ಹೊಸಪೇಟೆ

30ರಂದು ಅಂತಾರಾಷ್ಟ್ರೀಯ ಭಾಷಾಂತರ ದಿನಾಚರಣೆ

30ರಂದು ಅಂತಾರಾಷ್ಟ್ರೀಯ ಭಾಷಾಂತರ ದಿನಾಚರಣೆ

ಹಂಪಿ 27: ಅಂತಾರಾಷ್ಟ್ರೀಯ ಭಾಷಾಂತರ ದಿನಾಚರಣೆಯ ಭಾಗವಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದ ಸುತ್ತಮುತ್ತಲು ಗುರುವಾರ ಮತ್ತು ಶುಕ್ರವಾರದಂದು ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಸ್ವಚ್ಛತಾ ಕಾರ್ಯವು ವಿಶ್ವವಿದ್ಯಾಲಯದ ತೋಟಗಾರಿಕೆ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದೊಂದಿಗೆ ನಡೆಯಿತು. ಇದರಲ್ಲಿ ವಿಭಾಗದ ಮುಖ್ಯಸ್ಥರು, ಸಂಶೋಧನಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಐಕ್ಯುಎಸಿ ಸಿಬ್ಬಂದಿಗಳು ಭಾಗವಹಿಸಿದ್ದರು.  

ದಿನಾಂಕ 30ರಂದು ನಡೆಯುವ ಅಂತಾರಾಷ್ಟ್ರೀಯ ಭಾಷಾಂತರ ದಿನಾಚರಣೆಯ ಸಂದರ್ಭದಲ್ಲಿ ಭಾಷಾಂತರ ಜಾಗೃತಿಯ ಭಾಗವಾಗಿ ವಿಶೇಷ ಉಪನ್ಯಾಸ ಮತ್ತು ವಿಚಾರಗೋಷ್ಠಿ ಏರಿ​‍್ಡಸಿದ್ದು, ಇದರಲ್ಲಿ ಡಾ. ಜಾಜಿ ದೇವೇಂದ್ರ​‍್ಪ ಸಹ ಪ್ರಾಧ್ಯಾಪಕರು, ಎಸ್‌.ಕೆ.ಎನ್‌.ಜಿ. ಕಾಲೇಜು, ಗಂಗಾವತಿ ಅವರು ‘ಭಾಷಾಂತರ ಕಲೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ವಿಭಾಗದ ಮುಖ್ಯಸ್ಥರಾದ ಡಾ. ಎ. ಮೋಹನ ಕುಂಟಾರ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.  

ಈ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ನಡೆಯುವ ವಿಚಾರ ಗೋಷ್ಠಿಯು ವೀನೀತಾ ಜೆ.ಎಂ. ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಈ ಗೋಷ್ಠಿಯಲ್ಲಿ ಕೆ. ಅನಂತ ಅವರು ‘ವೈಚಾರಿಕಾನುವಾದ’ ಕುರಿತು, ಮಂಜುನಾಥ ಕರಿಲಿಂಗಣ್ಣನವರ್ ‘ಕಾವ್ಯಾನವಾದ’ ಕುರಿತು, ಶ್ವೇತಾ ಬಾಳಿಯವರು ‘ಅನುಸೃಷ್ಟಿ’ ಕುರಿತು, ಮುಹಮ್ಮದ್ ಝೈನುದ್ದೀನ್ ಅವರು ‘ಗದ್ಯಾನುವಾದ’ ಎನ್ನುವ ವಿಷಯಗಳ ಕುರಿತು   ವಿಚಾರ ಮಂಡನೆ ಮಾಡಲಿದ್ದಾರೆ. 


ಸುದ್ದಿ ಓದಿ