ಜಗತ್ತಿನಾದ್ಯಂತ ಇಂದು ಅಂತಾರಾಷ್ಟ್ರೀಯ ಪುರುಷರ ದಿನಾಚರಣೆ..
ನವದೆಹಲಿ, ನವೆಂಬರ್ 19: ಪ್ರತಿ ವರ್ಷ ವಿಶ್ವ ಮಹಿಳಾ ದಿನಾಚರಣೆ ಆಚರಣೆ ಮಾಡುವಂತೆಯೇ ನ. 19
ರಂದು ಅಂತಾರಾಷ್ಟ್ರೀಯ ಪುರುಷರ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ.
ಪುರುಷರ ಆರೋಗ್ಯದ ಮೇಲೆ ಕೇಂದ್ರೀಕರಿಸಲು, ಮಹಿಳೆಯ ಜೊತೆ ಪುರುಷ ಹೊಂದಿರುವ ಸಂಬಂಧವನ್ನು ಸುಧಾರಿಸಲು, ದಿನನಿತ್ಯದ ಜೀವನದಲ್ಲಿ ಪುರುಷರ ಪಾತ್ರವನ್ನು ಎತ್ತಿ ಹಿಡಿಯಲು ಈ ದಿನ ಆಚರಿಸಲಾಗುತ್ತಿದೆ.
ಮಗ, ಗಂಡ, ವರ, ಅಜ್ಜ ಮತ್ತು ಇತರರ ತ್ಯಾಗ ಮತ್ತು ಕೊಡುಗೆಗಳನ್ನು ಹೇಳಲು ಅಂತಾರಾಷ್ಟ್ರೀಯ ಪುರುಷರ ದಿನ ಆಚರಿಸಲಾಗುತ್ತಿದೆ. ಪುರುಷರು ಮತ್ತು ಹುಡುಗರಿಗೆ ಉತ್ತಮ ಆರೋಗ್ಯ ಎನುವುದು ಈ ವರ್ಷದ ಧ್ಯೇಯ ವಾಕ್ಯವಾಗಿದೆ.
ಪ್ರತಿ ವರ್ಷ ವಿಶ್ವ ಮಹಿಳಾ ದಿನಾಚರಣೆ ಆಚರಣೆ ಮಾಡುವಂತೆಯೇ ಅದೆ ರೀತಿ, ಪುರುಷರ ದಿನಾಚರಣೆ ಕೂಡ ಆಚರಣೆ ಮಾಡಬೇಕು ಎನ್ನುವ ಕೂಗು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪುರುಷರ ದಿನಾಚರಣೆ ಆಚರಿಸಲಾಗುತ್ತಿದೆ. ಪುರುಷರು ಮಾಡುವ ತ್ಯಾಗಗಳನ್ನು ನೆನೆಯುವ ಉದ್ದೇಶ ಇಂದಿನ ದಿನಾಚರಣೆಯ ಭಾಗವಾಗಿದೆ.