ಥಳೀಯ ತಾಲೂಕ ಪಂಚಾಯತ ಸಭಾಭವನದಲ್ಲಿ ಕರ್ನಾಟಕ ಜೈ ಭೀಮ ಸಂಘರ್ಷ ಸಮಿತಿ ಅಂಬೇಡ್ಕರ್ ವಾಣಿ ಇವರ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವದರ ಮೂಲಕ ತಾಲೂಕ ಪಂಚಾಯತ ಅಧ್ಯಕ್ಷೆ ಪಾರ್ವತಿ ಸಂಗಪ್ಪ ನರೇಂದ್ರ ಚಾಲನೆ ನೀಡಿದರು. ಉಪನ್ಯಾಸಕಿ ಲಲಿತಾ ಹೊಸಮನಿ ಮಾತನಾಡಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರತಿ ವರ್ಷ ಮಾರ್ಚ್ 08ರಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಈ ದಿನದಂದು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯಲಾಗುತ್ತದೆ. ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ, ಅದು ರಾಷ್ಟ್ರೀಯ, ಜನಾಂಗೀಯ, ಭಾಷಾವಾರು, ಸಾಂಸ್ಕ್ರತಿಕ, ಆರ್ಥಿಕ ಅಥವಾ ರಾಜಕೀಯ ಕ್ಷೇತ್ರವಾಗಲಿ, ಎಲ್ಲಾದರಲ್ಲೂ ತಮ್ಮದೇ ಆದ ಛಾಪನ್ನ ಮೂಡಿಸಿದ್ದಾರೆ. ಮಹಿಳೆಯರ ಈ ಪ್ರಗತಿಯನ್ನು ಗುರುತಿಸಿ ಈ ದಿನವನ್ನು ಅವರಿಗೆ ಅರ್ಪಿಸಲಾಗಿದೆ. 1975ರ ಅಂತರಾಷ್ಟ್ರೀಯ ಮಹಿಳೆಯರ ದಿನದ ಸಮಯದಲ್ಲಿ, ಮಾರ್ಚ್ 08 ರಂದು ಸಂಯುಕ್ತ ರಾಷ್ಟ್ರಗಳು ಮಹಿಳಾ ದಿನವನ್ನ ಆಚರಿಸಲು ಆರಂಭಿಸಿದವು ಎಂದರು.

ಉಪನ್ಯಾಸ ಎಲ್ ಜಿ ಪಾಟೀಲ ಮಾತನಾಡಿ ವರ್ಷದ ನಂತರ, 1977ರಲ್ಲಿ, ದಿ ಜನರಲ್ ಅಸ್ಸೆಂಬ್ಲಿ ಮಹಿಳೆರ ಹಕ್ಕು ಮತ್ತು ಶಾಂತಿ ಸ್ಥಾಪನೆಯನ್ನು ಆಯಾ ದೇಶದ ಸದಸ್ಯರು ಗಮನಿಸಿ ತಮ್ಮ ದೇಶದ ಐತಿಹಾಸಿಕ ಮತ್ತು ರಾಷ್ಟ್ರೀಯ ಸಂಪ್ರದಾಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳುವಂತೆ ಕರೆ ನೀಡಿತು. 

ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ನಯಾನಗರದ ಗುರು ಅಭಿನವ ಸಿದ್ಧಲಿಂಗ ಮಹಾಸ್ವಾಮಿಗಳು, ಉದ್ಘಾಟಕರು ಪುರಸಭೆ ಅಧ್ಯಕ್ಷ. ಬಾಬು ಕುಡಸೋಮನ್ನವರ, ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ತಾ ಪಂ ಅಧ್ಯಕ್ಷೆ ಪಾರ್ವತಿ ನರೇಂದ್ರ, ಪುರಸಭೆ ಸದಸ್ಯ ಗುರು ಮೆಟಗುಡ್ಡ, ಅಧ್ಯಕ್ಷತೆ  ರಾಜ್ಯಾಧ್ಯಕ್ಷ ರಮೇಶ ರಾಯಪ್ಪಗೋಳ, ಉಪನ್ಯಾಸ ಲಲಿತಾ ಹೊಸಮನಿ, ಎಲ್ ಜಿ ಪಾಟೀಲ, ತಹಶೀಲ್ದಾರ ಬಸವರಾಜ ನಾಗರಾಳ, ಎ ಪಿ ಎಮ್ ಸಿ ಅಧ್ಯಕ್ಷ ಭರಮಣ್ಣ ಸತ್ಯೆನ್ನವರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ ಉಣ್ಣಿ, ಸಿಡಿಪಿಓ ರೇವತಿ ಹೊಸಮಠ, ಮಾದಿಗ ಸಮಾಜದ ಮುಖಂಡ ಯಲ್ಲಪ್ಪ ಹುದಲಿ, ಕಂದಾಯ ನೀರಿಕ್ಷಕ ರಮೇಶ ಕೋಲಕಾರ, ತಾಲೂಕ ಅಧ್ಯಕ್ಷ ಪ್ರಕಾಶ ಮಾದಿಗರ, ಸುರೇಶ ಕೆಳಗೇರಿ, ರುದ್ರಪ್ಪ ಮುಂದಿನಮನಿ, ಕಾರ್ಯಾಧ್ಯಕ್ಷ ಫಕೀರಪ್ಪ ಹೊಸಮನಿ, ರಾಜ್ಯ ವಕ್ತಾರ ನಾಗಪ್ಪ ಬೈಲಪ್ಪಗೋಳ,  ರುದ್ರಪ್ಪ ನಿಂಗನ್ನವರ ಮನೋಜ ಕೆಳಗೇರಿ, ಮಹಿಳಾ ಕಾರ್ಯಾಧ್ಯಕ್ಷ ಶಿವಗಂಗಾ ಗಡದವರ,  ಗೀತಾ ಚಿಕ್ಕಣ್ಣವರ, ಕಮಲವ್ವ ಕರೆಮ್ಮನವರ ಇದ್ದರು.

ಸುದ್ದಿ ಓದಿ