ರಾಣೆಬೆನ್ನೂರ

ಅರಿವಿನ ಕೂರತೆಯಿಂದ ಹೆಣ್ಣುಮಕ್ಕಳ ಶೋಷಣೆ: ಜೆ.ಯೋಗೇಶ

ಅರಿವಿನ ಕೂರತೆಯಿಂದ ಹೆಣ್ಣುಮಕ್ಕಳ ಶೋಷಣೆ: ಜೆ.ಯೋಗೇಶ
ಗೋವಿಂದ ಬಡಾವಣೆ ತಾಂಡೆಯಲ್ಲಿ ನಡೆದ ಕಾನೂನು ಅರಿವು ನೆರವು ಶಿಬಿರ ಉದ್ಘಾಟಿಸಿದ ನ್ಯಾಯಾಧೀಶ ಯೂಗೇಶ.ಜೆ ಮಾತನಾಡಿದರು.

ರಾಣೇಬೆನ್ನೂರು 12:  ಮಹಿಳೆ ಈ ದೇಶದ ಮತ್ತು ನಾಡಿನ ಪ್ರತಿಯೂಂದು ಕುಟುಂಬದ ಕಣ್ಣು ನಮ್ಮ ಸಂಸ್ಕ್ರುತಿ ಪರಂಪರೆಯಲ್ಲಿ ಭಾರತೀಯ ಸಮಾಜವು ವೇಧ ಇತಿಹಾಸ ಕಾಲಗಳಿಂದಲೂ ಪೂಜ್ಯ ಭಾವನೆಯಿಂದ ಕಾಣುತ್ತಾ ಬಂದಿದೆ ಎಂದು ಪ್ರದಾನ ದಿವಾಣಿ ನ್ಯಾಯಾಧೀಶರು, ತಾಲೂಕಾ ಕಾನೂನು ಸೇವೆಗಳ ಸಮಿತಿಯ ಕಾರ್ಯದರ್ಶಿಗಳಾದ ಯೋಗೇಶ.ಜೆ ಹೇಳಿದರು.  

ಅವರು ಸೋಮವಾರ ಸಮೀಪದ ಗೋವಿಂದ ಬಡಾವಣೆ ತಾಂಡಾ ಸೇವಾಲಾಲ್ ದೇವಸ್ಥಾನ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಗ್ರಾ.ಪಂ ದೇವಸ್ಥಾನ ಸಮಿತಿ  ಆಯೋಜಿಸಿದ್ದ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ಶಿಭಿರ ಉದ್ಘಾಟಿಸಿ ಮಾತನಾಡಿದರು. 

ಹೆಣ್ಣಿನ ಶೋಷಣೆ ತಪ್ಪಿಸಲು ಹತ್ತು ಹಲವು ಕಾನೂನುಗಳು ಜಾರಿಯಲ್ಲಿವೆ ಅವುಗಳ ಕುರಿತಂತೆ ಸರಿಯಾದ ರಿತಿಯಲ್ಲಿ ಮಾಹಿತಿ ಮತ್ತು ಮಾರ್ಗದರ್ಶನದ ಕೂರತೆಯಿಂದಾಗಿ ಪರಿಪಾಲನೆಯಾಗುತ್ತಿಲ್ಲ ತಾಯಿಯ ಗರ್ಭದಲ್ಲಿರುವಾಗಲೇ ಹೆಣ್ಣು ಮಗುವಿನ ಶೋಷಣೆ ಆರಂಭವಾಗುತ್ತಿದೆ ವಿಶೇಷವಾಗಿ ಗ್ರಾಮಾಂತರ ಪ್ರದೇಶದಲ್ಲಿ ಇಂತಹ ಹೀನ ಮತ್ತು ಮನಕಲಕುವ ಘಟನೆಗಳು ನಡೆಯುತ್ತಿರುವುದರಿಂದ ಹೆಣ್ಣು ಸಂತತಿ ಸೂರಗುತ್ತಲಿದೆ ಎಂದು ವಿಷಾದಿಸಿದ ನ್ಯಾಯಾಧೀಶರು, ಹೆಣ್ಣು-ಗಂಡು ಎನ್ನುವ ಭೇಧ, ಭಾವ, ತಾರತಮ್ಯ ಬೇಡ ಎಂದ ಅವರು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಕಾನೂನು ಪ್ರಾಧಿಕಾರವು ನ್ಯಾಯದಿಂದ ವಂಚಿತರಾದವರಿಗಾಗಿ ಉಚಿತ ಕಾನೂನು ಅರಿವಿನ ಮೂಲಕ ನೇರವು ನೀಡಿ ಅವರಿಗೆ ನ್ಯಾಯ ದೂರಕಿಸುವ ಪವಿತ್ರವಾದ ಕಾರ್ಯವು ಮಾಡುತ್ತಲಿದೆ ಪ್ರತಿಯೂಬ್ಬರು ಪ್ರಯೋಜನ ಪಡೆಯಲು ಮುಂದಾಗಬೇಕೆಂದು ಬಂಜಾರ ಸಮುದಾಯಕ್ಕೆ ಕರೆ ನೀಡಿದರು. 

