ಬೈಲಹೊಂಗಲ

ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ: ಲಲಿತಾ

ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ: ಲಲಿತಾ
ಪಟ್ಟಣದ ತಾಪಂ.ಸಭಾಭವನದಲ್ಲಿ ಕರ್ನಾಟಕ ಜೈ ಭೀಮ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾಣಿ ಇವರ ಸಂಯುಕ್ತ ಆಶ್ರಯದಲ್ಲಿ ಅಂತರ

ಬೈಲಹೊಂಗಲ09: ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ ಎಂದು ಉಪನ್ಯಾಸಕಿ ಲಲಿತಾ ಹೊಸಮನಿ ಹೇಳಿದರು.ಪಟ್ಟಣದ ತಾಪಂ.ಸಭಾಭವನದಲ್ಲಿ  ಕರ್ನಾಟಕ ಜೈ ಭೀಮ ಸಂಘರ್ಷ ಸಮಿತಿ ಅಂಬೇಡ್ಕರ್ ವಾಣಿ ಇವರ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರತಿ ವರ್ಷ ಮಾ. 08ರಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಈ ದಿನದಂದು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯಲಾಗುತ್ತದೆ.  ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ "ಅಂತರಾಷ್ಟ್ರೀಯ ಮಹಿಳೆಯರ ದಿನ" ವನ್ನು ಆಚರಿಸುತ್ತಾರೆ. ಮಹಿಳೆಯರ ಈ ಪ್ರಗತಿಯನ್ನು ಗುರುತಿಸಿ ಈ ದಿನವನ್ನು ಅವರಿಗೆ ಅರ್ಪಿಸಲಾಗಿದೆ. 1975ರ "ಅಂತರಾಷ್ಟ್ರೀಯ ಮಹಿಳೆಯರ ದಿನ"ದ ಸಮಯದಲ್ಲಿ, ಮಾ. 08 ರಂದು ಸಂಯುಕ್ತ ರಾಷ್ಟ ್ರಗಳು ಮಹಿಳಾ ದಿನವನ್ನ ಆಚರಿಸಲು ಆರಂಭಿಸಿದವು ಎಂದರು. ತಾಪಂ. ಅಧ್ಯಕ್ಷೆ ಪಾರ್ವತಿ ಸಂಗಪ್ಪ ನರೇಂದ್ರ  ಕಾರ್ಯಕ್ರಮ  ಉದ್ಘಾಟಿಸಿದರು.     ಉಪನ್ಯಾಸಕ ಎಲ್ ಜಿ ಪಾಟೀಲ ಮಾತನಾಡಿದರು.   ನಯಾನಗರದ    ಗುರು ಅಭಿನವ ಸಿಧ್ದಲಿಂಗ ಸ್ವಾಮಿಜಿ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು. 

ತಹಶೀಲ್ದಾರ ಬಸವರಾಜ ನಾಗರಾಳ, ಪುರಸಭೆ ಅಧ್ಯಕ್ಷ ಬಾಬು ಕುಡಸೋಮನ್ನವರ, ಸದಸ್ಯ ಗುರು ಮೆಟಗುಡ್ಡ,  ರಮೇಶ ರಾಯಪ್ಪಗೋಳ,  ಎ ಪಿ ಎಮ್ ಸಿ ಅಧ್ಯಕ್ಷ ಭರಮಣ್ಣ ಸತ್ಯೆನ್ನವರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ ಉಣ್ಣಿ, ಸಿಡಿಪಿಓ ರೇವತಿ ಹೊಸಮಠ,  ಯಲ್ಲಪ್ಪ ಹುದಲಿ, ರಮೇಶ ಕೋಲಕಾರ, ಪ್ರಕಾಶ ಮಾದಿಗರ, ಸುರೇಶ ಕೆಳಗೇರಿ, ಫಕೀರಪ್ಪ ಹೊಸಮನಿ,  ನಾಗಪ್ಪ ಬೈಲಪ್ಪಗೋಳ, ಮನೋಜ ಕೆಳಗೇರಿ, ಶಿವಗಂಗಾ ಗಡದವರ,  ಗೀತಾ ಚಿಕ್ಕಣ್ಣವರ, ಕಮಲವ್ವ ಕರೆಮ್ಮನವರ ಮತ್ತಿತರರು ಇದ್ದರು.

ಸುದ್ದಿ ಓದಿ