ಮುಖ್ಯ ಅಥಿತಿಯಾಗಿದ್ದ ವಕೀಲರ ಸಂಘದ ಅಧ್ಯಕ್ಷ ಬಿ.ಹೆಚ್‌. ಬುರಡಿಕಟ್ಟಿ ಅವರು ಜನ ಸಾಮಾನ್ಯರಿಗೆ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹ ಕಾನೂನಿನ ಸೇವೆ ದೂರಕಿಸುವ ಉದ್ದೇಶ ಪ್ರಾಧಿಕಾರ ಹೂಂದಿದೆ. ವಕೀಲರ ಸಂಘದ ಜೂತೆಗೆ ಕಾನೂನು ಸೇವಾಸಮಿತಿಯು ಇಂತಹ ಅರಿವು ಜಾಗೃತಿ ಮೂಡಿಸುತ್ತಲಿದೆ ಎಲ್ಲರು ಕನಿಷ್ಠ ಕಾನೂನಿನ ಜ್ಞಾನ ಹೊಂದಿದಾಗ ಮಾತ್ರ ಸಮಾಜದಲ್ಲಿ ಶಾಂತಿ, ನೆಮ್ಮದಿ ಬದುಕನ್ನು ಸಾಗಿಸಲು ಸಾಧ್ಯವಾಗುವುದು ಎಂದರು. ಉಪನ್ಯಾಸದಲ್ಲಿ ನ್ಯಾಯವಾದಿ, ಅನ್ನಪೂರ್ಣ ಜಕ್ಕಣ್ಣನವರ ದಿನಾಚರಣೆ ಮಹತ್ವ ಬಾಲ್ಯ ವಿವಾಹ ಕಾಯ್ದೆ ಹಾಗೂ ಹಲಗೇರಿ ಠಾಣಾ ಪಿ.ಎಸ್‌.ಐ ಕೆ.ಸಿ.ಕೋಮಲಾಚಾರ ಅವರು ಪೋಸ್ಕೋ ಕಾಯ್ದೆ ಕುರಿತು ಸಾಧ್ಯಾಂತವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಹುತನಕಟ್ಟಿ ಗ್ರಾ.ಪಂ ಅಧ್ಯಕ್ಷ ಪರಮೇಶ ಬಿ. ಲಮಾಣಿ ಅವರು ವಹಿಸಿದ್ದರು,  ಶಿಭಿರದಲ್ಲಿ ಭಾಗವಹಿಸಿದ್ದ ಎಪಿಎಂಸಿ ಮಾಜಿ ಸದಸ್ಯ ರಾಮಣ್ಣ ನಾಯಕ, ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮ ನಿರ್ದೇಶಕ ರಮೇಶ ಡಿ. ನಾಯಕ, ಸಂಘದ ಉಪಾಧ್ಯಕ್ಷ ಕುಮಾರ ಮಡಿವಾಳರ,  ಕಾರ್ಯದರ್ಶಿ ಗಣೇಶ ಮುಂಡಾಸದ, ಪಿಡಿಓ ಗಾಯತ್ರಿ ಹೂಸಂಗಡಿ, ಗ್ರಾ.ಪಂ ಉಪಾಧ್ಯಕ್ಷೆ ಲಕ್ಷ್ಮಿ ಅಶೋಕ ಲಮಾಣಿ, ಮೊದಲಾದವರು ಮಾತನಾಡಿದರು. ಅಂಜಲಿ ಜಿ.ಆರ್ ಪ್ರಾರ್ಥಿಸಿದರು, ಶಿಕ್ಷಕ ಬಿರೇಶ ಆರ್‌.ಎಲ್ ಸ್ವಾಗತಿಸಿದರು. ನ್ಯಾಯವಾದಿಗಳಾದ ಚಂದ್ರು ಕರೇಗೌಡ್ರ ನಿರೂಪಿಸಿ ಉಮೇಶ ಕೂನಬೇವು ವಂದಿಸಿದರು. 

ಸುದ್ದಿ ಓದಿ